For Quick Alerts
ALLOW NOTIFICATIONS  
For Daily Alerts

ಆರೋಗ್ಯಪೂರ್ಣ ಸ್ವಾಸ್ಥ್ಯಕ್ಕಾಗಿ ರುಚಿಕರ ಈರುಳ್ಳಿ ಅನ್ನ

|

ನಾವು ತಿನ್ನುವ ಆಹಾರ ಪೋಷಕಾಂಶ ಭರಿತವಾಗಿದ್ದರೆ ನಾವು ಆರೋಗ್ಯಪೂರ್ಣ ಜೀವನವನ್ನು ಹೊಂದಬಹುದು. ಹಣ್ಣು ಹಂಪಲುಗಳು ತರಕಾರಿಗಳ ಬಳಕೆಯನ್ನು ನಾವು ಹೆಚ್ಚು ಹೆಚ್ಚು ಮಾಡಿದಂತೆ ರೋಗ ಮುಕ್ತ ಆರೋಗ್ಯವನ್ನು ನಾವು ಹೊಂದಬಹುದಾಗಿದೆ. ಎಣ್ಣೆಯುಕ್ತ ಮತ್ತು ರಾಸಾಯನಿಕ ಸತ್ವವಿರುವ ಆಹಾರಗಳು ದೇಹದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಹಾಗಿದ್ದರೆ ನೀವು ತೆಗೆದುಕೊಳ್ಳುವ ಆಹಾರದಲ್ಲಿ ಹೆಚ್ಚು ಹೆಚ್ಚು ಪೋಷಕಾಂಶಭರಿತ ಸತ್ವಭರಿತ ಅಂಶಗಳು ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಬೆಳಗ್ಗಿನ ಉಪಹಾರದಿಂದ ಹಿಡಿದು ರಾತ್ರಿಯ ಊಟದ ವೇಳೆಯಲ್ಲೂ ಕೂಡ ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ದೇಹಕ್ಕೆ ಆಹಾರವನ್ನು ಒದಗಿಸುತ್ತಿರಬೇಕು .ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ನಿಮ್ಮ ದೇಹಕ್ಕೆ ಆರೋಗ್ಯಕಾರಿಯಾಗಿರುವ ಸೊಗಸಾಸ ಖಾದ್ಯದೊಂದಿಗೆ ನಾವು ಬಂದಿರುವೆವು. ಈರುಳ್ಳಿಯ ಸತ್ವವನ್ನು ಹೇರಳವಾಗಿ ಹೊಂದಿರುವ ಈ ಖಾದ್ಯವು ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದರ ಜೊತೆಗೆ ನಿಮಗೆ ಹೆಚ್ಚಿನ ಶಕ್ತಿಯನ್ನು ನೀಡುವಲ್ಲಿ ಸಹಕಾರಿಯಾಗಲಿದೆ. ಹಾಗಿದ್ದರೆ ತಡ ಯಾಕೆ? ತಯಾರಿಕೆ ವಿಧಾನ ತಿಳಿಸಲು ನಾವು ರೆಡಿ. ಮಾಡಲು ನೀವು ರೆಡಿನಾ..?

Instant & Easy Onion Rice Recipe

*ಪ್ರಮಾಣ - 2
*ಅಡುಗೆಗೆ ಬೇಕಾದ ಸಮಯ: 20-25 ನಿಮಿಷಗಳು ಮಲಬಾರ್ ಶೈಲಿಯಲ್ಲಿ ಘೀ ರೈಸ್

ಬೇಕಾಗುವ ಸಾಮಗ್ರಿಗಳು
*ಅನ್ನ - 2 ಕಪ್
*ಈರುಳ್ಳಿ - 2 (ಕತ್ತರಿಸಲಾಗಿರುವ)
*ಬೆಳ್ಳುಳ್ಳಿ - 2 (ಜಜ್ಜಿದ್ದು)
*ಸಾಸಿವೆ - ½ ಚಮಚ
*ಹಸಿ ಮೆಣಸಿನಕಾಯಿ - 2-3 (ಕತ್ತರಿಸಲಾಗಿರುವ)
*ಕಾಳು ಮೆಣಸು - 2 ಚಮಚ (ಪುಡಿ)
*ಅಡಿಗೆ ಎಣ್ಣೆ - 3 ಚಮಚ
*ನಿಂಬೆರಸ - 2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
* ಮೊದಲು ಅನ್ನವನ್ನು ಮಾಡಿಟ್ಟುಕೊಳ್ಳಿ.
* ತದನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಿರಿ.
*ಇನ್ನು ಕಾದ ಎಣ್ಣೆಗೆ ಸಾಸಿವೆಯನ್ನು ಹಾಕಿ.
*ಅವು ಚಟ್ ಚಟ್ ಎನ್ನುತ್ತಿರುವಾಗ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯನ್ನು ಹಾಕಿರಿ. ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಮಿಶ್ರಣವನ್ನು ಕದಡುತ್ತಿರಿ.
*ಈಗ ಅನ್ನವನ್ನು ಮಿಶ್ರಣವಿರುವ ಬಾಣಲೆಗೆ ಹಾಕಿ. ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಬೆರಸಿರಿ.
*ಈರುಳ್ಳಿ ಹಾಗೂ ಮಸಾಲೆಯ ಘಮ ಬರುವವರೆಗೆ ಈ ಮಿಶ್ರಣವನ್ನು ಕಡಿಮೆ ಉರಿಯ ಮೇಲಿಟ್ಟು ಕಲಸುತ್ತಾ ಬಿಸಿ ಮಾಡಿರಿ.
*ಇನ್ನು ಗ್ಯಾಸ್ ಆಫ್ ಮಾಡಿ, ನಿಂಬೆ ರಸವನ್ನು ಬೆರಸಿ ಚನ್ನಾಗಿ ಕಲಸಿರಿ.
*ಈಗ ಈರುಳ್ಳಿ ಅನ್ನ ಸವಿಯಲು ರೆಡಿ. ದಕ್ಷಿಣ ಭಾರತದ ಮಾವಿನಕಾಯಿ ಅಥವಾ ನಿಂಬೆಕಾಯಿ ಉಪ್ಪಿನಕಾಯಿ ಜೊತೆ ಸವಿದರೆ ಆಹಾ ಸಕ್ಕತ್ತಾಗಿರುತ್ತೆ. ಮನೆಯಲ್ಲಿ ಮಾಡಿರೋ ಉಪ್ಪಿನಕಾಯಾಗಿದ್ದರಂತೂ ನಮ್ಮ ಈರುಳ್ಳಿ ಅನ್ನದ ರುಚಿಗೆ ಸಾಟಿಯೇ ಇಲ್ಲ.

ಪೋಷಕಾಂಶಗಳ ಪ್ರಮಾಣ
*ಇದರಲ್ಲಿ ಅತ್ಯಧಿಕ ಕಾರ್ಬೋಹೈಡ್ರೆಟ್ ಇರುವುದರಿಂದ ನಿಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅನ್ನವನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಇದು ನಿಮ್ಮ ದೇಹಕ್ಕೆ ಕ್ಯಾಲೋರಿಗಳನ್ನು ಸೇರಿಸುವದಿಲ್ಲ. ಹಾಗೂ ನಾವು ಇತಿಮಿತಿಯಲ್ಲಿ ತಿಂದರೆ ಇದು ಒಳ್ಳೆಯ ಆಹಾರವಾಗಬಲ್ಲದು.
*ನಮ್ಮ ದೇಹಕ್ಕೆ ಅತಿಮುಖ್ಯವಾಗಿ ಬೇಕಾಗುವ "ಎ" ಜೀವಸತ್ವವು ಈರುಳ್ಳಿಯಲ್ಲಿ ಯತೇಚ್ಚವಾಗಿದೆ.

English summary

Instant & Easy Onion Rice Recipe

Onion rice is a South Indian delicacy that is quick and easy to make. You might have tried this dish at home. Onion rice is an easy and fast dish that you can make it for supper today. If you are looking for something that is quick and easy to cook tonight, then you can try out this onion rice recipe.
X
Desktop Bottom Promotion