For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟ ಬೆಣ್ಣೆ ಕ್ಯಾಪ್ಸಿಕಂ ಮಿಶ್ರಿತ ಅನ್ನದ ರೆಸಿಪಿ

|

ಬೇರೆ ಬೇರೆ ವ್ಯಂಜನಗಳಲ್ಲಿ ಎದ್ದು ಕಾಣುವಂತಹದ್ದು ಅನ್ನ. ಭಾರತದಲ್ಲಂತೂ ಅನ್ನಕ್ಕೆ ಇರುವಷ್ಟು ಬೆಲೆ ಪ್ರಾಧಾನ್ಯತೆ ಬೇರೆ ಯಾವುದಕ್ಕೂಇಲ್ಲ. ಈ ಅನ್ನವನ್ನೂ ವಿಭಿನ್ನವಾಗಿ ಬೇರೆ ಬೇರೆ ತರಕಾರಿಗಳನ್ನು ಮಿಶ್ರ ಮಾಡಿ ಅದರ ರುಚಿಯನ್ನು ಹೆಚ್ಚಿಸಬಹುದು.

ಅದಕ್ಕಾಗಿ ಇಂದು ನಾವು ನಿಮಗಾಗಿ ರುಚಿ ಹೆಚ್ಚಿಸುವ ಬೆಣ್ಣೆ ಕ್ಯಾಪ್ಸಿಕಂ ಅನ್ನದ ರೆಸಿಪಿಯನ್ನು ಮುಂದಿಡುತ್ತಿದ್ದೇವೆ. ಮಾಡಲು ಸುಲಭವಾದ ಆರೋಗ್ಯಕರ ಡಿಶ್ ಇದಾಗಿದ್ದು ಬೇಜಾರುಗೊಂಡಿರುವ ನಾಲಿಗೆಗೆ ಹೊಸ ಸವಿಯನ್ನು ಉಣಿಸುತ್ತದೆ. ನೀವು ಹೊರಗಡೆ ಹೋದಾಗಲೂ ಈ ನಳಪಾಕವನ್ನು ತೆಗೆದುಕೊಂಡು ಹೋಗಿ ಆನಂದಿಸಬಹುದು.

ಸುಗಂಧಿತವಾಗಿರುವ ಬೆಣ್ಣೆ ಕ್ಯಾಪ್ಸಿಕಂ ಮಿಶ್ರತ ಅನ್ನ ಮಕ್ಕಳಿಗಂತೂ ಸಂತೋಷವನ್ನುಂಟು ಮಾಡುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ. ಹಾಗಿದ್ದರೆ ಮತ್ತೇಕೆ ತಡ, ಈ ಸವಿರುಚಿಯನ್ನು ಮಾಡಲು ಮುಂದೆ ಓದಿ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ರುಚಿಕರ ತಿನಿಸು ವ್ರೇಪ್

Butter and Capsicum Rice Recipe

ಪ್ರಮಾಣ - 3-4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ - 10 ನಿಮಿಷಗಳು
ಅಡುಗೆಗೆ ತಗಲುವ ಸಮಯ - 20-25 ನಿಮಿಷಗಳು

ಸಾಮಾಗ್ರಿಗಳು
1. ಅನ್ನ - 2 ಕಪ್ (ಚೆನ್ನಾಗಿ ಬೇಯಿಸಿ ಉದುರಾಗಿರಬೇಕು)
2.ಕ್ಯಾಪ್ಸಿಕಂ - 1 (ತುಂಡರಿಸಿದ್ದು)
3.ಹಸಿಮೆಣಸಿನ ಪೇಸ್ಟ್ - 1ಟೇಸ್ಪೂನ್
4.ಸಾಸಿವೆ - 1/2 ಟೇಸ್ಪೂನ್
5.ಜೀರಿಗೆ - 1/2 ಟೇಸ್ಪೂನ್
6.ಗೇರುಬೀಜ - 1ಟೇಸ್ಪೂನ್ (ತುಂಡರಿಸಿ ತುಪ್ಪದಲ್ಲಿ ಹುರಿದಿರುವಂಥದ್ದು)
7.ಕಾಳುಮೆಣಸಿನ ಪುಡಿ - 1/2 ಟೇಸ್ಪೂನ್
8.ದಾಲ್ಚಿನ್ನಿ - 1 ಸಣ್ಣದು
9.ತೆಂಗಿನ ತುರಿ - 1 ಟೇಸ್ಪೂನ್ (ಬೇಕಿದ್ದರೆ)
10.ಉಪ್ಪು - ರುಚಿಗೆ ತಕ್ಕಷ್ಟು
11.ಬೆಣ್ಣೆ - 1ಟೇಸ್ಪೂನ್
12.ತುಪ್ಪ - 1/2 ಟೇಸ್ಪೂನ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಾಲಿಫ್ಲವರ್ ಪಲಾವ್ ರೆಸಿಪಿ

ಮಾಡುವ ವಿಧಾನ
1.ಬೆಣ್ಣೆ ಮತ್ತು ತುಪ್ಪವನ್ನು ಕರಗಿಸಿಕೊಳ್ಳಿ. ಕರಗಿದ ನಂತರ ಜೀರಿಗೆ ಸಾಸಿವೆ ಹಾಕಿ. ಅದನ್ನು ಸಿಡಿಯಲು ಬಿಡಿ.
2.ದಾಲ್ಚಿನ್ನಿ ಕೋಲು ಮತ್ತು ಹಸಿಮೆಣಸು ಪೇಸ್ಟ್ ಅನ್ನು ಸಣ್ಣ ಉರಿಯಲ್ಲಿ ಸೌಟಿನಿಂದ ಸ್ವಲ್ಪ ಸಮಯ ತಿರುಗಿಸಿ.
3.ಇದೀಗ ತುಂಡರಿಸಿದ ಕ್ಯಾಪ್ಸಿಕಂ ಅನ್ನು ಸೇರಿಸಿ ಮತ್ತು 4 ನಿಮಿಷಗಳಷ್ಟು ಕಾಲ ಮಂದ ಉರಿಯಲ್ಲಿ ಬೇಯಿಸಿ. ಹೆಚ್ಚು ಬೇಯಿಸಬೇಡಿ. ಕ್ಯಾಪ್ಸಿಕಂ ಗರಿ ಗರಿಯಾಗಿರಲಿ.
4.ಉಪ್ಪು ಮತ್ತು ಕಾಳುಮೆಣಸಿನ ಹುಡಿಯನ್ನು ಚಿಮುಕಿಸಿ.
5.ಬೇಯಿಸಿದ ಅನ್ನ ಮತ್ತು ಹುರಿದ ಗೋಡಂಬಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ
6.2 ನಿಮಿಷಗಳಷ್ಟು ಕಾಲ ಬೇಯಿಸಿ. ತುರಿದ ತೆಂಗಿನ ಕಾಯಿಯನ್ನು ಸೇರಿಸಿ ಮತ್ತು ಮಿಶ್ರ ಮಾಡಿ.
7.ಉರಿಯನ್ನು ನಿಲ್ಲಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸರಳವಾದ ಮೀನಿನ ಸಾರಿನ ರೆಸಿಪಿ

ಬೆಣ್ಣೆ ಕ್ಯಾಪ್ಸಿಕಂ ಮಿಶ್ರಿತ ಅನ್ನವನ್ನು ಚಟ್ನಿ ಪದಾರ್ಥ ಅಥವಾ ಉಪ್ಪಿನಕಾಯಿಯೊಂದಿಗೆ ಬಿಸಿಯಾಗಿ ಬಡಿಸಿ.

Read more about: cookery ಅಡುಗೆ
English summary

Butter and Capsicum Rice Recipe

Rice is one of the staple foods in many cuisines. Take Indian cuisine for example. A meal in many parts of the country is incomplete without rice. That is why there are varieties of rice dishes that are available in the market.
Story first published: Tuesday, February 4, 2014, 18:06 [IST]
X
Desktop Bottom Promotion