ಕರಿ ಫ್ರೈಡ್ ರೈಸ್ ರೆಸಿಪಿ

By:
Subscribe to Boldsky

Curry Fried Rice Recipe
ಫ್ರೈಡ್ ರೈಸ್ ಅನ್ನು ನಾನಾ ರುಚಿಯಲ್ಲಿ ತಯಾರಿಸಬಹುದು. ಇವತ್ತು ನಾವು ಕರಿ ಫ್ರೈಡ್ ರೈಸ್ ಮಾಡುವ ವಿಧಾನ ತಿಳಿಯೋಣ. ಈ ಫ್ರೈಡ್  ರೈಸ್ ಮಾಡಿ ಅದನ್ನು ಮೊಸರು ಬಜ್ಜಿ ಜೊತೆ ತಿಂದರೆ ತುಂಬಾ ರುಚಿಕರವಾಗಿರುತ್ತದೆ. ಕರಿ ಫ್ರೈಡ್ ರೈಸ್ ಮಾಡುವ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

ಬಾಸುಮತಿ ಅಕ್ಕಿ 2 ಕಪ್
ಸ್ವಲ್ಪ ಕರಿಬೇವಿನ ಎಲೆ
ಈರುಳ್ಳಿ 2-3
ಕ್ಯಾರೆಟ್ 1 ಕಪ್ (ಚಿಕ್ಕದಾಗಿ ಕತ್ತರಿಸಿದ್ದು)
ಬೀನ್ಸ್ 1 ಕಪ್ (ಕತ್ತರಿಸಿದ್ದು)
ದುಂಡು ಮೆಣಸಿನ ಕಾಯಿ 1
ಗೋಡಂಬಿ 10-15
ಮೆಣಸಿನ ಪುಡಿ (ಖಾರಕ್ಕೆ ತಕ್ಕಷ್ಟು)
ಕೊತ್ತಂಬರಿ ಪುಡಿ ಕಾಲು ಚಮಚ
ಅರಿಶಿಣ ಪುಡಿ ಕಾಲು ಚಮಚ
ಸೋಯಾ ಸಾಸ್ 1-2 ಚಮಚ
ಅಜ್ವೈನ್ ಚಿಟಿಕೆಯಷ್ಟು
ಎಣ್ಣೆ 2-3 ಚಮಚ
ರುಚಿಗೆ ತಕ್ಕ ಉಪ್ಪು


ತಯಾರಿಸುವ ವಿಧಾನ:

1. ಬಾಸುಮತಿ ಅಕ್ಕಿ ಜೊತೆ ಕರಿಬೇವಿನ ಎಲೆ ಹಾಕಿ ಅನ್ನ ಮಾಡಿಡಬೇಕು.

2. ನಂತರ ಅಗಲವಿರುವ ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ , ದುಂಡು ಮೆಣಸಿನ ಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಕ್ಯಾರೆಟ್, ಬೀನ್ಸ್, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ಹೊತ್ತು ಉರಿಯಬೇಕು. ನಂತರ ಚಿಟಿಕೆಯಷ್ಟು ಅಜ್ವೈನ್ ಹಾಕಬೇಕು. ನಂತರ ಸೋಯಾ ಸಾಸ್ ಹಾಕಿ 1-2 ನಿಮಿಷ ಹುರಿದು ಬೇಯಿಸಿಟ್ಟ ಅನ್ನವನ್ನು ಹಾಕಿ ಮಿಶ್ರ ಮಾಡಬೇಕು. ನಂತರ ಅನ್ನವನ್ನು ಹಾಕಿ ಕಡಿಮೆ ಉರಿಯಲ್ಲಿ 3-4 ನಿಮಿಷ ಹುರಿಯಬೇಕು.

ಈ ರೀತಿ ಮಾಡಿದರೆ ಸವಿಯಲು ರುಚಿಕರವಾದ ಕರಿ ಫ್ರೈಡ್ ರೈಸ್ ರೆಡಿ. 

Story first published: Tuesday, September 11, 2012, 12:58 [IST]
English summary

Curry Fried Rice Recipe | Variety Of Rice Recipe | ಕರಿ ಫ್ರೈಡ್ ರೈಸ್ ರೆಸಿಪಿ | ಅನೇಕ ಬಗೆಯ ರೈಸ್ ರೆಸಿಪಿ

Curry fried rice is a simple fried rice recipe whereby a little flavour of the exotic curry leaves is added to the rice recipe. The main flavour in this recipe comes from the curry leaves.
Please Wait while comments are loading...
Subscribe Newsletter