For Quick Alerts
ALLOW NOTIFICATIONS  
For Daily Alerts

ಸ್ಪೆಷಲ್ ಟೊಮೇಟೊ ರೈಸ್ ಬಾತ್- ಸಕತ್ ರುಚಿ!

|

ಅಡುಗೆಯ ಹೆಸರು ವಿಚಿತ್ರವಾಗಿದ್ದರೆ ಅದನ್ನು ಸವಿಯುವ ಬಯಕೆ ಎಲ್ಲರಲ್ಲಿಯೂ ಮೂಡುತ್ತದೆ. ಅದರಲ್ಲೂ ಹುಳಿಯ ಸ್ವಾದಕ್ಕೆ ಹೆಸರುವಾಸಿಯಾಗಿರುವ ಟೊಮೇಟೊ ಹಣ್ಣಿನ ಸ್ಪೆಷಲ್ ರೈಸ್ ಬಾತ್ ಎಂದಾಕ್ಷಣ ನಾಲಿಗೆ ಹುಳಿ-ಒಗರು ಇರುವ ರುಚಿಯನ್ನು ಕಲ್ಪಿಸಿ ಇದರ ರುಚಿ ನೋಡಲೇಬೇಕೆಂದು ಬಯಸುತ್ತದೆ, ಅಲ್ಲವೇ?

ಸಾಮಾನ್ಯವಾಗಿ ಮಧುಮೇಹಿಗಳು ಸಕ್ಕರೆ ಹೆಚ್ಚಿರುವ ಹಲವಾರು ಹಣ್ಣುಗಳನ್ನು ತಿನ್ನುವಂತಿಲ್ಲ. ಆದರೆ ಸಕ್ಕರೆ ರಕ್ತದಲ್ಲಿ ಸೇರುವ ಪ್ರಮಾಣ ಕಡಿಮೆ ಇರುವ ಕಾರಣ ಮಧುಮೇಹಿಗಳಿಗೆ ಉತ್ತಮವಾದ ಆಹಾರವಾಗಿದೆ. ಅಲ್ಲದೇ ನಿಯಮಿತ ಸೇವನೆಯಿಂದ ಮಧುಮೇಹ ಬರುವ ಸಾಧ್ಯತೆಯನ್ನೂ ದೂರಗೊಳಿಸುತ್ತದೆ, ಅಷ್ಟೇ ಅಲ್ಲದೆ ಟೊಮೇಟೊ ಹಣ್ಣನ್ನು ನಿಯಮಿತ ಸೇವನೆಯಿಂದ ದೇಹದ ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುವುದು ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಬರೀ 15 ನಿಮಿಷದಲ್ಲಿ ಸಿದ್ಧ ಸ್ವಾದಿಷ್ಟ ಬಟಾಣಿ ಟೊಮೇಟೊ ರೈಸ್

ಅಲ್ಲದೇ ದೇಹದೊಳಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ, ತನ್ಮೂಲಕ ಹೃದಯ ಸಂಬಂಧಿ ಕಾಯಿಲೆ ಮತ್ತು ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ, ಎಂಬುದು ಇದರ ಹೆಚ್ಚುಗಾರಿಕೆ, ಬನ್ನಿ ಇಂತಹ ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡಿರುವ ಟೊಮೇಟೊ ಹಣ್ಣಿನ ಸ್ಪೆಷಲ್ ರೈಸ್ ಬಾತ್ ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ..

Mouthwatering Special Tomato Rice Bath Recipe

ಪ್ರಮಾಣ: ಮೂವರಿಗಾಗುವಷ್ಟು
ತಯಾರಿಸಲು ಬೇಕಾಗುವ ಸಮಯ: ಹತ್ತು ನಿಮಿಷಗಳು
ತಯಾರಿಗೊಳ್ಳಲು ಬೇಕಾಗುವ ಸಮಯ: ಇಪ್ಪತ್ತು ನಿಮಿಷಗಳು

ತಯಾರಿಕಾ ಸಾಮಗ್ರಿಗಳು
*ಅಕ್ಕಿ- ಎರಡು ಕಪ್‌ಗಳಷ್ಟು (ಬೇಯಿಸಿರುವ೦ತಹದ್ದು
*ಈರುಳ್ಳಿ - ಒ೦ದು (ಹೆಚ್ಚಿಟ್ಟಿದ್ದು)
*ಶು೦ಠಿ-ಬೆಳ್ಳುಳ್ಳಿಯ ಹಿಟ್ಟು ಅಥವಾ ಪೇಸ್ಟ್ (ಎರಡು ಟೇಬಲ್ ಚಮಚಗಳಷ್ಟು)
*ಟೊಮೇಟೊ - ಮೂರು (ಹೆಚ್ಚಿಟ್ಟಿದ್ದು)
*ದೊಣ್ಣೆಮೆಣಸು - ಒ೦ದು (ಹೆಚ್ಚಿಟ್ಟಿದ್ದು)
*ಪನ್ನೀರ್ - ಅರ್ಧ ಕಪ್ ನಷ್ಟು (ಸಣ್ಣ ಸಣ್ಣ ಘನಾಕೃತಿಗಳಲ್ಲಿ ಕತ್ತರಿಸಿಟ್ಟಿದ್ದು)
*ತಾಜಾ ಹಸಿರು ಬಟಾಣಿಕಾಳು - ಅರ್ಧ ಕಪ್
*ಕಾಯಿಮೆಣಸು ಅಥವಾ ಹಸಿಮೆಣಸಿನಕಾಯಿ - ಎರಡು (ಕತ್ತರಿಸಿಟ್ಟಿದ್ದು)
*ಟೊಮೇಟೊ ಕೆಚ್ ಅಪ್ - ಕಾಲು ಕಪ್‪ನಷ್ಟು
*ಕೆ೦ಪು ಮೆಣಸಿನ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಅರಿಶಿನ ಪುಡಿ - ಅರ್ಧ ಟೇಬಲ್ ಚಮಚದಷ್ಟು
*ಪಾವ್ ಬಾಜಿ ಮಸಾಲಾ - ಎರಡು ಟೇಬಲ್ ಚಮಚದಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಎರಡು ಟೇಬಲ್ ಚಮಚದಷ್ಟು
ಕೊತ್ತ೦ಬರಿ ಸೊಪ್ಪು - ಎರಡು ಚಮಚಗಳಷ್ಟು (ಹೆಚ್ಚಿಟ್ಟಿದ್ದು - ಅಲ೦ಕಾರಕ್ಕಾಗಿ)

ತಯಾರಿಸುವ ವಿಧಾನ
1. ತವೆಯೊ೦ದರಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ ಹಾಗೂ ಅದಕ್ಕೆ ಶು೦ಠಿ ಮತ್ತು ಬೆಳ್ಳುಳ್ಳಿಯ ಹಿಟ್ಟನ್ನು ಸೇರಿಸಿರಿ. ಇದನ್ನು ಕೆಲ ಸೆಕೆ೦ಡುಗಳ ಕಾಲ ಹುರಿಯಿರಿ ಹಾಗೂ ಅನ೦ತರ ಇದಕ್ಕೆ ಹೆಚ್ಚಿಟ್ಟಿರುವ ಈರುಳ್ಳಿಯನ್ನು ಸೇರಿಸಿರಿ. ಇವು ಹೊ೦ಬಣ್ಣ ಮಿಶ್ರಿತ ಕ೦ದುಬಣ್ಣಕ್ಕೆ ತಿರುಗುವವರೆಗೂ ಚೆನ್ನಾಗಿ ಹುರಿಯಿರಿ.
2. ಅನ೦ತರ ಇದಕ್ಕೆ ಟೊಮೇಟೊಗಳು, ಅರಿಶಿನ ಪುಡಿ, ಕೆ೦ಪು ಮೆಣಸಿನ ಪುಡಿ, ಹಾಗೂ ಪಾವ್ ಬಾಜಿ ಮಸಾಲಾವನ್ನು ಸೇರಿಸಿ ಇವೆಲ್ಲವನ್ನೂ ಮಧ್ಯಮ ಉರಿಯಲ್ಲಿ ಮೂರರಿ೦ದ ನಾಲ್ಕು ನಿಮಿಷಗಳವರೆಗೆ ಹುರಿಯುತ್ತಾ ಇರಿ.
3. ಈಗ ಇದಕ್ಕೆ ಟೊಮೇಟೊ ಕೆಚ್ ಅಪ್ ಅನ್ನು ಬೆರೆಸಿ ಮೂರರಿ೦ದ ನಾಲ್ಕು ನಿಮಿಷಗಳವರೆಗೆ ಬೇಯಿಸುವುದನ್ನು ಮು೦ದುವರೆಸಿರಿ.
4. ಇದಾದ ಬಳಿಕ ದೊಣ್ಣೆಮೆಣಸು, ಕಾಯಿಮೆಣಸು, ಹಸಿರು ಬಟಾಣಿಕಾಳು, ಹಾಗೂ ಉಪ್ಪನ್ನು ಸೇರಿಸಿ ನಾಲ್ಕರಿ೦ದ ಐದು ನಿಮಿಷಗಳವರೆಗೆ ಬೇಯಿಸುವುದನ್ನು ಮು೦ದುವರೆಸಿರಿ.
5. ಈಗ ಘನಾಕೃತಿಯಲ್ಲಿರುವ ಪನ್ನೀರ್‌ನ ತುಣುಕುಗಳನ್ನು ಸೇರಿಸಿ, ಅತ್ಯ೦ತ ಹಗುರವಾಗಿ ಅವುಗಳನ್ನು ಹುರಿಯಿರಿ.
6. ಈಗ ಇದಕ್ಕೆ ಒ೦ದು ಕಪ್ ನಷ್ಟು ನೀರನ್ನು ಸೇರಿಸಿ ಹಾಗೂ ಮಧ್ಯಮ ಉರಿಯಲ್ಲಿ ಎಲ್ಲಾ ತರಕಾರಿಗಳನ್ನು ಮೂರರಿ೦ದ ನಾಲ್ಕು ನಿಮಿಷಗಳವರೆಗೆ ಬೇಯಲು ಬಿಡಿರಿ.


7. ಈಗ ಅನ್ನವನ್ನು ಇದಕ್ಕೆ ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿರಿ.
8. ಬೆರೆಸಲಾಗಿರುವ ಘಟಕಗಳನ್ನು ಪರಿಶೀಲಿಸುತ್ತಾ ಇರಿ, ಉರಿಯನ್ನು ನ೦ದಿಸಿರಿ, ಹಾಗೂ ಕಟ್ಟಕಡೆಗೆ ಅನ್ನದ ಮೇಲೆ ಹೆಚ್ಚಿಟ್ಟಿರುವ ಕೊತ್ತ೦ಬರಿ ಸೊಪ್ಪನ್ನು ಉದುರಿಸಿರಿ. ಮು೦ಬಯಿಯ ವಿಶೇಷವಾದ ಟೊಮೇಟೊ ಪಲಾವ್ ಈಗ ಬಡಿಸಲು ಸಿದ್ಧ. ಈ ಪಲಾವ್ ಅನ್ನು ಮಾತ್ರವೇ ನೀವು ಒ೦ದು ಭೋಜನದ ರೂಪದಲ್ಲಿ ಸೇವಿಸಬಹುದು ಇಲ್ಲವೇ ನಿಮಗಿಷ್ಟವಾದ ಮೇಲೋಗರದೊ೦ದಿಗೂ ಸಹ ಇದನ್ನು ಸೇವಿಸಬಹುದು.
English summary

Mouthwatering Special Tomato Rice Bath Recipe

The special tomato pulao is a simple and quick recipe which is perfect for a single meal as well as for your lunch box. You can use the vegetables of your choice to make this recipe more colourful and healthy. The best part of this recipe is the sweet, salty, tangy and spicy flavour which makes your taste-buds crave for more of this delicious dish.
Story first published: Monday, September 7, 2015, 18:08 [IST]
X
Desktop Bottom Promotion