For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ರೈಸ್ ಬಾತ್-ಸಕತ್ ರುಚಿ ಕಣ್ರೀ!

By Manu
|

ಬೆಳಗಿನ ತಿಂಡಿ ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಹೌದು ಬೆಳಗಿನ ಜಾವದ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಕಾಯವನ್ನು ನಾವು ಪಡೆಯುತ್ತೇವೆ ಎಂಬುದು ವಾಸ್ತವ ಸತ್ಯ.

ಬೆಳಗಿನ ಬ್ರೇಕ್‌ಫಾಸ್ಟ್ ರುಚಿಕಟ್ಟಾಗಿ ಅಚ್ಚುಕಟ್ಟಾಗಿ ಇದ್ದಷ್ಟು ಅದನ್ನು ಸೇವಿಸುವ ಮನಸ್ಸು ತೃಪ್ತಿ ಹೊಂದುತ್ತದೆ, ಮತ್ತು ದೇಹ ಕೂಡ ಆರೋಗ್ಯಯುತ ಆಹಾರ ಪದ್ಧತಿಯಿಂದಾಗಿ ಉಲ್ಲಾಸದಿಂದ ಕೂಡಿರುತ್ತದೆ. ಆದ್ದರಿಂದಲೇ ನಿಮ್ಮ ಮೈ ಮನ ಬಯಸುವ ಆಹಾರ ವಿಧಾನವನ್ನೇ ದೈನಂದಿನ ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕು

ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಇಂದು ನಿಮ್ಮ ದೇಹಕ್ಕೆ ಆರೋಗ್ಯಕಾರಿಯಾಗಿರುವ ಸೊಗಸಾದ ಖಾದ್ಯದೊಂದಿಗೆ ಬಂದಿರುವೆವು ಅದುವೇ ಕ್ಯಾರೆಟ್ ರೈಸ್ ಬಾತ್. ಹೌದು, ಸಮೃದ್ಧ ಪೋಷಕಾಂಶಗಳ ಆಗರವಾಗಿರುವ ಕ್ಯಾರೇಟ್‌ನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಅತಿ ಕಡಿಮೆ ಇರುವುದರಿಂದ ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದರ ಜೊತೆಗೆ ಹೃದ್ರೋಗವನ್ನು ನಿಯಂತ್ರಿಸುತ್ತದೆ. ಹಾಗಿದ್ದರೆ ತಡ ಯಾಕೆ? ತಯಾರಿಕೆ ವಿಧಾನ ತಿಳಿಸಲು ನಾವು ರೆಡಿ. ಮಾಡಲು ನೀವು ರೆಡಿನಾ..?

Mouthwatering carrot rice recipe for morning breakfast

*ಪ್ರಮಾಣ: 4 ಜನರಿಗೆ ಬಡಿಸಬಹುದು
*ಸಿದ್ಧತೆಗೆ ತಗುಲುವ ಸಮಯ: 10 ನಿಮಿಷ
*ಅಡುಗೆಗೆ ತಗುಲುವ ಸಮಯ: 25 ನಿಮಿಷ

ಬೇಕಾಗುವ ಪದಾರ್ಥಗಳು
*ಅನ್ನ- 2 ಕಪ್
*ಕ್ಯಾರೆಟ್‍ಗಳು- 4-5 (ಉದ್ದುದ್ದಕ್ಕೆ ಕತ್ತರಿಸಿರಬೇಕು)
*ಈರುಳ್ಳಿಗಳು - 2 (ಕತ್ತರಿಸಿದಂತಹುದು)
*ದಪ್ಪ ಮೆಣಸಿನ ಕಾಯಿ - 1 (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿ- 3-4 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 3 (ರುಬ್ಬಿದ ಅಥವಾ ಜಜ್ಜಿದಂತಹುದು)
*ಶುಂಠಿ - ½ ಇಂಚು (ಸಣ್ಣಗೆ ಕತ್ತರಿಸಿದಂತಹುದು)
*ಅರಿಶಿನ ಪುಡಿ- 1 ಟೀ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಪಲಾವ್ ಮಸಾಲ - ಅರ್ಧ ಟೀ.ಚಮಚ
*ಕರಿ ಮೆಣಸು - ಅರ್ಧ ಟೀ.ಚಮಚ (ಪುಡಿ ಮಾಡಿದಂತಹುದು)
*ಜೀರಿಗೆ - ಅರ್ಧ ಟೀ.ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ- 2 ಟೀ.ಚಮಚ
*ಕೊತ್ತಂಬರಿ ಸೊಪ್ಪು - 1 ಟೀ.ಚಮಚ (ಕತ್ತರಿಸಿದಂತಹುದು)

ಮಾಡುವ ವಿಧಾನ
*ಆಳವಾದ ತಳವಿರುವ ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಕಾಯಿಸಿ, ಅದು ಹಬೆಯಾಡಲು ಆರಂಭಿಸಿದಾಗ ಅದಕ್ಕೆ ಜೀರಿಗೆ ಹಾಕಿ ಸೌಟು ಆಡಿಸಿ, ನಂತರ ಈರುಳ್ಳಿಯನ್ನು ಹಾಕಿ, ಅದು ಕೆಂಪಾಗುವವರೆಗೆ ಚೆನ್ನಾಗಿ ಹುರಿಯಿರಿ
* ಒಮ್ಮೆ ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗಿದ ನಂತರ, ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ದಪ್ಪ ಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ,
*ಇಷ್ಟೆಲ್ಲಾ ಆದ ನಂತರ ಅದಕ್ಕೆ ರುಚಿಗಷ್ಟು ಉಪ್ಪು ಮತ್ತು ಅರಿಶಿನ ಪುಡಿಯನ್ನು ಚಿಮುಕಿಸಿ.
* ಇನ್ನು ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು 4-5 ನಿಮಿಷಗಳ ಕಾಲ ಚೆನ್ನಾಗಿ ಕಲೆಸುತ್ತ ಇರಿ. ಈ ತರಕಾರಿಗಳು ಸ್ವಲ್ಪ ಮೃದುವಾಗುವವರೆಗು ಇದನ್ನು ಮುಂದುವರಿಸಿ.
*ಈಗ ಇದಕ್ಕೆ ಮಸಾಲೆಯನ್ನು ಬೆರೆಸಿ, ಅಂದರೆ ಕರಿಮೆಣಸು, ಖಾರದ ಪುಡಿ, ಪಲಾವ್ ಮಸಾಲೆ, ಹಾಗು ಹಸಿ ಮೆಣಸಿನ ಕಾಯಿಗಳನ್ನು ಬೆರೆಸಿ, ಚೆನ್ನಾಗಿ ಕಲೆಸಿ ಕೊಡಿ.
*ಇದಕ್ಕೆ ನಿಧಾನವಾಗಿ ಅನ್ನವನ್ನು ಬೆರೆಸಿ ಮತ್ತು ಮಸಾಲೆಯು ಸಂಪೂರ್ಣವಾಗಿ ಬೆರೆಸಲಾಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
*ತದನಂತರ ಇದನ್ನು ಮಧ್ಯಮ ಗಾತ್ರದ ಉರಿಯ ಮೇಲೆ ಸ್ವಲ್ಪ ಹೊತ್ತು ಇಡಿ.
*ಕ್ಯಾರೆಟ್ ರೈಸ್ ಬಾತ್ ರೆಸಿಪಿ ಈಗ ಬಡಿಸಲು ಸಿದ್ಧವಾಗಿದೆ, ಒಮ್ಮೆ ರುಚಿ ನೋಡಿ. ಇದರ ಮೇಲೆ ಅಲಂಕಾರಕ್ಕಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಚಿಮುಕಿಸಿ ಮತ್ತು ರಾಯಿತ ಅಥವಾ ಸಲಾಡ್ ಜೊತೆಗೆ ಬಿಸಿ ಬಿಸಿಯಾಗಿ ಬಡಿಸಿಕೊಳ್ಳಿ.

English summary

Mouthwatering carrot rice recipe for morning breakfast

This easy carrot recipe is filling and tastes delicious. The carrot rice recipe has other chopped vegetables like capsicum, onions, and the aroma of minced garlic makes it a must try. Check out the carrot rice recipe for your morning breakfast ..
Story first published: Saturday, October 31, 2015, 18:18 [IST]
X
Desktop Bottom Promotion