For Quick Alerts
ALLOW NOTIFICATIONS  
For Daily Alerts

ಮೃಷ್ಟಾನ್ನ ಇದ್ದರೂ ಮನ ಸೆಳೆಯುತ್ತದೆ ಮೊಸರನ್ನ ಕಡೆ!

|

ಈ ದಿನ ಮಧ್ಯಾಹ್ನದ ಅಡುಗೆಗೆ ಸ್ವಲ್ಪ ಆರೋಗ್ಯಕರವಾದ ತಿಂಡಿಯನ್ನು ಮಾಡುವ ಆಲೋಚನೆ ನಿಮಗಿದೆಯೇ. ನಾವು ನಿಮಗಾಗಿ ಇಂದು ಶೀಘ್ರವಾಗಿ ಕೆಲವೇ ಹಂತಗಳಲ್ಲಿ ತಯಾರಿಸಲಾಗುವ ಮೊಸರನ್ನದ ವಿಧವನ್ನು ನಿಮಗಿಂದು ತಿಳಿಸಲಿದ್ದೇವೆ. ಇದಕ್ಕೆ ಬೇಕಾಗುವ ಎಲ್ಲಾ ಪದಾರ್ಥಗಳು ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುತ್ತದೆ.

ಮೊಸರನ್ನದಲ್ಲಿರುವ ಪೋಷಕಾಂಶಗಳು ಎಂತಹವರಿಗಾದರು ಬೇಕೇ ಬೇಕು. ಇದರಲ್ಲಿ ಎಣ್ಣೆ ಕಮ್ಮಿ, ರುಚಿ ಮತ್ತು ಆರೋಗ್ಯ ಜಾಸ್ತಿ ಅದು ಇದರ ಹೆಚ್ಚುಗಾರಿಕೆ!. ಆದ್ದರಿಂದ ಇಂದು ಮಧ್ಯಾಹ್ನದ ಊಟಕ್ಕೆ ಒಂದು ಆಲ್-ಇನ್ ಒನ್ ಲಂಚ್ ರೆಸಿಪಿಯನ್ನು ಊಹಿಸಿಕೊಳ್ಳಿ. ನಿಮ್ಮ ಮಗುವು ಸಹ ಇದನ್ನು ಸವಿದ ಕೂಡಲೆ ರುಚಿಕರವಾಗಿದೆ ಎಂದು ಹೇಳುತ್ತದೆ!

Quick Curd Rice In Five Simple Steps

ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 5 ನಿಮಿಷ
*ಅಡುಗೆಗೆ ತಗುಲುವ ಸಮಯ: 15 ನಿಮಿಷ

ತಯಾರಿಸುವ ವಿಧಾನ
1. ಒಗ್ಗರೆಣ್ಣೆಗೆ: ಒಂದು ದಪ್ಪ ತಳವಿರುವ ಪಾತ್ರೆಯನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಕಾಯಿಸಿ, ಅದರಲ್ಲಿ ಕರಿಬೇವು ಸೊಪ್ಪನ್ನು ಹಾಕಿ. ಇದು ಕರಿಯಲ್ಪಟ್ಟಾಗ, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಇದು ಸೀದು ಹೋಗದಂತೆ ಅಗಾಗ ಅದನ್ನು ತಿರುವಿಕೊಡಿ.
2. ಸಾಸಿವೆ ಬೀಜಗಳನ್ನು, ಕೆಂಪು ಮೆಣಸಿನಕಾಯಿ, ಜೀರಿಗೆ, ಕಡಲೆ ಬೇಳೆ/ಉದ್ದಿನ ಬೇಳೆ, ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಒಂದು ನಿಮಿಷ ಉರಿಯಿರಿ. ನಂತರ ಇದಕ್ಕೆ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.


3. ಕುಕ್ಕರಿನಲ್ಲಿ ಅಕ್ಕಿಯನ್ನು ತೊಳೆದು ಹಾಕಿ, ಚೆನ್ನಾಗಿ ಬೇಯಿಸಿ. ಎರಡು ವಿಷಲ್ ಬರುವವರೆಗೆ ಬಿಡಿ. ಇದು ಹೆಚ್ಚು ಬೇಯದೆ ಇರುವಂತೆ ಜಾಗರೂಕತೆಯನ್ನು ವಹಿಸಿ. ಇದಕ್ಕೆ ಉಪ್ಪನ್ನು ಬೆರೆಸಿ ತಣ್ಣಗಾಗಲು ಬಿಡಿ. ಇದಕ್ಕೆ ಅಗತ್ಯವಾಗಿರುವಷ್ಟು ಹಾಲನ್ನು ಹಾಕಿ, ತುಂಬಾ ನೀರು ನೀರಿನಂತೆ ಆಗಲು ಬಿಡಬೇಡಿ.
4. ಮೊಸರನ್ನು ಕಡೆಯಿರಿ. ಆ ಮೊಸರನ್ನು ಅನ್ನದ ಮೇಲೆ ಹಾಕಿ, ಕಲೆಸಿಕೊಡಿ.
5. ಅನ್ನಕ್ಕೆ ಒಗ್ಗರೆಣ್ಣೆಯನ್ನು ಬೆರೆಸಿ. ಚೆನ್ನಾಗಿ ಮಿಶ್ರಣ ಮಾಡಿ. ಇದರ ಮೇಲೆ ದಾಳಿಂಬೆ ಬೀಜ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ. ಅದರ ಮೇಲೆ ಜೀರಿಗೆ ಪುಡಿಯನ್ನು ಚಿಮುಕಿಸಿ. ಈಗ ನಿಮ್ಮ ಮುಂದೆ ರುಚಿಕರವಾದ ಮೊಸರನ್ನ ತಯಾರಾಗಿರುತ್ತದೆ.

ಪೋಷಕಾಂಶದ ಪ್ರಮಾಣ
ಮೊಸರಿನಲ್ಲಿ ಆರೋಗ್ಯಕರವಾದ ಅಂಶಗಳು ಹೆಚ್ಚಾಗಿರುತ್ತವೆ. ಇವುಗಳಲ್ಲಿ ಪ್ರೋಟಿನ್ ಮತ್ತು ವಿಟಮಿನ್‍ಗಳು ಅಧಿಕವಾಗಿರುತ್ತವೆ. ಇದಕ್ಕೆ ಹಾಕಲಾಗುವ ದಾಳಿಂಬೆ ಬೀಜಗಳು ಸಹ ಇದರ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಅದರಲ್ಲಿ ಶಕ್ತಿಯನ್ನು ಸಹ ಹೆಚ್ಚಿಸಿ, ವಿಟಮಿನ್‍ಗಳ ಕೊಡುಗೆಯನ್ನು ನೀಡುತ್ತದೆ. ಒಟ್ಟಾರೆಯಾಗಿ, ಇದು ಒಂದು ಪೋಷಕಾಂಶಭರಿತವಾದ ಆಹಾರವಾಗಿರುತ್ತದೆ.

ಸಲಹೆ
ಈ ಮೊಸರನ್ನವು ಮತ್ತಷ್ಟು ರುಚಿಕರವಾಗಲು ಇದಕ್ಕೆ ಹಸಿರು ದ್ರಾಕ್ಷಿಗಳನ್ನು ಸಹ ಹಾಕಬಹುದು.

English summary

Quick Curd Rice In Five Simple Steps

Planning to switch to a healthier version for lunch today. This simple and quick to prepare curd rice recipe is the one you can smoothly opt for. With all the ingredients at an easy access in the kitchen, this is a sure shot recipe to lay your hands on. Imagine an all-in-one lunch recipe just a few steps away. even your little one is sure to shout yummy!
X
Desktop Bottom Promotion