For Quick Alerts
ALLOW NOTIFICATIONS  
For Daily Alerts

ವೆಜ್ ಹೈದ್ರಾಬಾದ್ ಬಿರಿಯಾನಿ - ಪರ್ಫೆಕ್ಟ್ ಸ್ಟೆಪ್

|

ಬಿರಿಯಾನಿ ತನ್ನ ನಿಜವಾದ ಸ್ವಾದದಲ್ಲಿ ಇರಬೇಕಾದರೆ ಅದನ್ನು ಆವಿಯಲ್ಲಿ ಬೇಯಿಸಬೇಕೆ ಹೊರತು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಬಾರದು. ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ ಮಾಡಿದರೆ ಬಿರಿಯಾನಿ ಹೋಗಿ ಮತ್ತೇನೋ ಆಗುವುದು ಖಂಡಿತ.

ನಿಜವಾದ ಹೃದ್ರಾಬಾದ್ ಬಿರಿಯಾನಿ ರುಚಿ ನೋಡಬೇಕಾದರೆ ಅದನ್ನು ಹಂಡೆಯ ಆಕಾರದ ಪಾತ್ರೆಯಲ್ಲಿ ಬೇಯಿಸಬೇಕು. ಇಲ್ಲಿದೆ ನೋಡಿ ಪರ್ಫೆಕ್ಟ್ ಬಿರಿಯಾನಿ ರೆಸಿಪಿ.

Hyderabad Veg Biryani

ಬೇಕಾಗುವ ಸಾಮಾಗ್ರಿಗಳು
ಲಿಸ್ಟ್ -1
ಒಂದೂವರೆ ಕಪ್ ಬಾಸುಮತಿ ಅಕ್ಕಿ
2 ಹಸಿ ಏಲಕ್ಕಿ
2 ಒಣ ಏಲಕ್ಕಿ
2 ಲವಂಗ
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
1 ಪಲಾವ್ ಎಲೆ
ಸ್ವಲ್ಪ ಕೇಸರಿ
3 ಕಪ್ ನೀರು
ರುಚಿಗೆ ತಕ್ಕ ಉಪ್ಪು

ಗ್ರೇವಿಗೆ ತರಕಾರಿಗಳು
ಲಿಸ್ಟ್ -2
ಸಾಧಾರಣ ಗಾತ್ರದ ಹೂಕೋಸಿನ ಅರ್ಧ ಭಾಗ ಸಾಕು
1 ಕ್ಯಾರೆಟ್
1 ಆಲೂಗಡ್ಡೆ
ಸ್ವಲ್ಪ ಬೀನ್ಸ್
1/3 ಕಪ್ ತಾಜಾ ಬಟಾಣಿ
2 ಈರುಳ್ಳಿ
ಒಂದು ಹಸಿ ಮೆಣಸು ( ಮಧ್ಯ ಸೀಲೀದ್ದು)
2 ಚಮಚ ಚಿಕ್ಕದಾಗಿ ಕತ್ತರಿಸಿದ ಶುಂಠಿ
1 ಚಮಚ ಕತ್ತರಿಸಿದ ಬೆಳ್ಳುಳ್ಳಿ
1 ಚಮಚ ಸೋಂಪು
2 ಏಲಕ್ಕಿ
2 ಲವಂಗ
ಚಕ್ಕೆ
ಪಲಾವ್ ಎಲೆ
100 ಗ್ರಾಂ ಮೊಸರು(ಚೆನ್ನಾಗಿ ಕದಡಬೇಕು)
ಅರ್ಧ ಚಮಚ ಅರಿಶಿಣ ಪುಡಿ
ಅರ್ಧ ಚಮಚ ಖಾರದ ಪುಡಿ
4-5 ಗೋಡಂಬಿ
ಸ್ವಲ್ಪ ಒಣ ದ್ರಾಕ್ಷಿ
ಸ್ವಲ್ಪ ಬಾದಾಮಿ ( ಸಿಪ್ಪೆ ಸುಲಿದಿದ್ದು)
3 ಚಮಚ ತುಪ್ಪು
ಉಪ್ಪು

ಸುವಾಸನೆಗೆ
ಲಿಸ್ಟ್ -3
ಅರ್ಧ ಕಪ್ ಕೊತ್ತಂಬರಿ ಸೊಪ್ಪು
ಅರ್ಧ ಕಪ್ ಪುದೀನಾ ಎಲೆ
100 ಗ್ರಾಂ ಚೆನ್ನಾಗಿ ಕದಡಿದ ಮೊಸರು
ಸ್ವಲ್ಪ ಕೇಸರಿ
1 ಚಮಚ ಹಾಲು
ನಿಂಬೆ ರಸ ಅರ್ಧ ಚಮಚ

ತಯಾರಿಸುವ ವಿಧಾನ:

*ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿ.
* ನಂತರ ಫ್ರೆಶರ್ ಕುಕ್ಕರ್ ನಲ್ಲಿ ಹಾಕಿ ಬೇಯಿಸಿ (ಅಕ್ಕಿಯನ್ನು ಸಂಪೂರ್ಣವಾಗಿ ಬೇಯಿಸಬೇಡಿ).
* ನಂತರ ಲಿಸ್ಟ್ 1 ರಲ್ಲಿ ಹೇಳಿದ ಸಾಮಾಗ್ರಿಗಳನ್ನು ಹಾಕಿ ಅನ್ನ ಮಾಡಿ.
* ನಂತರ ಆ ಅನ್ನವನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ ಹರಡಿ.

* ನಂತರ ಹಂಡೆ ರೀತಿಯ ಅಲ್ಯುಮಿನಿಯಂ ಪಾತ್ರೆಗೆ ತುಪ್ಪ ಹಾಕಿ, ನಂತರ ಏಲಕ್ಕಿ, ಕೇಸರಿ, ಚಕ್ಕೆ, ಲವಂಗ ಪಲಾವ್ ಎಲೆ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ. ಈಗ ಈರುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ಈಗ ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ , ಸೋಂಪು ಸೇರಿಸಿ ಒಂದು ನಿಮಿಷ ಹುರಿಯಿರಿ, ನಂತರ ಅರಿಶಿಣ ಪುಡಿ ಮತ್ತು ಖಾರದ ಪುಡಿ ಹಾಕಿ. ಈಗ ಕತ್ತರಿಸಿ, ಶುದ್ಧ ಮಾಡಿದ ತರಕಾರಿ ಹಾಕಿ 2 ನಿಮಿಷ ಹುರಿಯಿರಿ, ನಂತರ ಮೊಸರು, ಮುಕ್ಕಾಲು ಕಪ್ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ತಿರುಗಿಸಿ, ತರಕಾರಿ ಸ್ವಲ್ಪ ಬೇಯಿಸಿ.
* ತರಕಾರಿ ಬೆಂದ ನಂತರ ಡ್ರೈ ಪ್ರೂಟ್ಸ್ ಬಾದಾಮಿ, ಒಣ ದ್ರಾಕ್ಚಿ, ಗೋಡಂಬಿಯನ್ನು ಸೇರಿಸಿ.
* ಉಪ್ಪು ಸರಿಯಾಗಿದೆಯೇ ಎಂದು ನೋಡಿ. ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ. ಉರಿಯಿಂದ ಇಳಿಸಿ.

* ಇದೇ ಸಮಯದಲ್ಲಿ 1 ಚಮಚ ಹಾಲನ್ನು ಬಿಸಿ ಮಾಡಿ ಅದರಲ್ಲಿ ಕೇಸರಿ ಹಾಕಿ ಕರಗಿಸಿ, ನಂತರ ಅದನ್ನು ಮೊಸರಿನ ಜೊತೆ ಮಿಶ್ರಣ ಮಾಡಿ ತರಕಾರಿ ಇರುವ ಹಂಡೆಗೆ ಚಿಮುಕಿಸಿ, ಪುದೀನಾ-ಕೊತ್ತಂಬರಿ ಸೊಪ್ಪು ಹಾಕಿ.
* ನಂತರ ಬೇಯಿಸಿದ ಅನ್ನ ಹಾಕಿ, ಅದರ ಮೇಲೆ ಈ ಕೇಸರಿ ಮಿಶ್ರಣ ಚಿಮಿಕಿಸಿ ಕೊತ್ತಂಬರಿ, ಪುದೀನಾ ಸೊಪ್ಪು ಹಾಕಿ, ಈ ರೀತಿ ಅನ್ನವನ್ನು ಪದರ-ಪದರವಾಗಿ ಹಾಕಿದ ನಂತರ ಕೊನೆಯಲ್ಲಿ ಉಳಿದ ಕೇಸರಿ ಮಿಶ್ರಣ ಹಾಕಿ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ, ಸ್ವಲ್ಪ ರೋಸ್ ವಾಟರ್ ಚಿಮುಕಿಸಿ, ನಿಂಬೆ ರಸ ಚಿಮುಕಿಸಿ ತೇವ ಇರುವ ಶುದ್ಧವಾದ ಕಾಟನ್ ಬಟ್ಟೆ ಹಾಕಿ ಪಾತ್ರೆಯ ಬಾಯಿಯನ್ನು ಅಗಲವಾದ ತಟ್ಟೆಯಿಂದ ಮುಚ್ಚಿ.
* ಪಾತ್ರೆಯ ಬಾಯಿ ಮತ್ತು ತಟ್ಟೆಯ ಸುತ್ತಾ ಮೈದಾ ಹಿಟ್ಟು ಹಾಕಿ ಆವಿ ಹೊರಬರದಂತೆ ಸೀಲ್ ಮಾಡಿ ಕಡಿಮೆ ಉರಿಯಲ್ಲಿ 20 ನಿಮಿಷ ಬೇಯಿಸಿ. ನಂತರ ಉರಿಯಿಂದ ಇಳಿಸಿದರೆ ಘಮ್ಮೆನ್ನುವ ವಾಸನೆ ಬರುತ್ತದೆ. ನಂತರ ಬಿರಿಯಾನಿಯನ್ನು ಸೌಟ್ ನಿಂದ ಆಡಿಸಿದರೆ ಬಿರಿಯಾನಿ ರೆಡಿ. ಇದನ್ನು ಸಲಾಡ್ ಜೊತೆ ಸವಿಯಿರಿ.

ಸಲಹೆ: ಪಾತ್ರೆಯ ಮುಚ್ಚಳ ಮೇಲೆ, ಕಲ್ಲು ಅಥವಾ ನೀರು ತುಂಬಿದ ಸ್ಟೀಲ್ ಕೊಡಪಾನದಂತಹ ಭಾರದ ವಸ್ತು ಇಟ್ಟರೆ ಆವಿ ಹೊರಬರುವುದಿಲ್ಲ.

English summary

Hyderabad Veg Biryani – A Complete Guide | Variety Of Biryani Reipe | ಹೈದ್ರಾಬಾದ್ ಬಿರಿಯಾನಿ- ಫರ್ಫೆಕ್ಟ್ ಗೈಡ್ | ಅನೇಕ ಬಗೆಯ ಬಿರಿಯಾನಿ ರೆಸಿಪಿ

For a biryani to be a biryani.It has to be cooked on dum. The biryanis which are pressure cooked, do not remain a biryani anymor. At least they should not be called biryani. Here are perfect biryani guide.
X
Desktop Bottom Promotion