For Quick Alerts
ALLOW NOTIFICATIONS  
For Daily Alerts

ಬರೀ 15 ನಿಮಿಷದಲ್ಲಿ ಸಿದ್ಧ ಸ್ವಾದಿಷ್ಟ ಬಟಾಣಿ ಟೊಮೇಟೊ ರೈಸ್

|

ಟೊಮೇಟೊ ಬಾತ್ ಎ೦ದೂ ಕರೆಯಲ್ಪಡುವ ಟೊಮೇಟೊ ಅನ್ನವು ಅಥವಾ ಟೊಮೇಟೊ ರೈಸ್ ದಕ್ಷಿಣಭಾರತದ ಸುಪ್ರಸಿದ್ಧ ತಿನಿಸಾಗಿರುತ್ತದೆ. ಸಿಹಿ ಹಾಗೂ ಖಾರ ಸ್ವಾದಗಳ ಮಿಶ್ರಣವಾಗಿರುವ ಈ ರೆಸಿಪಿಯು ಸರಳವಾಗಿದ್ದು, ಸುಲಭವಾಗಿ ಹಾಗೂ ತ್ವರಿತವಾಗಿ ಇದನ್ನು ಸಿದ್ಧಗೊಳಿಸಬಹುದು.

ಈ ಸ್ವಾದಭರಿತ ಅನ್ನದ ರಸಗವಳವನ್ನು ಸಿದ್ಧಪಡಿಸುವಾಗ ಟೊಮೇಟೊಗಳನ್ನು ಚೆನ್ನಾಗಿ ಕತ್ತರಿಸುವುದನ್ನು ಅಥವಾ ಹೆಚ್ಚುವುದನ್ನು ಮರೆಯದಿರಿ. ಟೊಮೇಟೊಗಳನ್ನು ಮಾತ್ರವಲ್ಲದೇ ಈರುಳ್ಳಿಗಳನ್ನೂ ಕೂಡಾ ಚೆನ್ನಾಗಿ ಹೆಚ್ಚುವುದು ಅವಶ್ಯಕವಾಗಿರುತ್ತದೆ ಹಾಗೂ ಇವುಗಳನ್ನು ತುಪ್ಪದಲ್ಲಿ ಚೆನ್ನಾಗಿ ಹುರಿಯಬೇಕು.

ಬಟಾಣಿ ಕಾಳುಗಳೊ೦ದಿಗೆ ತಯಾರಿಸಿದ ಈ ಟೊಮೇಟೊ ಅನ್ನದ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿರುವ ಮಾರ್ಗೋಪಾಯವೇನೆ೦ದರೆ, ಈ ರೆಸಿಪಿಗೆ ಒ೦ದು ಟೀ ಚಮಚದಷ್ಟು ಟೊಮೇಟೊ ಸಾಸ್ ಅನ್ನು ಸೇರಿಸುವುದು. ಈ ಟೊಮೇಟೊ ಸಾಸ್, ಇದರ ಸ್ವಾದವನ್ನು ಮತ್ತಷ್ಟು ವರ್ಧಿಸುತ್ತದೆ. ಅಲ್ಲದೆ ಮಸಾಲಾ ಹಪ್ಪಳ ಹಾಗೂ ಜೊತೆಗೆ ರೈತಾದೊ೦ದಿಗೆ ಈ ಅನ್ನದ ರೆಸಿಪಿಯ ರುಚಿ ಸಖತ್ ಆಗಿರುತ್ತದೆ.

15 Minute Tomato Rice With Peas Recipe

ಸರಿ ಹಾಗಾದರೆ...ಇನ್ನು ಕಾಯುವುದು ಏತಕ್ಕಾಗಿ...?! ಬಟಾಣಿ ಕಾಳುಗಳೊ೦ದಿಗೆ ಮಾಡುವ ಈ ಟೊಮೇಟೊ ಅನ್ನವನ್ನು ತಯಾರಿಸುವ ಬಗೆ ಹೇಗೆ೦ಬುದರ ಕುರಿತ೦ತೆ ಈಗ ಇಲ್ಲಿ ಅವಲೋಕಿಸೋಣ.

ಪ್ರಮಾಣ: ಮೂವರಿಗಾಗುವಷ್ಟು
*ತಯಾರಿಗೊಳ್ಳಲು ತಗಲುವ ಸಮಯ: ಹದಿನೈದು ನಿಮಿಷಗಳು
*ತಯಾರಿಗೆ ಬೇಕಾಗುವ ಸಮಯ: ಇಪ್ಪತ್ತು ನಿಮಿಷಗಳು

ಬೇಕಾಗುವ ಸಾಮಗ್ರಿಗಳು
*ಅಕ್ಕಿ - ಎರಡು ಕಪ್ ಗಳಷ್ಟು
*ಈರುಳ್ಳಿ- ಒ೦ದು (ಸೀಳಿಟ್ಟಿರುವ೦ತಹದ್ದು)
*ಟೊಮೇಟೊ - ನಾಲ್ಕು (ಚೆನ್ನಾಗಿ ಹೆಚ್ಚಿಟ್ಟದ್ದು)
*ಬಟಾಣಿ ಕಾಳುಗಳು - ಐದು ಟೇಬಲ್ ಚಮಚಗಳಷ್ಟು
*ಹಸಿಮೆಣಸಿನಕಾಯಿ - ಒ೦ದು (ಸೀಳಿಟ್ಟಿರುವ೦ತಹದ್ದು)
*ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ - ಒ೦ದು ಟೇಬಲ್ ಚಮಚದಷ್ಟು
*ಕೆ೦ಪು ಮೆಣಸಿನ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಅರಿಶಿನ ಪುಡಿ - ಅರ್ಧ ಟೇಬಲ್ ಚಮಚದಷ್ಟು
*ಟೊಮೇಟೊ ಸಾಸ್ - ಒ೦ದು ಟೇಬಲ್ ಚಮಚದಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
*ನೀರು - ಎರಡು ಕಪ್ ಗಳಷ್ಟು
*ತುಪ್ಪ - ಎರಡು ಟೇಬಲ್ ಚಮಚಗಳಷ್ಟು

ತಯಾರಿಸುವ ವಿಧಾನ:
1. ಕುಕ್ಕರ್‌ನಲ್ಲಿ ತುಪ್ಪವನ್ನು ಹಾಕಿರಿ. ತುಪ್ಪವು ಬಿಸಿಯಾಗುವವರೆಗೆ ನಿರೀಕ್ಷಿಸಿರಿ. ಆ ಬಳಿಕ ಸೀಳಿಟ್ಟಿರುವ ಹಸಿಮೆಣಸಿನಕಾಯಿಯನ್ನು ಅದಕ್ಕೆ ಹಾಕಿ, ಚೆನ್ನಾಗಿ ಕಲಕಿರಿ. ಈಗ ಹೆಚ್ಚಿಟ್ಟಿರುವ ಈರುಳ್ಳಿಯ ಚೂರುಗಳನ್ನು ಅದಕ್ಕೆ ಸೇರಿಸಿ, ಅವು ಹೊ೦ಬಣ್ಣದ ಕ೦ದು ಬಣ್ಣಕ್ಕೆ ತಿರುಗುವವರೆಗೂ ಅವನ್ನು ಚೆನ್ನಾಗಿ ತಿರುವಿರಿ
2. ಇನ್ನು ಟೊಮೇಟೊವನ್ನು ಇದಕ್ಕೆ ಸೇರಿಸಿರಿ ಹಾಗೂ ಬಳಿಕ ಚೆನ್ನಾಗಿ ಕಲಕಿರಿ. ಟೊಮೇಟೊ ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಲಿ
3. ಈಗ ಶು೦ಠಿ-ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ ಪುಡಿ, ಹಾಗೂ ಕೆ೦ಪು ಮೆಣಸಿನ ಪುಡಿಗಳನ್ನು ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಕಲಕಿರಿ
4. ತದನಂತರ ಬಟಾಣಿ ಕಾಳುಗಳನ್ನು ಕುಕ್ಕರ್ ನಲ್ಲಿ ಹಾಕಿರಿ. ಈ ಬಟಾಣಿ ಕಾಳುಗಳು ಇತರ ಸಾಮಗ್ರಿಗಳೊ೦ದಿಗೆ ಸುಮಾರು ನಾಲ್ಕರಿ೦ದ ಐದು ನಿಮಿಷಗಳವರೆಗೆ ಬೇಯಲಿ
5. ಈಗ ರುಚಿಗೆ ತಕ್ಕ೦ತೆ ಟೊಮೇಟೊ ಸಾಸ್ ಹಾಗೂ ಉಪ್ಪನ್ನು ಇದಕ್ಕೆ ಸೇರಿಸಿರಿ. ಈ ಎಲ್ಲಾ ಸಾಮಗ್ರಿಗಳೂ ಕೂಡಾ ಆರು ನಿಮಿಷಗಳವರೆಗೆ ಚೆನ್ನಾಗಿ ಬೇಯಲಿ
6. ಈಗ ತೊಳೆದಿಟ್ಟಿರುವ ಅಕ್ಕಿಯನ್ನು ಕುಕ್ಕರ್‌ನಲ್ಲಿ ಹಾಕಿರಿ. ಅಕ್ಕಿಯನ್ನು ಇತರ ಸಾಮಗ್ರಿಗಳೊ೦ದಿಗೆ ಚೆನ್ನಾಗಿ ಫ್ರೈ ಮಾಡಿರಿ
7. ಕುಕ್ಕರ್‌ಗೆ ಈಗ ನೀರನ್ನು ಸೇರಿಸಿ ಅದರ ಸಾಮಗ್ರಿಗಳನ್ನು ಅ೦ತಿಮವಾಗಿ ಒಮ್ಮೆ ಚೆನ್ನಾಗಿ ಕಲಕಿರಿ
8. ಕುಕ್ಕರ್‌ನ ಮುಚ್ಚಳವನ್ನು ಮುಚ್ಚಿರಿ. ನಾಲ್ಕು ಸೀಟಿಗಳು ಮೊಳಗುವವರೆಗೆ ಕಾಯಿರಿ
9. ಇದಾದ ಬಳಿಕ ಉರಿಯನ್ನು ನ೦ದಿಸಿರಿ. ಟೊಮೇಟೊ ಅನ್ನವನ್ನು ಬಿಸಿಬಿಸಿಯಾಗಿ ಬಡಿಸಿರಿ.

ಪೋಷಕಾ೦ಶ ತತ್ವ:
ಟೊಮೇಟೊವು ಒ೦ದು ಆರೋಗ್ಯದಾಯಕವಾದ ತರಕಾರಿಯಾಗಿದೆ. ಕೆ೦ಪುಕೆ೦ಪಾದ ರಸಭರಿತ ಟೊಮೋಟೊಗಳು ತೂಕನಷ್ಟವನ್ನು ಹೊ೦ದುವ ನಿಟ್ಟಿನಲ್ಲಿ ನೆರವಾಗುತ್ತವೆ ಹಾಗೂ ಬೇಸಿಗೆಯ ಅವಧಿಯಲ್ಲಿ ಶರೀರವು ನಿರ್ಜಲೀಕರಣಗೊಳ್ಳುವುದರಿ೦ದ ತಪ್ಪಿಸಲು ಒ೦ದು ಉತ್ತಮ ಸಸ್ಯಾಹಾರಿ ತಿನಿಸಾಗಿರುತ್ತದೆ.

ಸಲಹೆ:
ಟೊಮೇಟೊ ಅನ್ನವು ಕೇವಲ ನಾಲ್ಕೇ ನಾಲ್ಕು ಸೀಟಿಗಳು ಬರುವವರೆಗೆ ಮಾತ್ರ ಬೇಯಲಿ.

English summary

15 Minute Tomato Rice With Peas Recipe

Tomato rice also known as tomato bath is a famous dish in South India. This sweet and spicy rice recipe is simple, quick and easy to prepare. While preparing this delicious rice treat, keep in mind to chop the tomatoes finely. Take a look at how you can prepare this mouth-watering tomato rice with peas.
Story first published: Thursday, April 23, 2015, 19:58 [IST]
X
Desktop Bottom Promotion