For Quick Alerts
ALLOW NOTIFICATIONS  
For Daily Alerts

ಘಮಘಮಿಸುವ ಅಮ್ಮನ ಕೈ ರುಚಿಯ ಪುಳಿಯೋಗರೆ ರೆಸಿಪಿ

|

ಭಾರತೀಯ ತಿಂಡಿತಿನಿಸುಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ನಮ್ಮ ನೆಲದಲ್ಲಿ ಮಾಡುವ ತಿಂಡಿಗಳು ದೇಶೀಯ ಸೊಗಡನ್ನು ಪಡೆದುಕೊಳ್ಳುವುದರ ಜೊತೆಗೆ ಅಸದಳ ರುಚಿಯನ್ನು ಹೊಂದುವುದರ ಜೊತೆಗೆ ಆ ಸ್ವಾದ ನಮ್ಮ ನಾಲಗೆಯಲ್ಲಿ ಉಳಿಯುವಂತೆ ಮಾಡುತ್ತದೆ.

ಅಕ್ಕಿರೊಟ್ಟಿ, ಜೋಳದ ರೊಟ್ಟಿ, ರಾಗಿ ಮುದ್ದೆ, ಚಿತ್ರಾನ್ನ, ಹೀಗೆ ಈ ತಿಂಡಿಗಳನ್ನು ಹೆಸರಿಸುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲದಂತಾಗುತ್ತದೆ. ಅಷ್ಟೊಂದು ವೈವಿಧ್ಯಮಯ ಸ್ವಾದಭರಿತ ತಿಂಡಿಗಳ ಪಟ್ಟಿಯೇ ನಮ್ಮ ಮುಂದಿದೆ. ಇನ್ನು ಈ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿರುವುದು ಪುಳಿಯೋಗರೆಯಾಗಿದೆ. ಅತಿಸರಳವಾಗಿ ಮಾಡಬಹುದಾದ ಪುಳಿಯೋಗರೆ ದೂರದ ಅಮೇರಿಕಾದಲ್ಲೂ ಹೆಸರುವಾಸಿಯಾಗಿದೆ ಎಂದರೆ ಅದರ ರುಚಿಗೆ ನೀವು ಮಾರು ಹೋಗಲೇಬೇಕು. ಅಸಲಿ ಅಯ್ಯಂಗಾರರ ಅಪ್ಪಟ ಪುಳಿಯೋಗರೆ

ಮನೆಯಲ್ಲೇ ತಯಾರಿಸಿ ಮಾಡಬಹುದಾದ ಪುಳಿಯೋಗರೆ ಗೊಜ್ಜಂತೂ ತಿಂದಷ್ಟು ಇನ್ನೂ ತಿನ್ನಬೇಕೆಂಬ ಬಯಕೆಯನ್ನು ಮನದಲ್ಲಿ ಮೂಡಿಸುತ್ತದೆ. ಆದರೆ ಇದನ್ನು ತಯಾರಿಸಲು ಬಹಳ ಸಮಯ ಹಿಡಿಯುವುದಂತೂ ಖಂಡಿತ. ಇನ್ನು ಆಧುನಿಕ ಗೃಹಿಣಿಯರಿಗಾಗಿಯೇ ಇನ್‌ಸ್ಟಂಟ್ ಪುಳಿಯೋಗರೆ ಗೊಜ್ಜುಗಳು ಲಭ್ಯವಿದ್ದು ಇದರಿಂದ ಕೆಲವೇ ನಿಮಿಷಗಳಲ್ಲಿ ಪುಳಿಯೋಗರೆ ಖಾದ್ಯವನ್ನು ತಯಾರಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ತಡಮಾಡದೇ ಕೆಳಗೆ ನೀಡಿರುವ ರುಚಿಯಾಗಿರುವ ಪುಳಿಯೋಗರೆ ಖಾದ್ಯ ತಯಾರಿ ಕುರಿತ ಮಾಹಿತಿಯನ್ನು ಅರಿತುಕೊಳ್ಳಿ.

Mouthwatering Puliyogare Vegetarian Recipe

ಬೇಕಾಗುವ ಸಾಮಾಗ್ರಿಗಳು
*ಅಕ್ಕಿ - 2 ಕಪ್‌ಗಳು
*ನೆನೆಸಿದ ಹುಳಿ - 1 ಕಪ್
*ಉದ್ದಿನ ಬೇಳೆ - 1 ಚಮಚ
*ಬೆಲ್ಲ - 1 ಚಮಚ
*ಕಡಲೆ - ಮುಷ್ಟಿಯಷ್ಟು
*ಅರಶಿನ ಪುಡಿ - 1 ಚಮಚ
*ಸಾಸಿವೆ - 1 ಚಮಚ
*ಇಂಗು - ಸಣ್ಣ ತುಂಡು
*ಜೀರಿಗೆ - 1 ಚಮಚ
*ಎಳ್ಳಿನ ಪುಡಿ- 1 ಚಮಚ
*ಕರಿಬೇವಿನೆಲೆ - 6-7
*ಒಣ ಕೆಂಪು ಮೆಣಸು - 3-4
*ಹಸಿಮೆಣಸು - 3-4 ಉದ್ದಕ್ಕೆ ಸೀಳಿದ್ದು
*ಉಪ್ಪು - ರುಚಿಗೆ ತಕ್ಕಷ್ಟು
*ತುಪ್ಪ ಅಥವಾ ಬೆಣ್ಣೆ - 1 ಚಮಚ

ಮಾಡುವ ವಿಧಾನ
*ಅನ್ನವನ್ನು ಎಂದಿನಂತೆ ಉದುರುದುರಾಗಿ ಬೇಯಿಸಿಕೊಳ್ಳಿ. ಬೇಕಾದಷ್ಟು ಮಾತ್ರ ನೀರು ಹಾಕಿ. ಅನ್ನ ಅಂಟದಂತೆ ಜಾಗರೂಕತೆ ವಹಿಸಿ.
*ಬೇಯಿಸಿದ ಅನ್ನವನ್ನು ಸ್ವಲ್ಪ ಹೊತ್ತು ತಣಿಯಲು ಬಿಡಿ. ಇದಕ್ಕೆ ಅರಶಿನ ಪುಡಿ ಮತ್ತು ಕರಿಬೇವಿನೆಲೆಯನ್ನು ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
*ಇನ್ನು ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಮತ್ತು ಎಲ್ಲಾ ಸಾಂಬಾರು ಪದಾರ್ಥಗಳನ್ನು ಹಾಕಿ ಒಗ್ಗರಣೆ ನೀಡಿ. ತದನಂತರ ಇದನ್ನು ಸ್ವಲ್ಪ ಹೊತ್ತು ತುಪ್ಪದಲ್ಲಿ ಹುರಿಯಿರಿ. ಕೊನೆಗೆ ಹಸಿಮೆಣಸನ್ನು ಹಾಕಿ.
*ನಂತರ ಬೆಲ್ಲ ಮತ್ತು ಹುಳಿಯನ್ನು ಪಾತ್ರೆಗೆ ಹಾಕಿ. ಹುಳಿಯು ಚೆನ್ನಾಗಿ ಬೇಯುವವರೆಗೆ ಮಂದ ಉರಿಯಲ್ಲಿ 5-6 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
*ತದನಂತರ ಈ ಮಸಾಲೆ ಮಿಶ್ರಣಕ್ಕೆ ಅನ್ನವನ್ನು ಬೆರೆಸಿ ಹಾಗೂ ಹುರಿದ ಕಡಲೆಕಾಳಿನೊಂದಿಗೆ ಇದನ್ನು ಅಲಂಕರಿಸಿ.

English summary

Mouthwatering Puliyogare Vegetarian Recipe

Puliyogare or tamarind rice is a South Indian rice preparation typically eaten as a snack, as part of most south Indian festival luncheons and dinners, and as prasadam in temples. It is traditionally made using steamed or boiled rice mixed with tamarind paste, groundnuts or peanuts, coriander, coconut, red chili, curry leaves, jaggery, pepper, mustard seeds, fenugreek, turmeric, asafoetida, urad dal, and cumin. have a look
Story first published: Thursday, July 2, 2015, 20:04 [IST]
X
Desktop Bottom Promotion