For Quick Alerts
ALLOW NOTIFICATIONS  
For Daily Alerts

ಅಣಬೆ ಪಲಾವ್ ವಿಭಿನ್ನ ರುಚಿ!

|

ಹೆಸರು ಕೇಳಿ ಆಶ್ಚರ್ಯವಾಯ್ತಾ? ಹೌದು ನೀವು ಇದು ಅಣಬೆ ಪಲಾವ್ ಮಾಡಲು ಸುಲಭ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳಿಗಂತೂ ಬಹಳ ಒಳ್ಳೆಯದು. ಮಕ್ಕಳ ಮೂಳೆಗಳ ಬೆಳವಣಿಗೆಗೆ ಮತ್ತು ಅವರ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ.

ಸಸ್ಯಹಾರಿಗಳಲ್ಲಿ ಯಾರಿಗೆ ಅಣಬೆ ಬಹಳ ಪ್ರಿಯವೊ ಅವರು ಒಮ್ಮೆ ಈ ಪಲಾವ್ ಮಾಡಿ ರುಚಿ ನೋಡಲೇಬೇಕು. ಈವತ್ತು ನಾವು ನಿಮ್ಮ ಮಕ್ಕಳಿಗೆ ಇಷ್ಟವಾಗುವ ಈ ಪಲಾವ್ ಮಾಡುವುದು ಹೇಗೆ ಅಂತ ಹೇಳಿಕೊಡುತ್ತೇವೆ.

Mushroom Pulav Recipe For Dinner

ಬೇಕಾಗುವ ಸಾಮಗ್ರಿಗಳು
1. ಅಕ್ಕಿ - 1/2 ಕೆಜಿ
2. ಈರುಳ್ಳಿ- 2 (ಕತ್ತರಿಸಿಟ್ಟುಕೊಳ್ಳಿ)
3. ಹಸಿಮೆಣಸಿನಕಾಯಿ- 1 (ಕತ್ತರಿಸಿಕೊಳ್ಳಿ)
4. ಟೊಮೆಟೊ- 1 (ಕತ್ತರಿಸಿಕೊಳ್ಳಿ)
5. ಸಾಸಿವೆ- 1 ಟೀಚಮಚ
6. ಅಣಬೆ- 200 ಗ್ರಾಂ
7. ಜೋಳ- 1 ಕಪ್ (ಬೇಯಿಸಿಕೊಳ್ಳಿ)
8. ಎಣ್ಣೆ ಹುರಿಯಲು
9. ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
1. ಮೊದಲಿಗೆ ಅನ್ನ ಮಾಡಿಟ್ಟುಕೊಳ್ಳಿ.
2. ಒಂದು ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ಇದಕ್ಕೆ ಸಾಸಿವೆ, ಹಸಿಮೆಣಸಿನಕಾಯಿ ಹಾಕಿ ಎಲ್ಲವನ್ನು ಮಿಶ್ರ ಮಾಡಿ.
3. ನಂತರ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ.
4. ಇದಕ್ಕೆ ಬಟಾಣಿ ಮತ್ತು ಟೊಮೊಟೊ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಇವು ಬೆಂದ ನಂತರ ಉಪ್ಪನ್ನು ಉದುರಿಸಿ.
5. ನಂತರ ಅಣಬೆಗಳನ್ನು ಹಾಕಿ ನಿಧಾನವಾಗಿ ಕಲಸಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ.
6. ಅಣಬೆಗಳು ಬೆಂದ ನಂತರ ಇದರೊಂದಿಗೆ ಅನ್ನವನ್ನು ಬೆರೆಸಿ ನಿಧಾನವಾಗಿ ಚೆನ್ನಾಗಿ ಕಲಸಿ.
7. ಇವೆಲ್ಲ ಬೇಯುತ್ತಿರುವಂತೆಯೇ ಇದಕ್ಕೆ ಬೆಂದ ಜೋಳದ ಕಾಳುಗಳನ್ನು ಹಾಕಿ ಕಲಸಿ.
8. ಇವೆಲ್ಲವನ್ನೂ 5 ನಿಮಿಷಗಳವರೆಗೆ ಬೇಯಿಸಿ ಒಲೆಯನ್ನು ಆರಿಸಿ.

ಅಣಬೆ ಪಲಾವನ್ನು ಟೊಮೆಟೊ ಅಥವ ಬೆಳ್ಳುಳ್ಳಿ ಸಾಸ್ ನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

English summary

Mushroom Pulav Recipe For Dinner

Wondering what to prepare this evening for dinner? Mushroom Pulav Recipe is one of the easiest and most healthiest recipes you can make for your kids. It is said that mushrooms are healthy for growing children to eat since it is good for their bone health and provides nourishment to their body.
Story first published: Monday, December 9, 2013, 13:18 [IST]
X
Desktop Bottom Promotion