For Quick Alerts
ALLOW NOTIFICATIONS  
For Daily Alerts

ಮಲಬಾರ್ ಶೈಲಿಯಲ್ಲಿ ಘೀ ರೈಸ್

|

ಹೆಚ್ಚಿನವರು ಘೀ ರೈಸ್ ಮಾಡುವುದು ಕಷ್ಟದ ಕೆಲಸವೆಂದು ಭಾವಿಸಿರುತ್ತಾರೆ. ಆದರೆ ಇದನ್ನು ಪಲಾವ್ ನಷ್ಟೇ ಸುಲಭವಾಗಿ ತಯಾರಿಸಬಹುದು. ಘೀ ರೈಸ್ ಅನ್ನು ಅನೇಕ ರುಚಿಯಲ್ಲಿ ಮಾಡಬಹುದು. ಇಲ್ಲಿ ನಾವು ಕ್ಯಾರೆಟ್ ಹಾಕಿ ಮಾಡುವ ಮಲಬಾರ್ ಶೈಲಿಯ ಘೀ ರೈಸ್ ನೀಡಿದ್ದೇವೆ ನೋಡಿ:

ಘೀ ರೈಸ್ ರೆಸಿಪಿ:

Ghee Rice Malabar Style

ಬೇಕಾಗುವ ಸಾಮಾಗ್ರಿಗಳು
ಬಾಸುಮತಿ ಅಕ್ಕಿ 2 ಕಪ್
ತುಪ್ಪ 4 ಚಮಚ
ಪಲಾವ್ ಎಲೆ(bay leaf)1
ಏಲಕ್ಕಿ 1/4 ಚಮಚ
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಲವಂಗ 3-4
ಕರಿ ಮೆಣಸು 6
ಈರುಳ್ಳಿ 1
ಕ್ಯಾರೆಟ್ 1
ಗೋಡಂಬಿ 6-7
ಬಾದಾಮಿ 5
ಒಣದ್ರಾಕ್ಷಿ 6-7
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಮೊದಲು ಅಕ್ಕಿಯನ್ನು ತೊಳೆದಿಡಿ.

* ಈಗ ಪ್ರೆಶರ್ ಕುಕ್ಕರ್ ಗೆ 2 ಚಮಚ ತುಪ್ಪ ಹಾಕಿ ಅದು ಬಿಸಿಯಾದಾಗ ಗೋಡಂಬಿ, ಬಾದಾಮಿ ಒಣದ್ರಾಕ್ಷಿ ಹಾಕಿ 2 ನಿಮಿಷ ಫ್ರೈ ಮಾಡಿ ಡ್ರೈ ಫ್ರೂಟ್ಸ್ ತೆಗೆದು ಬದಿಯಲ್ಲಿಡಿ.

* ನಂತರ ಮತ್ತೆ 2 ಚಮಚ ತುಪ್ಪ ಹಾಕಿ ಬಿಸಿ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕರಿ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ತುರಿದ ಕ್ಯಾರೆಟ್ ಹಾಕಿ 2-3 ನಿಮಿಷ ಫ್ರೈ ಮಾಡಿ.

* ನಂತರ ತೊಳೆದ ಅಕ್ಕಿಯನ್ನು ಹಾಕಿ ಫ್ರೈ ಮಾಡಿ, 4 ಕಪ್ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ.
* ನಂತರ ಇರಿಯಿಂದ ಇಳಿಸಿ, 5 ನಿಮಿಷ ಹಾಗೇ ಬಿಟ್ಟು ನಂತರ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿದರೆ ಘೀ ರೈಸ್ ರೆಡಿ.
ಇದನ್ನು ಪಚಡಿ ಜೊತೆ ಸವಿಯಿರಿ.

English summary

Ghee Rice Malabar Style

The ghee rice that we are going to make today is a Malabar recipe. This Malabar style recipe comes from the coastal regions of Kerala. The special feature in this ghee rice recipe is the fried dry fruits and vegetables that are added to it.
X
Desktop Bottom Promotion