For Quick Alerts
ALLOW NOTIFICATIONS  
For Daily Alerts

ಮಧ್ಯಾಹ್ನ ಊಟದ ಸವಿಯನ್ನು ಹೆಚ್ಚಿಸುವ ಕ್ಯಾರೆಟ್ ಅನ್ನ

|

ಬಹುಶಃ ನೀವು ಕ್ಯಾರೆಟ್‍ನಿಂದ ಮಾಡಬಹುದಾದ ಹಲವಾರು ಬಗೆಯ ಖಾದ್ಯಗಳನ್ನು ಮನೆಯಲ್ಲಿ ಪ್ರಯತ್ನಿಸಿ ನೋಡಿರಬಹುದು. ಕ್ಯಾರೆಟ್‍ಗಳು (ಗಜ್ಜರಿ) ಒಳ್ಳೆಯ ಪೋಷಕಾಂಶ ಭರಿತ ತರಕಾರಿಗಳಾಗಿದ್ದು, ಇಡೀ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುವ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಅದು ತೂಕ ಇಳಿಸಿಕೊಳ್ಳುವುದಾಗಿರಲಿ ಅಥವಾ ಹೊಳೆಯುವ ತ್ವಚೆಯಾಗಿರಲಿ, ಕ್ಯಾರೆಟನ್ನು ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ಖಂಡಿತವಾಗಿ ನಿಮ್ಮ ಆಸೆ ಕೈಗೂಡುವುದು.

ಕ್ಯಾರೆಟ್‍ನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ, ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳು ಕಡಿಮೆಯಿರುತ್ತವೆ. ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ, ಮಧುಮೇಹದ ವಿರುದ್ಧ ಹೋರಾಡುತ್ತದೆ, ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗವನ್ನು ಸಹ ನಿಯಂತ್ರಿಸುತ್ತದೆ. ನಿಮಗೆ ಬೇಕಾದಲ್ಲಿ ನಿಮ್ಮಿಷ್ಟ ಬಂದಷ್ಟು ಕ್ಯಾರೆಟ್ ರೆಸಿಪಿಗಳನ್ನು ನೀವು ಮನೆಯಲ್ಲಿ ತಯಾರಿಸಿಕೊಳ್ಳಬಹುದು. ಕ್ಯಾರೆಟ್ ಜ್ಯೂಸಿನಿಂದ ಹಿಡಿದು, ಕ್ಯಾರೆಟ್ ಮಂಚೂರಿಯನ್‍ವರೆಗೆ ಕ್ಯಾರೆಟ್‍ನ ಖಾದ್ಯಗಳು ಬೆಳೆಯುತ್ತ ಹೋಗುತ್ತವೆ.

Carrot Rice Recipe For Lunch

ಅದರಲ್ಲೂ ಮಧ್ಯಾಹ್ನದ ಊಟಕ್ಕೆ ಕ್ಯಾರೆಟ್ ಅನ್ನ ಹೇಳಿ ಮಾಡಿಸಿದಂತಹ ಖಾದ್ಯವಾಗಿದೆ. ಇದನ್ನು ಮಾಡುವುದು ಸುಲಭ, ಜೊತೆಗೆ ಇದರ ರುಚಿ ನಿಮ್ಮನ್ನು ಇದರ ಅಭಿಮಾನಿಯನ್ನಾಗಿಸುತ್ತದೆ. ಇದು ಹೇಳಿ ಕೇಳಿ ಕ್ಯಾರೆಟ್ ರೆಸಿಪಿಯಾದರು, ಇದರಲ್ಲಿ ದಪ್ಪ ಮೆಣಸಿನಕಾಯಿ, ಈರುಳ್ಳಿಗಳು ಮತ್ತು ಬೆಳ್ಳುಳ್ಳಿಯನ್ನು ಸಹ ಬಳಸಲಾಗುತ್ತದೆ. ಆದ್ದರಿಂದ ಇದನ್ನು ಒಮ್ಮೆ ಪರೀಕ್ಷಿಸಿ ನೋಡಿಯೇ ಬಿಡಬೇಕೆಂಬ ಆಸೆ ನಿಮಗೆ ಬಂದಿರಬೇಕಲ್ಲವೇ? ಬನ್ನಿ ತಡ ಮಾಡದೆ ಇದನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ. ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ

*ಪ್ರಮಾಣ: 4 ಜನರಿಗೆ ಬಡಿಸಬಹುದು
*ಸಿದ್ಧತೆಗೆ ತಗುಲುವ ಸಮಯ: 10 ನಿಮಿಷ
*ಅಡುಗೆಗೆ ತಗುಲುವ ಸಮಯ: 25 ನಿಮಿಷ

ಬೇಕಾಗುವ ಪದಾರ್ಥಗಳು
*ಅನ್ನ- 2 ಕಪ್
*ಕ್ಯಾರೆಟ್‍ಗಳು- 4-5 (ಉದ್ದುದ್ದಕ್ಕೆ ಕತ್ತರಿಸಿರಬೇಕು)
*ಈರುಳ್ಳಿಗಳು - 2 (ಕತ್ತರಿಸಿದಂತಹುದು)
*ದಪ್ಪ ಮೆಣಸಿನ ಕಾಯಿ - 1 (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿ- 3-4 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 3 (ರುಬ್ಬಿದ ಅಥವಾ ಜಜ್ಜಿದಂತಹುದು)
*ಶುಂಠಿ - ½ ಇಂಚು (ಸಣ್ಣಗೆ ಕತ್ತರಿಸಿದಂತಹುದು)
*ಅರಿಶಿಣ ಪುಡಿ- 1 ಟೀ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಪಲಾವ್ ಮಸಾಲ - ½ 1 1 ಟೀ.ಚಮಚ
*ಕರಿ ಮೆಣಸು - ½ 1 ಟೀ.ಚಮಚ (ಪುಡಿ ಮಾಡಿದಂತಹುದು)
*ಜೀರಿಗೆ - ½ 1 ಟೀ.ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ- 2 1 ಟೀ.ಚಮಚ
*ಕೊತ್ತಂಬರಿ ಸೊಪ್ಪು - 1 ಟೀ.ಚಮಚ (ಕತ್ತರಿಸಿದಂತಹುದು)

ಮಾಡುವ ವಿಧಾನ
*ಆಳವಾದ ತಳವಿರುವ ಬಾಣಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಎಣ್ಣೆಯನ್ನು ಕಾಯಿಸಿ, ಅದು ಹಬೆಯಾಡಲು ಆರಂಭಿಸಿದಾಗ ಅದಕ್ಕೆ ಜೀರಿಗೆಯನ್ನು ಹಾಕಿ.
*ಇನ್ನು ಮಧ್ಯಮ ಗಾತ್ರದ ಉರಿಯಲ್ಲಿ ಬಾಣಲೆಯನ್ನು ಇಟ್ಟು ಅದಕ್ಕೆ ಈರುಳ್ಳಿಯನ್ನು ಹಾಕಿ, ಒಂದು ನಿಮಿಷ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ದಪ್ಪ ಮೆಣಸಿನ ಕಾಯಿಯನ್ನು ಹಾಕಿ. ಅದಕ್ಕೆ ಉಪ್ಪು ಮತ್ತು ಅರಿಶಿಣ ಪುಡಿಯನ್ನು ಚಿಮುಕಿಸಿ.
*ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು 4-5 ನಿಮಿಷಗಳ ಕಾಲ ಚೆನ್ನಾಗಿ ಕಲೆಸುತ್ತ ಇರಿ. ಈ ತರಕಾರಿಗಳು ಸ್ವಲ್ಪ ಮೃದುವಾಗುವವರೆಗು ಇದನ್ನು ಮುಂದುವರಿಸಿ.
*ಈಗ ಇದಕ್ಕೆ ಮಸಾಲೆಯನ್ನು ಬೆರೆಸಿ, ಅಂದರೆ ಕರಿಮೆಣಸು, ಖಾರದ ಪುಡಿ, ಪುಲಾವ್ ಮಸಾಲೆ, ಹಾಗು ಹಸಿ ಮೆಣಸಿನ ಕಾಯಿಗಳನ್ನು ಬೆರೆಸಿ, ಚೆನ್ನಾಗಿ ಕಲೆಸಿ ಕೊಡಿ.
*ಇದಕ್ಕೆ ನಿಧಾನವಾಗಿ ಅನ್ನವನ್ನು ಬೆರೆಸಿ ಮತ್ತು ಮಸಾಲೆಯು ಸಂಪೂರ್ಣವಾಗಿ ಬೆರೆಸಲಾಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದನ್ನು ಮಧ್ಯಮ ಗಾತ್ರದ ಉರಿಯ ಮೇಲೆ ಸ್ವಲ್ಪ ಹೊತ್ತು ಇಡಿ.
*ಕ್ಯಾರೆಟ್ ರೈಸ್ ರೆಸಿಪಿ ಈಗ ಬಡಿಸಲು ಸಿದ್ಧವಾಗಿದೆ, ಒಮ್ಮೆ ರುಚಿ ನೋಡಿ. ಇದರ ಮೇಲೆ ಅಲಂಕಾರಕ್ಕಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಚಿಮುಕಿಸಿ ಮತ್ತು ರಾಯಿತ ಅಥವಾ ಸಲಾಡ್ ಜೊತೆಗೆ ಬಿಸಿ ಬಿಸಿಯಾಗಿ ಬಡಿಸಿಕೊಳ್ಳಿ. ಕ್ಯಾರೆಟ್ ಪಾಲಾಕ್ ಮಸಾಲೆ ಅನ್ನ

English summary

Carrot Rice Recipe For Lunch

There are many carrot recipes that you can try at home. Carrots are very nutritious and offer numerous health benefits to the overall body. Be it weight loss or for the glowing skin, carrots can be surely added to your diet. 
X
Desktop Bottom Promotion