For Quick Alerts
ALLOW NOTIFICATIONS  
For Daily Alerts

ಸ್ವಾದದ ರುಚಿಯನ್ನು ದ್ವಿಗುಣಗೊಳಿಸುವ ಕೆಂಪಕ್ಕಿ ಮಶ್ರೂಮ್ ಖಾದ್ಯ

By Super
|

ಇಂದು ಮಾರುಕಟ್ಟೆಯಲ್ಲಿ ಸಿಗುವ ಅಕ್ಕಿ ಪೂರ್ಣವಾಗಿ ನೈಸರ್ಗಿಕವಲ್ಲ. ಗಿರಣಿಯಲ್ಲಿ ಇದನ್ನು ಸ್ವಲ್ಪ ಪಾಲಿಶ್ ಮಾಡಿ ಮೇಲಿನ ಕಂದುಬಣ್ಣದ ಕವಚವನ್ನು (ತೌಡು) ತೆಗೆದುಬಿಡಲಾಗುತ್ತದೆ. ಏಕೆಂದರೆ ಈ ಕವಚವಿದ್ದರೆ ರುಚಿ ಕೊಂಚ ಒಗರಾಗುವುದು ಮಾತ್ರವಲ್ಲದೇ ಬೇಯಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ವಾಸ್ತವವಾಗಿ ಈ ಕವಚದಲ್ಲಿ ಉತ್ತಮ ಪೋಷಕಾಂಶ ಹಾಗೂ ಎಣ್ಣೆಯ ಅಂಶವಿದೆ. ತೌಡಿನಿಂದ ಈ ಎಣ್ಣೆಯನ್ನು ತೆಗೆಯಬಹುದು.

rice bran oil ಎಂಬ ಹೆಸರಿನಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಪಾಲಿಶ್ ಮಾಡದ ಅಕ್ಕಿಯ ಮಹತ್ವವನ್ನು ಮನಗಂಡವರ ಬೇಡಿಕೆಯಿಂದಾಗಿ ಈಗ ಪಾಲಿಶ್ ಇಲ್ಲದ ಅಕ್ಕಿ ಮಾರುಕಟ್ಟೆಯಲ್ಲಿ ಹೇರಳವಲ್ಲದಿದ್ದರೂ ಅಲ್ಪಪ್ರಮಾಣದಲ್ಲಾದರೂ ಲಭ್ಯವಿದೆ. ಈ ಉತ್ತಮ ಗುಣವುಳ್ಳ ಅಕ್ಕಿಯನ್ನು ವಿವಿಧ ತರಕಾರಿಗಳೊಂದಿಗೆ ಪಲಾವ್ ಮಾಡಿ ಬಡಿಸಿದರೆ ಉತ್ತಮ ರುಚಿ ಮತ್ತು ಆರೋಗ್ಯಕರವಾದ ಆಹಾರವನ್ನು ಪಡೆಯಬಹುದು.

Healthy Brown Rice Mushroom Recipe

ಇಂದು ಪಾಲಿಶ್ ಇಲ್ಲದ ಅಕ್ಕಿ, ಅಣಬೆ ಮತ್ತು ದೊಣ್ಣೆಮೆಣಸಿನಿಂದ ಮಾಡಬಹುದಾದ ಸ್ವಾದಿಷ್ಟ ಖಾದ್ಯವೊಂದನ್ನು ನೋಡೋಣ. ಇದಕ್ಕಾಗಿ ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ಸುಮಾರು ಅರ್ಧ ಗಂಟೆ ನೆನೆಸಿಡಬೇಕು. ಮಕ್ಕಳಿಗೆ, ಮಧುಮೇಹಿಗಳಿಗೆಂದೇ ಸಕ್ಕರೆರಹಿತ ಸಿಹಿತಿಂಡಿ

ಪ್ರಮಾಣ: ನಾಲ್ಕು ಜನರಿಗಾಗಿ
*ಸಿದ್ಧತೆಯ ಸಮಯ: ಇಪ್ಪತ್ತು ನಿಮಿಷಗಳು
*ಅಡುಗೆಗೆ ತಗಲುವ ಸಮಯ: ಮೂವತ್ತೈದು ನಿಮಿಷಗಳು

ಬೇಕಾಗುವ ಸಾಮಾಗ್ರಿಗಳು:
*ಕೆಂಪಕ್ಕಿ (ಕುಚ್ಚಲಕ್ಕಿ) -3 ಕಪ್
*ಹಸಿರು ಬೀನ್ಸ್ - ಎರಡು ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ಹಸಿಮೆಣಸು - ಒಂದು ಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ಉಪ್ಪು-ರುಚಿಗನುಸಾರವಾಗಿ


*ಈರುಳ್ಳಿ- ಮೂರು ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ಬೆಳ್ಳುಳ್ಳಿ- ಒಂದು ಚಿಕ್ಕ ಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ದೊಣ್ಣೆಮೆಣಸು -ಎರಡು ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು)- ಬಣ್ಣದ ವೈವಿಧ್ಯತೆಗಾಗಿ ಕೆಂಪು ಮತ್ತು ಹಸಿರನ್ನು ಬಳಸಿ
*ಅಣಬೆ - ನಾಲ್ಕು ದೊಡ್ಡಚಮಚ
*ಬಿಳಿಯ ಕಾಳುಮೆಣಸಿನ ಪುಡಿ - ಒಂದು ಚಿಕ್ಕಚಮಚ
*ಆಲಿವ್ ಎಣ್ಣೆ - ಎರಡು ದೊಡ್ಡಚಮಚ
*ನೀರು - ಅರ್ಧ ಲೀ.
*ಕೊತ್ತಂಬರಿ ಸೊಪ್ಪು-ಅಲಂಕಾರಕ್ಕಾಗಿ ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ

ವಿಧಾನ:
*ಒಂದು ದಪ್ಪತಳವಿರುವ ಅಗಲವಾದ ಪಾತ್ರೆಯನ್ನು ಒಲೆಯ ಮೇಲಿಟ್ಟು ಪಾತ್ರೆ ಬಿಸಿಯಾದ ಬಳಿಕ ಆಲಿವ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಈರುಳ್ಳಿ ಹಾಕಿ ಅಲುಗಾಡಿಸಿ. ಬಳಿಕ ಬೆಳ್ಳುಳ್ಳಿ ಸೇರಿಸಿ. ಈರುಳ್ಳಿ ನಸುಗಂದು ಬಣ್ಣ ಪಡೆಯುವವರೆಗೂ ಚಿಕ್ಕ ಉರಿಯಲ್ಲಿ ಹುರಿಯಿರಿ. ಈಗ ಬೀನ್ಸ್, ಉಪ್ಪು ಮತ್ತು ಹಸಿಮೆಣಸನ್ನು ಸೇರಿಸಿ.
*ಸುಮಾರು ಮೂರು ನಿಮಿಷಗಳ ನಂತರ ಅಣಬೆಯನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಅಣಬೆ ಮೃದುವಾಗುವವೆರೆಗೆ ಅಲುಗಾಡಿಸುತ್ತಾ ಇರಿ.


*ಅಣಬೆ ಬೆಂದ ಬಳಿಕ ಸಾವಕಾಶವಾಗಿ ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ ಹುರಿಯುವುದನ್ನು ಮುಂದುವರೆಸಿ. ಇದಕ್ಕೆ ಬಿಳಿ ಕಾಳುಮೆಣಸಿನ ಪುಡಿಯನ್ನು ಸೇರಿಸಿ. ಬಳೀಕ ನೀರು ಮತ್ತು ಇನ್ನುಳಿದ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ. ದೊಣ್ಣೆಮೆಣಸಿನ ತುಂಡುಗಳನ್ನು ಕೇವಲ ಮೇಲ್ಭಾಗದಲ್ಲಿ ಮಾತ್ರ ಹರಡಿ (ಹರಡಿದ ಬಳಿಕ ಕಲಸಬೇಡಿ).
* ಬಳಿಕ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ ಉರಿಯನ್ನು ಕಿರಿದಾಗಿಸಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷದವರೆಗೆ ಹಬೆಯಲ್ಲಿ ಬೇಯಲು ಬಿಡಿ. ಮುಚ್ಚಳದ ಸಂದಿನಿಂದ ಹಬೆಹೊರಹೋಗುವಂತೆ ಕಂಡಾಗ ಬೆಂಕಿ ನಂದಿಸಿ ಕೆಳಗಿಳಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಆಹಾರಕ್ಕೆ ಪರ್ಯಾಯ ಪದವೇ ಕೆಂಪಕ್ಕಿ ಅನ್ನ

ಈ ಖಾದ್ಯದ ಪೌಷ್ಟಿಕತೆ:
ಇದು ಅತ್ಯಂತ ಪರಿಪೂರ್ಣವಾದ ಆಹಾರವಾಗಿದ್ದು ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಕರಗದ ನಾರಿನಂಶ ಹೊಂದಿದೆ. ತೂಕ ಕಳೆದುಕೊಳ್ಳಲಿಚ್ಛಿಸುವವರಿಗೂ ಈ ಖಾದ್ಯ ಹೇಳಿ ಮಾಡಿಸಿದಂತಿದೆ. ಸುಲಭವಾಗಿ ಜೀರ್ಣವಾಗುವ ಕಾರಣ ಕುಟುಂಬದ ಎಲ್ಲಾ ಸದಸ್ಯರು ಸೇವಿಸಬಹುದು.

ಕಿವಿಮಾತು:
ಪಾಲಿಶ್ ಅಕ್ಕಿಗೆ ಪೂರ್ಣವಾಗಿ ಬೇಯಲು ಇತರ ಅಕ್ಕಿಗಿಂತಲೂ ದುಪ್ಪಟ್ಟು ಹೆಚ್ಚಿನ ನೀರು ಬೇಕಾಗಿರುವುದರಿಂದ ಅರ್ಧ ಲೀಟರ್ ನೀರು ಸಾಕಾಗದಿದ್ದರೆ ಕೊಂಚ ಹೆಚ್ಚಿನ ನೀರು ಸೇರಿಸಬಹುದು.

English summary

Healthy Brown Rice Mushroom Recipe

Brown rice is one of the best to use if you want to lose weight quickly. This type of rice is however difficult to cook since it is thicker when compared to white rice. Here is how you prepare brown rice with mushroom, take a look.
X
Desktop Bottom Promotion