For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಮೊಳಕೆ ಕಾಳು ಪಲಾವ್ ರೆಸಿಪಿ

|

ಇಂದಿನ ದಿನದಲ್ಲಿ ಆರೋಗ್ಯವಾಗಿರುವುದು ಅತಿ ಮುಖ್ಯವಾಗಿರುತ್ತದೆ. ಆರೋಗ್ಯವೇ ಭಾಗ್ಯ ಎಂಬಂತೆ ಉತ್ತಮ ಆರೋಗ್ಯವಿದ್ದರೆ ಮಾತ್ರ ಬಾಳು ಹಸನಾಗುತ್ತದೆ. ಈಗ ಜನರು ಆರೋಗ್ಯವಂತ ಆಹಾರದ ಕಡೆಗೆ ತಮ್ಮ ಗಮನವನ್ನು ಹರಿಸುತ್ತಿದ್ದಾರೆ. ಪೋಷಕಾಂಶ ಭರಿತ ಆಹಾರ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿ ನಮ್ಮ ದೈಹಿಕ ಚಟುವಟಿಕೆಗೆ ಶಕ್ತಿಯನ್ನು ನೀಡುತ್ತದೆ.

ಇಂದಿನ ಲೇಖನದಲ್ಲಿ ಒಂದು ಆರೋಗ್ಯಯುತ ಆಹಾರ ಪದ್ಧತಿಯನ್ನು ನಾವು ನಿಮಗಿಲ್ಲಿ ನೀಡಿದ್ದು ಅವು ನಿಜವಾಗಿಯೂ ನಿಮಗೆ ಫಲಪ್ರದವಾಗಿದೆ. ಇಲ್ಲಿ ನೀಡಿರುವ ವೀಡಿಯೋ ರೆಸಿಪಿಯು ಖಂಡಿತವಾಗಿಯೂ ಈ ಪಲಾವ್ ರೆಸಿಪಿಯನ್ನು ತಯಾರಿಸಲು ನಿಮಗೆ ಫಲಕಾರಿಯಾಗಿದೆ.

Healthy Sprouts Pulao Recipe With Video

ರುಚಿಕರವಾಗಿರುವ ಟೊಮೆಟೊ ಚಿತ್ರಾನ್ನ ರೆಸಿಪಿ

ಪ್ರಮಾಣ: 3
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಚಿಕನ್‌ಗುನ್ಯಾ ತಡೆಗೆ ಬೇವಿನ ಚೋಕಾ ರೆಸಿಪಿ!

ಸಾಮಾಗ್ರಿಗಳು:
* ಬ್ರೌನ್ ರೈಸ್ - 2 ಕಪ್‌ಗಳು
* ಮಿಶ್ರ ಮಾಡಿದ ಧಾನ್ಯ - 1 ಕಪ್ (ನೀರಿನಲ್ಲಿ ನೆನೆಸಿದ್ದು)
* ಈರುಳ್ಳಿ - 1 (ಕತ್ತರಿಸಿದ್ದು)
* ಬೆಳ್ಳುಳ್ಳಿ - 3-4 ಎಸಳು (ತುಂಡರಿಸಿದ್ದು)
* ಶುಂಠಿ - 1 ಸ್ಪೂನ್ (ತುಂಡರಿಸಿದ್ದು)
* ಟೊಮೇಟೊ - 1 (ಕತ್ತರಿಸಿದ್ದು)
* ಕ್ಯಾಪ್ಸಿಕಂ - 1 (ಕತ್ತರಿಸಿದ್ದು)
* ಉಪ್ಪು - ರುಚಿಗೆ ತಕ್ಕಷ್ಟು
* ಅರಶಿನ ಹುಡಿ - 1 ಸ್ಪೂನ್
* ಮೆಣಸಿನ ಹುಡಿ - 1 ಸ್ಪೂನ್
* ಪಾವ್ ಭಾಜಿ ಮಸಾಲಾ - 2 ಸ್ಪೂನ್
* ಜೀರಿಗೆ ಹುಡಿ - 1 ಸ್ಪೂನ್
* ಎಣ್ಣೆ - 2 ಸ್ಪೂನ್
* ನೀರು - 1/2 ಕಪ್

ಬಾಯಲ್ಲಿ ನೀರೂರಿಸುವ ಡಿನ್ನರ್ ರೆಸಿಪಿಗಳು!

ಮಾಡುವ ವಿಧಾನ:
1. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ ಹಾಕಿ. ಅದು ಒಡೆಯಲು ಬಿಡಿ.
2. ಈಗ ಕತ್ತರಿಸಿದ ಈರುಳ್ಳಿಯನ್ನು ಅದಕ್ಕೆ ಹಾಕಿ ಅದು ಕೆಂಪಗಾಗುವವರೆಗೆ ಹುರಿಯಿರಿ.
3. ನಂತರ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಅರಶಿನ, ಮೆಣಸಿನ ಹುಡಿ ಮತ್ತು ಟೊಮೇಟೊವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ 3-4 ನಿಮಿಷಗಳ ಕಾಲ ಬೇಯಿಸಿ.
4. ಸ್ವಲ್ಪ ನೀರು ಹಾಕಿ ಟೊಮೇಟೋ ಬೇಯಲು ಬಿಡಿ
5. ನಂತರ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ ಮತ್ತು ಸ್ವಲ್ಪ ನೀರು ಹಾಕಿ ಅದನ್ನು ಬೇಯಿಸಿ.
6. ಈಗ ಪಾವ್ ಬಾಜಿ ಮಸಾಲಾ, ನೆನೆಸಿದ ಧಾನ್ಯಗಳು ಮತ್ತು ಉಪ್ಪು ಸೇರಿಸಿ.
7. ಈಗ ಬೇಯಿಸಿದ ಬ್ರೌನ್ ರೈಸ್ ಸೇರಿಸಿ ಮತ್ತು ಚೆನ್ನಾಗಿ ಕಲಸಿ.
8. ಒಮ್ಮೆ ಪೂರ್ತಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ ಮತ್ತು ಸವಿಯಲು ನೀಡಿ
ಈ ಆರೋಗ್ಯವಂತ ಪಲಾವ್ ರೆಸಿಪಿಯನ್ನು ನಿಮ್ಮ ಆರೋಗ್ಯದ ಸುಧಾರಿಕೆಗಾಗಿ ಪ್ರಯತ್ನಿಸಿ ಮತ್ತು ಆರೋಗ್ಯವಂತರಾಗಿರಿ.

X
Desktop Bottom Promotion