For Quick Alerts
ALLOW NOTIFICATIONS  
For Daily Alerts

ಬಾಯಿಯಲ್ಲಿ ನೀರೂರಿಸುವ ಹೂಕೋಸಿನ ರೈಸ್ ರೆಸಿಪಿ

|

ಗೋಬಿ ರೈಸ್ ರೆಸಿಪಿಯು ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಹೂಕೋಸಿನ ಅನ್ನವನ್ನು ಭಾರತದಲ್ಲಿ ಗೋಬಿ ರೈಸ್ ಎಂದು ಸಹ ಕರೆಯುತ್ತಾರೆ. ಈ ವಾರದ ದಿನಗಳಲ್ಲಿ ಯಾವುದನ್ನು ಮಾಡಲಿ ಎಂದು ನೀವು ಆಲೋಚಿಸುತ್ತಿದ್ದಲ್ಲಿ, ಗೋಬಿ ರೈಸ್ ಒಂದು ಒಳ್ಳೆಯ ಖಾದ್ಯವಾಗಿದೆ. ಅದರಲ್ಲೂ ತುಂಬಾ ಖಾರದಿಂದ ಅಥವಾ ಮಸಾಲೆಯಿಂದ ಕೂಡಿರದ ಖಾದ್ಯ ನಿಮಗೆ ಬೇಕು ಎಂದಾದಲ್ಲಿ , ಗೋಬಿ ರೈಸ್ ನಿಮಗೆ ಹೇಳಿ ಮಾಡಿಸಿದ ಆಯ್ಕೆಯಾಗಿರುತ್ತದೆ.

ಇದನ್ನು ತಯಾರಿಸುವುದು ಸುಲಭ ಮತ್ತು ಶೀಘ್ರವಾಗಿ ತಯಾರಿಸಬಹುದು. ನಿಮಗೆ ಅಗತ್ಯವಿದ್ದಲ್ಲಿ, ಇದಕ್ಕೆ ಆಲೂಗಡ್ಡೆಗಳನ್ನು ಮತ್ತು ಇನ್ನಿತರ ತರಕಾರಿಗಳನ್ನು ಇದಕ್ಕೆ ಬೆರೆಸಬಹುದು. ಇದರಿಂದ ರುಚಿಯು ಹೆಚ್ಚುತ್ತದೆ ಮತ್ತು ಪೋಷಕಾಂಶಗಳು ಸಹ ಹೆಚ್ಚುತ್ತವೆ. ಬನ್ನಿ ಹೂಕೋಸಿನಲ್ಲಿ ಅನ್ನ ತಯಾರಿಸುವ ಬಗೆಯನ್ನು ಮುಂದೆ ತಿಳಿದುಕೊಳ್ಳೋಣ. ಮಧ್ಯಾಹ್ನ ಊಟದ ಸವಿಯನ್ನು ಹೆಚ್ಚಿಸುವ ಕ್ಯಾರೆಟ್ ಅನ್ನ

Delicious Gobi Rice Recipe

*ಪ್ರಮಾಣ: ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ - 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ - 15 ನಿಮಿಷಗಳು

ನಿಮಗೆ ಬೇಕಾದ ಪದಾರ್ಥಗಳು
*ಬಾಸುಮತಿ ಅಕ್ಕಿಯಲ್ಲಿ ತಯಾರಿಸಿದ ಅನ್ನ- 2 ಕಪ್
*ಹೂಕೋಸು - ½ (ಕತ್ತರಿಸಿದಂತಹುದು)
*ಈರುಳ್ಳಿ - 1 (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿಗಳು - 2 (ಕತ್ತರಿಸಿದಂತಹುದು)
*ಜೀರಿಗೆ - ½ ಟೀ. ಚಮಚ
*ಖಾರದ ಪುಡಿ - ½ ಟೀ. ಚಮಚ
*ಅರಿಶಿಣ ಪುಡಿ - ½ ಟೀ. ಚಮಚ
*ಚಕ್ಕೆ - 2
*ಲವಂಗ - 2
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ ಆಹಾ ಉಡುಪಿ ಶೈಲಿಯ ರುಚಿಕರ ಸಾಂಬಾರ್ ರೆಸಿಪಿ!

ತಯಾರಿಸುವ ವಿಧಾನ
1. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮತ್ತು ಅದಕ್ಕೆ ಜೀರಿಗೆ, ಲವಂಗ ಮತ್ತು ಚಕ್ಕೆಯನ್ನು ಹಾಕಿ. ಜೀರಿಗೆ ಚಿಟ ಪಟ ಎಂದು ಸದ್ದು ಮಾಡುವವರೆಗೆ ಕಾಯಿರಿ, ನಂತರ ಅದಕ್ಕೆ ಈರುಳ್ಳಿಯನ್ನು ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಕಾಯಿರಿ.
2. ನಂತರ, ಇದಕ್ಕೆ ಹಸಿ ಮೆಣಸಿನ ಕಾಯಿಗಳನ್ನು ಮತ್ತು ಈರುಳ್ಳಿಗಳನ್ನು ಹಾಕಿ. ಚೆನ್ನಾಗಿ ಉರಿಯಿರಿ.
3. ಇದಾದ ಮೇಲೆ ಖಾರದಪುಡಿ, ಅರಿಶಿಣ ಪುಡಿ ಮತ್ತು ಉಪ್ಪನ್ನು ಹಾಕಿ. ಚೆನ್ನಾಗಿ ಕಲೆಸಿಕೊಡಿ.
4. ಈಗ ಬಾಣಲೆಗೆ ಹೂಕೋಸನ್ನು ಹಾಕಿ ಮತ್ತು ಎಲ್ಲಾ ಮಸಾಲೆ ಚೆನ್ನಾಗಿ ಬೆರೆಯುವಂತೆ ಕಲೆಸಿ ಕೊಡಿ. ಈ ಮಿಶ್ರಣವನ್ನು ಮಧ್ಯಮ ಗಾತ್ರದ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ.
5. ಗೋಬಿಯು ಹೊಂಬಣ್ಣಕ್ಕೆ ಬರುವವರೆಗೆ ಕಲೆಸಿಕೊಡಿ.
6. ಈಗ, ಇದಕ್ಕೆ ತಯಾರಿಸಿದ ಅನ್ನವನ್ನು ಹಾಕಿ ಮತ್ತು ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 5-6 ನಿಮಿಷ ಬೇಯಿಸಿ, ನಂತರ ಉರಿಯನ್ನು ಆರಿಸಿ. ಈಗ ಗೋಬಿ ಅನ್ನವು ತಯಾರಾಯಿತು. ಹೀಗೆ ಇದನ್ನು ತಯಾರಿಸುಸುವುದು ಸುಲಭ.

#ಪೋಷಕಾಂಶಗಳ ಪ್ರಮಾಣ
*ಅನ್ನದಲ್ಲಿ ಕಾರ್ಬೋಹೈಡ್ರೇಟ್‍ಗಳ ಪ್ರಮಾಣ ಅಧಿಕವಾಗಿರುತ್ತದೆ. ಇದು ನೀವು ಆರೋಗ್ಯವಾಗಿರಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
*ಹೂಕೋಸು ಎಂಬುದು ಒಂದು ಅದ್ಭುತವಾದ ತರಕಾರಿಯಾಗಿದೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹೂಕೋಸನ್ನು ಸೇವಿಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಯಬಹುದು.

#ಸಲಹೆ
*ಖಾದ್ಯವನ್ನು ಬೇಗ ಬೇಯಿಸಬೇಕೆಂದಾದಲ್ಲಿ, ಗೋಬಿ ರೈಸ್ ಖಾದ್ಯವನ್ನು ಪ್ರಯತ್ನಿಸಬಹುದು. ನಿಮಗೆ ಬೇಕಾದಲ್ಲಿ ಗೋಬಿ ರೈಸ್‍ಗೆ ಮಸಾಲೆಗಳನ್ನು ಹೆಚ್ಚು ಬೆರೆಸಬಹುದು. ಇದಕ್ಕೆ ಹಸಿ ಬಟಾಣಿಯನ್ನು ಸಹ ಬೆರೆಸಬಹುದು. ಇದು ಈ ಗೋಬಿ ರೈಸ್‍ನ ರುಚಿಯನ್ನು ಹೆಚ್ಚಿಸುತ್ತದೆ.

English summary

Delicious Gobi Rice Recipe

Recipe for gobi rice is famous in north India. Gobi rice is an Indian recipe. Cauliflower rice is called as gobi rice in India. It is one of the easiest rice recipes to make. you can add potatoes and other veggies to this dish to enhance its taste and nutrition. Read on to know how to make cauliflower rice.
X
Desktop Bottom Promotion