For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಡಿನ್ನರ್ ರೆಸಿಪಿಗಳು!

|

ಆಹಾರದಲ್ಲಿ ವೈವಿಧ್ಯವನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ಭಾರತೀಯರು ಭೋಜನಪ್ರಿಯರು. ಬೆಳಗ್ಗಿನ ತಿಂಡಿ, ಮಧ್ಯಾಹ್ನದೂಟ, ರಾತ್ರಿಯಡುಗೆ ಹೀಗೆ ಪ್ರತಿಯೊಂದರಲ್ಲೂ ವೈವಿಧ್ಯತೆಯನ್ನು ನಾವು ಬಯಸುತ್ತೇವೆ. ಈ ವೈವಿಧ್ಯತೆ ಆರೋಗ್ಯಕರವಾಗಿದ್ದರೆ ಎಷ್ಟು ಚೆನ್ನ ಅಲ್ಲವೇ?

ರುಚಿಯಾದ ಆಹಾರಗಳು ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣವಾಗದಂತಹ ಆರೋಗ್ಯ ಪದ್ಧತಿಯನ್ನು ನಾವು ರೂಢಿಸಿಕೊಳ್ಳಬೇಕು. ಬೆಳಗ್ಗಿನ ತಿಂಡಿ ಹಿತಮಿತವಾಗಿ, ಮಧ್ಯಾಹ್ನದೂಟ ತುಸು ಪುಷ್ಕಳವಾಗಿ ರಾತ್ರಿಯೂಟ ಹೊಟ್ಟೆ ಭರ್ತಿಯಾಗದಂತೆ ಆಹಾರ ವಿಧಾನವನ್ನು ನಾವು ಅನುಸರಿಸಬೇಕಾದ್ದು ಆರೋಗ್ಯಪೂರ್ಣ ದೇಹಕ್ಕೆ ರುವಾರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಲೂ ಕೋಫ್ತಾ ಸೈಡ್ ಡಿಶ್ ರೆಸಿಪಿ

ಆಹಾರ ಸೇವನೆಯೊಡನೆ ದೇಹಕ್ಕೆ ಅಗತ್ಯವಾದ ದೈಹಿಕ ವ್ಯಾಯಾಮಗಳನ್ನು ನಾವು ಪಾಲಿಸಬೇಕು. ಹೆಚ್ಚಿನವರಿಗೆ ರಾತ್ರಿ ಭೋಜನವನ್ನು ಮಿತವಾಗಿ ಹೇಗೆ ಸೇವಿಸಬೇಕೆಂಬುದು ತುಂಬಾ ಚಿಂತೆಯಾಗಿಬಿಟ್ಟಿರುತ್ತದೆ. ರಾತ್ರಿ ನಾವು ನಿದ್ದೆ ಮಾಡುವುದರಿಂದ ದೇಹಕ್ಕೆ ವ್ಯಾಯಾಮವಿರುವುದಿಲ್ಲ ಈ ಸಮಯದಲ್ಲಿ ಅತಿಯಾಗಿ ಆಹಾರ ಸೇವಿಸುವುದು ಹೊಟ್ಟೆ ಬಿರಿಯುವಂತೆ ಭೋಜನ ಮಾಡುವುದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಆದ್ದರಿಂದಲೇ ಮಿತವಾದ ಆಹಾರವನ್ನು ಸೇವಿಸಿ ರಾತ್ರಿಯನ್ನು ಕಳೆಯಬೇಕೆಂಬುದನ್ನು ಆಯರ್ವೇದದಲ್ಲಿ ಸಹ ತಿಳಿಸಲಾಗಿದೆ.

ರಾತ್ರಿ ವೇಳೆಯ ಆಹಾರವು ಒಂದೇ ಬಗೆಯದಾಗಿದ್ದರೆ ಅದನ್ನು ತಿನ್ನುವ ಬಯಕೆ ಮೂಡುವುದಿಲ್ಲ. ಸಸ್ಯಾಹಾರಿಗಳಂತೂ ಏಕ ರೂಪದ ಆಹಾರವನ್ನು ನಿತ್ಯ ರಾತ್ರಿ ಸೇವಿಸಲು ಇಷ್ಟಪಡಲಾರರು. ಒಮ್ಮೊಮ್ಮೆ ಮನ ಬಯಸಿತೆಂದು ರಾತ್ರಿ ಹೊಟ್ಟೆ ಬಿರಿಯ ತಿಂದು ಬಿಡುತ್ತಾರೆ. ಅದಕ್ಕಾಗಿ ನಿತ್ಯದ ರೋಟಿ ಸಬ್ಜಿಯಿಂದ ನಿಮ್ಮನ್ನು ಹೊಸ ರೆಸಿಪಿ ಲೋಕದತ್ತ ಕೊಂಡೊಯ್ಯುವ ಕೆಲಸವನ್ನು ಬೋಲ್ಡ್ ಸ್ಕೈ ಇಂದು ಮಾಡುತ್ತಿದೆ. ರುಚಿಕರ ಹಾಗೂ ಸ್ವಾದಿಷ್ಟ ಡಿನ್ನರ್ ಮೆನುಗಳನ್ನು ನಾವಿಂದು ನಿಮಗಾಗಿ ನೀಡುತ್ತಿದ್ದು ಖಂಡಿತ ಇವುಗಳು ನಿಮಗೆ ಪ್ರಯೋಜನಕಾರಿಯಾಗಬಲ್ಲದು.

ಆರೋಗ್ಯ ಸಲಹೆ: ಯಾವಾಗಲೂ ನಿದ್ರಿಸುವ 3-4 ಗಂಟೆಗಳಿಗಿಂತ ಮುಂಚಿತವಾಗಿ ರಾತ್ರಿಯೂಟವನ್ನು ಮುಗಿಸಿ. ಹೀಗೆ ಮಾಡುವುದು ಅತಿ ತೂಕವನ್ನು ನಿಯಂತ್ರಿಸಿ ಆಹಾರ ಜೀರ್ಣವಾಗಲು ಸಹಕಾರಿಯಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಕ್ಕಳ ವಿಶೇಷ ರೆಸಿಪಿ ಆಲೂ ಪೂರಿ!

ಸಸ್ಯಾಹಾರಿ ಕಿಚಡಿ ರೆಸಿಪಿ:

ಸಸ್ಯಾಹಾರಿ ಕಿಚಡಿ ರೆಸಿಪಿ:

ಹೊಟ್ಟೆ ಭರ್ತಿ ಮಾಡುವ, ಕೊಬ್ಬು ಕಡಿಮೆ ಇರುವ ಆರೋಗ್ಯಪೂರ್ಣ ರಾತ್ರಿಯೂಟ ಕಿಚಡಿಯಾಗಿದೆ. ಕೆಲವು ತರಕಾರಿಗಳಾದ ಬೀನ್ಸ್, ಕ್ಯಾಪ್ಸಿಕಂ ಮತ್ತು ಬಟಾಣಿಯನ್ನು ಬಳಸಿ ಇದನ್ನು ಇನ್ನಷ್ಟು ರಸಮಯಗೊಳಿಸಬಹುದು.

ಪನ್ನೀರ್ ಭುರ್ಜಿ:

ಪನ್ನೀರ್ ಭುರ್ಜಿ:

ರಾತ್ರಿಗೆ ಯಾವ ಆಹಾರವನ್ನು ತಯಾರಿಸಬೇಕೆಂದು ಗೊಂದಲಗೊಂಡಿರುವಿರಾ? ಹಾಗಿದ್ದರೆ ಸಸ್ಯಾಹಾರಿ ಪನ್ನೀರ್ ಭುಜಿಯಾವನ್ನು ಟ್ರೈ ಮಾಡಬಹುದಲ್ಲಾ? ಮೊಟ್ಟೆ ಭುರ್ಜಿಗೆ ಸಮನಾಗಿ ಈ ಸಸ್ಯಾಹಾರಿ ಡಿಶ್ ಅನ್ನು ತಯಾರಿಸಬಹುದು. ಇಲ್ಲಿನ ವಿಶೇಷತೆಯೆಂದರೆ ಮೊಟ್ಟೆಗೆ ಬದಲಾಗಿ ಪನ್ನೀರ್ ಅನ್ನು ಇಲ್ಲಿ ಬಳಸಲಾಗುತ್ತದೆ.

ಮಶ್ರೂಮ್ ಪೆಪ್ಪರ್ ರೈಸ್:

ಮಶ್ರೂಮ್ ಪೆಪ್ಪರ್ ರೈಸ್:

ದಿನದ ದೀರ್ಘ ಕೆಲಸದ ನಂತರ, ಮಾಡಲು ಸುಲಭವಾಗಿರುವ ಆಹಾರವನ್ನು ನೀವು ಬಯಸುತ್ತೀರಿ. ಹೆಚ್ಚು ನ್ಯೂಟ್ರೀನ್‌ಗಳನ್ನು ಒಳಗೊಂಡಿರುವ ಮಶ್ರೂಮ್ ಪೆಪ್ಪರ್ ರೈಸ್ ಮಾಡಲು ತುಂಬಾ ಸರಳವಾಗಿದೆ.

ಕಲರ್‌ಫುಲ್ ಚಿಕ್‌ಪೀಸ್ ಪುಲಾವ್:

ಕಲರ್‌ಫುಲ್ ಚಿಕ್‌ಪೀಸ್ ಪುಲಾವ್:

ರಾತ್ರಿಯೂಟಕ್ಕೆ ನೀವು ಸಿದ್ಧಪಡಿಸಬಹುದಾದ ಪುಲಾವ್ ರೆಸಿಪಿಯಾಗಿದೆ ಚಿಕ್‌ಪೀಸ್ ಪುಲಾವ್. ಇದನ್ನು ಸುಲಭವಾಗಿ ತಯಾರಿಸಬಹುದಾಗಿದೆ. ನಿಮಗೆ ಇದನ್ನು ತಯಾರಿಸಲು ಬೇಕಾದ ಸಮಯ ಕೇವಲ 20 ನಿಮಿಷಗಳು ಇನ್ನೇನು ಯೋಚನೆ ಇಂದೇ ಸಿದ್ಧಪಡಿಸಿ.

ಸ್ಪೈಸಿ ಪನ್ನೀರ್ ಮಸಾಲಾ:

ಸ್ಪೈಸಿ ಪನ್ನೀರ್ ಮಸಾಲಾ:

ಕೆಲಸದ ನಂತರದ ನಿಮ್ಮ ಸುಸ್ತಿನ ಮೂಡ್ ಅನ್ನು ಫ್ರೆಶ್ ಮಾಡಲು ಬಯಸುತ್ತೀರಾ? ಹಾಗಿದ್ದರೆ ಈ ರುಚಿಯಾದ ವೆಜಿಟೇರಿಯನ್ ಡಿನ್ನರ್ ರೆಸಿಪಿಯನ್ನು ತಯಾರಿಸಿ. ಪನ್ನೀರ್ ಇಷ್ಟಪಡುವವರಿಗೆ ಇದು ಬಾಯಲ್ಲಿ ನೀರು ಬರಿಸುವುದಂತೂ ಖಂಡಿತ.

ಸ್ಪ್ಯಾನಿಶ್ ರೈಸ್:

ಸ್ಪ್ಯಾನಿಶ್ ರೈಸ್:

ಬಣ್ಣದ ಬಣ್ಣದ ತರಕಾರಿಗಳನ್ನು ಒಳಗೊಂಡು ಇತರ ಸಾಮಾಗ್ರಿಗಳು ಬೆರೆತ ಸ್ಪ್ಯಾನಿಶ್ ರೈಸ್ ರೆಸಿಪಿಯ ಹೆಸರನ್ನು ನೀವು ಕೇಳಿದ್ದೀರಾ. ತಯಾರಿಸಲು ಅತಿ ಸರಳವಾಗಿರುವ ರೆಸಿಪಿ ಇದಾಗಿದೆ.

ಪಂಜಾಬಿ ಸ್ಟೈಲ್ ರಾಜ್ಮಾ:

ಪಂಜಾಬಿ ಸ್ಟೈಲ್ ರಾಜ್ಮಾ:

ಹೆಚ್ಚಿನ ಸಸ್ಯಾಹಾರಿಗಳು ರಾಜ್ಮಾವನ್ನು ರಾತ್ರಿ ತಯಾರಿಸುತ್ತಾರೆ ಮತ್ತು ರೋಟಿ ಅಥವಾ ಸ್ಟೀಮ್‌ಡ್ ರೈಸ್ ಅನ್ನು ರಾಜ್ಮಾಗೆ ಸಿದ್ಧಪಡಿಸುತ್ತಾರೆ. ನೀವು ನಿಜವಾಗಿಯೂ ರಾಜ್ಮಾದ ನಿಜವಾದ ರುಚಿಯನ್ನು ತಯಾರಿಸಲು ಸಿದ್ಧರಿದ್ದೀರೆಂದರೆ ಪಂಜಾಬ್ ಸ್ಟೈಲ್ ರಾಜ್ಮಾವನ್ನು ತಯಾರಿಸಿ. ಇದು ತುಂಬಾ ಸರಳವಾಗಿದ್ದು, ರುಚಿಕರ ಹಾಗೂ ಯಮ್ಮಿಯಾಗಿದೆ.

ಸಿಜ್‌ವನ್ ಫ್ರೈಡ್ ರೈಸ್:

ಸಿಜ್‌ವನ್ ಫ್ರೈಡ್ ರೈಸ್:

ಚೈನೀಸ್ ಅಡುಗೆಯನ್ನು ಇಷ್ಟಪಡುತ್ತೀರಾ? ಹಾಗಿದ್ದರೆ ಈ ರೆಸಿಪಿಯನ್ನು ಇಂದು ರಾತ್ರಿಗಾಗಿ ನೀವು ತಯಾರಿಸಬಹುದು. ಚಿಕನ್ ಮತ್ತು ಮೊಟ್ಟೆಯನ್ನು ಆರೋಗ್ಯಪೂರ್ಣ ತರಕಾರಿಗಳಾದ ಬೀನ್ಸ್, ಕ್ಯಾರೇಟ್, ಈರುಳ್ಳಿ, ಸ್ಪ್ರಿಂಗ್ ಆನಿಯನ್ಸ್, ಕ್ಯಾಪ್ಸಿಕಂನೊಂದಿಗೆ ಸ್ಥಳಾಂತರಿಸಿ.

ಮೆಂತ್ಯ ಆಲೂ ರೆಸಿಪಿ:

ಮೆಂತ್ಯ ಆಲೂ ರೆಸಿಪಿ:

ಮೆಂತ್ಯ ಆಲೂ ರೆಸಿಪಿ ಸರಳವಾದ ಡಿಶ್ ಆಗಿದ್ದು ತಾಜಾ ಮೆಂತ್ಯ ಎಲೆಗಳು ಮತ್ತು ಬೇಬಿ ಆಲೂಗಡ್ಡೆಗಳನ್ನು ಬಳಸಿಕೊಂಡು ಹಲವಾರು ಮನೆಗಳಲ್ಲಿ ಇದನ್ನುತಯಾರಿಸುತ್ತಾರೆ. ಆರೋಗ್ಯಪೂರ್ಣ ಮಿತವಾದ ರಾತ್ರಿಯೂಟಕ್ಕೆ ಇದು ಹೇಳಿ ಮಾಡಿಸಿದ ರೆಸಿಪಿಯಾಗಿದೆ.

ಅಮೃತ್‌ಸಾರಿ ಸ್ಟಫ್ಡ್ ಆಲೂ ಕುಲ್ಚಾ:

ಅಮೃತ್‌ಸಾರಿ ಸ್ಟಫ್ಡ್ ಆಲೂ ಕುಲ್ಚಾ:

ರೆಸ್ಟೋರೆಂಟ್ ಸುವಾಸನೆಯನ್ನು ನಿಮ್ಮ ರಾತ್ರಿಯೂಟಕ್ಕೆ ತರಲು ಬಯಸುತ್ತೀರಾ? ಹಾಗಿದ್ದರೆ ಹೊಟ್ಟೆ ಭರ್ತಿ ಮಾಡುವ ರುಚಿಕರವಾದ ಅಮೃತ್‌ಸಾರಿ ಸ್ಟಫ್ಡ್ ಆಲೂ ಕುಲ್ಚಾವನ್ನು ಪ್ರಯತ್ನಿಸಿ. ರಾಜ್ಮಾ ಅಥವಾ ರಾಯಿತಾ ಇದಕ್ಕೆ ಜೊತೆಯಾಗಲಿ.

Read more about: cookery ಅಡುಗೆ
English summary

Delicious Vegetarian Dinner Recipes

It is advised that one must always have a light dinner. But a lot of people get confused thinking what to eat for a light dinner. Well, it is not about sandwiches or soups for everyone. Dieters are more cautious about what they eat for dinner.
X
Desktop Bottom Promotion