For Quick Alerts
ALLOW NOTIFICATIONS  
For Daily Alerts

ಚಿಕನ್‌ಗುನ್ಯಾ ತಡೆಗೆ ಬೇವಿನ ಚೋಕಾ ರೆಸಿಪಿ!

|

ಚಿಕ್ಕಂದಿನಲ್ಲಿ ನಮ್ಮನ್ನು ಕಾಡಿದ ಹೆಚ್ಚು ಭಯಾನಕ ರೋಗವೆಂದೇ ಖ್ಯಾತಿವೆತ್ತ ಚಿಕನ್ ಗುನ್ಯಾ ಸಮೀಪಿಸುತ್ತಿದೆ. ಜೀವನದಲ್ಲಿ ಒಮ್ಮೆಯಾದರೂ ಈ ರೋಗ ಬಂದೇ ಬರುತ್ತದೆ ಎಂಬುದು ನಾಣ್ಣುಡಿ.

ಎಳೆಯ ವಯಸ್ಸಿನವರಲ್ಲಿ ರೋಗ ನಿರೋಧಕ ಸಾಮರ್ಥ್ಯ ಅಧಿಕವಾದ್ದರಿಂದ ಈ ರೋಗ ತೀವ್ರ ಹಾನಿಯನ್ನು ಉಂಟುಮಾಡುವುದಿಲ್ಲ. ಆದರೆ ವಯಸ್ಸಾದಂತೆ ಎಳೆತನದಲ್ಲಿದ್ದ ರೋಗನಿರೋಧಕ ಸಾಮರ್ಥ್ಯ ನಮ್ಮಲ್ಲಿ ಕೊಂಚ ಕಡಿಮೆಯಾಗುತ್ತದೆ ಇದರಿಂದ ಚಿಕನ್ ಗುನ್ಯಾ ತುಸು ಹೆಚ್ಚೇ ಹಾನಿಯನ್ನು ನಮಗೆ ಉಂಟು ಮಾಡುತ್ತದೆ.

 Neem Chokha Recipe For Chicken Pox Prevention

ಆದರೆ ಚಿಂತೆ ಬೇಡ ಈ ರೋಗವನ್ನು ಮಟ್ಟ ಹಾಕಲೆಂದೇ ಚಿಕನ್ ಗುನ್ಯಾಕ್ಕೆ ರಾಮಬಾಣವಾಗಿರುವ ಬೇವಿನೆಲೆಯ ವಿಶೇಷ ಚೋಕಾ ರೆಸಿಪಿಯನ್ನು ನಿಮಗಾಗಿ ತಂದಿದ್ದೇವೆ. ಹಿಸುಕಿದ ಆಲೂಗಡ್ಡೆ ಮತ್ತು ಬೇವಿನೆಲೆಗಳಿಂದ ಕೂಡಿದ ಈ ರೆಸಿಪಿ ನಿಮ್ಮ ರೋಗವನ್ನು ದೂರಮಾಡುತ್ತದೆ ಎಂಬುದು ನಮ್ಮ ಖಚಿತ ನಂಬಿಕೆಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಚಿಕನ್ ಫಾಕ್ಸ್ ಆದಾಗ ನೀವು ನಿರ್ಲಕ್ಷಿಸಲೇಬೇಕಾದ ಆಹಾರಗಳು

ಬೇವಿನೆಲೆ ಕಹಿಯಾಗಿರುತ್ತದೆ ಇದನ್ನು ಸೇವಿಸುವುದು ಹೇಗಪ್ಪಾ ಎಂಬುದು ನಿಮ್ಮ ಚಿಂತೆಯಾಗಿದ್ದರೆ ಆ ಚಿಂತೆಯನ್ನು ದೂರ ಮಾಡಿ. ಬೇವಿನೆಲೆಯನ್ನು ಚೆನ್ನಾಗಿ ಹುರಿದು ನಂತರ ಬೇಯಿಸಿದ ಆಲೂಗಡ್ಡೆಯೊಂದಿಗೆ ಮಿಶ್ರ ಮಾಡಿ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ. ಇದರಿಂದ ಬೇವಿನ ಕಹಿ ಮಾಯವಾಗುತ್ತದೆ.

ಬೇವು ಒಂದು ಅತ್ಯುತ್ತಮ ಆಂಟಿಬಯಾಟಿಕ್ ಆಗಿದ್ದು ಹಲವಾರು ರೋಗಗಳ ವಿರುದ್ಧ ನಿಮ್ಮ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಬೆಳೆಸುತ್ತದೆ. ಹಾಗಿದ್ದರೆ ಮತ್ತೇಕೆ ತಡ, ಬನ್ನಿ ಈ ಬೇವು ಚೋಕಾ ರೆಸಿಪಿಯನ್ನು ಪ್ರಯತ್ನಿಸಿ ಚಿಕನ್ ಗುನ್ಯಾಕ್ಕೆ ವಿದಾಯ ಹೇಳಿ.

ಪ್ರಮಾಣ: 3
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
.ಎಳೆಯ ಬೇವಿನೆಲೆಗಳು - 1 ಕಟ್ಟು
.ಆಲೂಗಡ್ಡೆ - 2 (ಬೇಯಿಸಿ ಹಿಸುಕಿದ್ದು)
.ಉಪ್ಪು - ರುಚಿಗೆ ತಕ್ಕಷ್ಟು
.ಅರಶಿನ ಹುಡಿ - 1 ಸ್ಪೂನ್
.ಎಣ್ಣೆ - 1 ಸ್ಪೂನ್

ಮಾಡುವ ವಿಧಾನ:
1. ಬೇವಿನೆಲೆಗಳನ್ನು ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.

2.ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ತೊಳೆದ ಬೇವಿನೆಲೆಗಳನ್ನು ಇದಕ್ಕೆ ಹಾಕಿ.

3.ಅರಶಿನ ಹುಡಿ ಉಪ್ಪು ಸೇರಿಸಿ, ಮೀಡಿಯಮ್ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ. ಅಡಿ ಹಿಡಿಯದಂತೆ ಪಲ್ಯವನ್ನು ಮಗಚುತ್ತಿರಿ.

4.ಪೂರ್ತಿ ಆದ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ಹುರಿದ ಬೇವಿನೆಲೆಗಳನ್ನು ಹಿಸುಕಿದ ಆಲೂಗಡ್ಡೆಗೆ ಸೇರಿಸಿ.

5.ಬೇವಿನೆಲೆಗಳು ತಣ್ಣಗಾಗಲು ಬಿಡಿ.

6.ತಣ್ಣಗಾದ ನಂತರ, ಬೇವಿನೆಗಳನ್ನು ಆಲೂಗಡ್ಡೆಗಳೊಂದಿಗೆ ಬೆರೆಸಲು ನಿಮ್ಮ ಕೈಯನ್ನು ಬಳಸಿ. ಚೆನ್ನಾಗಿ ಮಿಶ್ರ ಮಾಡಿ ನಂತರ ಬಡಿಸಿ.

ಬಿಸಿ ಅನ್ನದೊಂದಿಗೆ ಹುರಿದ ಬೇವಿನೆಲೆಯ ಚೋಕಾ ರೆಸಿಪಿಯನ್ನು ಬಡಿಸಬಹುದು. ಇಂತಹ ರುಚಿಯಾದ ಆರೋಗ್ಯಕರ ರೆಸಿಪಿಗಳನ್ನು ಆಗಾಗ ಪ್ರಯತ್ನಿಸಲು ನಮ್ಮ ಬೋಲ್ಡ್ ಸ್ಕೈ ರೆಸಿಪಿ ಸೆಕ್ಷನ್‌ಗೆ ಭೇಟಿ ನೀಡುತ್ತಿರಿ.

English summary

Neem Chokha Recipe For Chicken Pox Prevention

The most dreaded season of chicken pox is here again. While most of us have contracted this disease in our childhood, for those who haven't, prevention is in your hands.
Story first published: Friday, April 4, 2014, 14:12 [IST]
X
Desktop Bottom Promotion