For Quick Alerts
ALLOW NOTIFICATIONS  
For Daily Alerts

ಅಸದಳ ರುಚಿಯ ಹೂಕೋಸು ಜೊತೆಗೆ ಮೊಸರಿನ ಗ್ರೇವಿ!

|

ನಾವು ನೀಡಿದ ಆ ಖಾರವಾದ ತಿನಿಸುಗಳನ್ನು ಈ ವಾರ ಪೂರ್ತಿ ಮಾಡಲು ಪ್ರಯತ್ನಿಸಿದಿರಾ? ಹಾಗಾದರೆ ಬನ್ನಿ ನಾವು ನಿಮಗಾಗಿ ಒಂದಿಷ್ಟು ವಿಶೇಷವಾದ ಖಾದ್ಯಗಳನ್ನು ತಯಾರಿಸುವ ಬಗೆಯನ್ನು ತಿಳಿಸುತ್ತಿದ್ದೇವೆ. ಇದು ನಿಜವಾಗಿಯೂ ನಿಮ್ಮ ರುಚಿ ಗ್ರಂಥಿಗಳನ್ನು ಖಂಡಿತವಾಗಿ ತೃಪ್ತಿಗೊಳಿಸುತ್ತದೆ. ಈ ಮಧ್ಯಾಹ್ನ ಹೂ ಕೋಸಿನ ಜೊತೆಗೆ ಮೊಸರಿನ ಗ್ರೇವಿಯನ್ನು ಮಾಡಿಕೊಳ್ಳಿ. ಇದು ಈ ನಾಲ್ಕು ಹೂ ದಳಗನ್ನು ಹೊಂದಿರುವ ತರಕಾರಿಯು ಬ್ರೊಕ್ಕೊಲಿ ಕುಟುಂಬಕ್ಕೆ ಸೇರಿರುವುದರಿಂದ ಜನರ ಮನ್ನಣೆಗೆ ಪಾತ್ರವಾಗಿದೆ.

ಒಂದು ವೇಳೆ ಹೂ ಕೋಸು ಕಹಿ ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ, ನೀವು ಖಂಡಿತ ತಪ್ಪು ತಿಳಿದಿದ್ದೀರಿ ಎಂದೇ ಅರ್ಥ!. ಇದು ಆರೋಗ್ಯಕರವು ಹೌದು ಮತ್ತು ಅದೇ ಸಮಯಕ್ಕೆ ರುಚಿಕರವು ಹೌದು.

ಹೂಕೋಸಿನ ಜೊತೆಗೆ ಮೊಸರಿನ ಗ್ರೇವಿಯನ್ನು ತಯಾರಿಸುವುದು ಎಂದರೆ ನಿಮ್ಮ ಮನಸ್ಸಿಗೆ ಮೊದಲು ಬರುವುದು, ಸಿಹಿ ಖಾದ್ಯವಲ್ಲವೆ. ಆದರೆ ಇದಕ್ಕೆ ಸ್ವಲ್ಪ ಖಾರವನ್ನು ಅಧಿಕವಾಗಿ ಬೆರೆಸುವ ಮೂಲಕ ಈ ಗ್ರೇವಿಗೆ ಒಳ್ಳೆಯ ರುಚಿಯನ್ನು ನೀಡಬಹುದು.

ಈ ರುಚಿಯಾದ ಗ್ರೇವಿಯನ್ನು ತಯಾರಿಸುವಾಗ, ಚಮಚದಲ್ಲಿ ಇದನ್ನು ತಿರುವಿ ಕೊಡುತ್ತ ಇರಿ. ಇದು ಹೂಕೋಸು ಮುರಿಯುವುದನ್ನು ತಡೆಯುತ್ತದೆ. ಬನ್ನಿ ಇನ್ನು ತಡ ಮಾಡದೆ ಹೂಕೋಸಿನ ಜೊತೆಗೆ ಮೊಸರಿನ ಖಾದ್ಯವನ್ನು ತಯಾರಿಸುವ ಬಗೆಯನ್ನು ತಿಳಿದುಕೊಂಡು ಬರೋಣ. ಹೂಕೋಸು ಮತ್ತು ಹಸಿ ಬಟಾಣಿ ಬಾತ್

*ಪ್ರಮಾಣ - 4 ಜನರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
*ಅಡುಗೆ ಮಾಡಲು ತೆಗೆದುಕೊಳ್ಳುವ ಸಮಯ:25 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಹೂಕೋಸು- 3 ಕಪ್‍ಗಳು (ತುಂಡುಗಳಾಗಿ ಕತ್ತರಿಸಿದಂತಹವು)
*ಎಣ್ಣೆ - 3 ಟೀ.ಚಮಚ
*ಜೀರಿಗೆ- 1/2 ಟೀ.ಚಮಚ
*ಮೆಂತ್ಯೆ - 1/2 ಟೀ.ಚಮಚ
*ರಾಗಿ ಬೀಜಗಳು- 1/2 ಟೀ.ಚಮಚ
*ಇಂಗು -1/2 ಟೀ.ಚಮಚ
*ಕಡಲೆ ಹಿಟ್ಟು -1/2 ಟೀ.ಚಮಚ
*ಅರಿಶಿಣ - 1/4 ಟೀ.ಚಮಚ
*ಕೆಂಪು ಮೆಣಸಿನ ಪುಡಿ - 1/4 ಟೀ.ಚಮಚ
*ಶುಂಠಿ - 1 ಟೀ.ಚಮಚ (ಉದ್ದುದ್ದಕ್ಕೆ ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ - 1 (ಉದ್ದಕ್ಕೆ ಕತ್ತರಿಸಿದಂತಹುದು)
*ಮೊಸರು - 1/2 ಕಪ್
*ಉಪ್ಪು ರುಚಿಗೆ ತಕ್ಕಷ್ಟು
*ನೀರು - 1 ಕಪ್ (ಅಂದಾಜು ಮಾತ್ರ)
*ಗರಂ ಮಸಾಲ - 1/4 ಟೀ.ಚಮಚ

ತಯಾರಿಸುವ ವಿಧಾನ
1. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಚೆನ್ನಾಗಿ ಕಾಯಿಸಿ. ಇದು ಬಿಸಿಯಾದಾಗ ಇದಕ್ಕೆ ಜೀರಿಗೆಯನ್ನು ಹಾಕಿ, ಸಿಡಿಯುವವರ್ಗೆ ಕಾಯಿರಿ.
2. ಈಗ ಇದಕ್ಕೆ ಮೆಂತ್ಯೆ, ಸಾಸಿವೆ ಮತ್ತು ಇಂಗು ಹಾಕಿ ಚೆನ್ನಾಗಿ ಕಲೆಸಿಕೊಡಿ. ಯಾವಾಗ ಈ ಬೀಜಗಳು ಒಡೆಯಲು ಆರಂಭಿಸುತ್ತವೋ ಆಗ ಉರಿಯನ್ನು ಕಡಿಮೆ ಮಾಡಿ.
3. ಇನ್ನು ಕಡಲೆ ಹಿಟ್ಟನ್ನು ಹಾಕಿ, ಒಂದು ನಿಮಿಷದವರೆಗೆ ಚೆನ್ನಾಗಿ ಕಲೆಸಿಕೊಡಿ. ಕಡಲೆ ಹಿಟ್ಟು ಹೊಂಬಣ್ಣಕ್ಕೆ ಬರುವವರೆಗು ಇದನ್ನು ಮುಂದುವರಿಸಿ.
4. ಈ ಮಿಶ್ರಣಕ್ಕೆ ಶುಂಠಿ, ಹಸಿ ಮೆಣಸಿನ ಕಾಯಿ, ಅರಿಶಿಣ, ಕೆಂಪು ಮೆಣಸಿನಕಾಯಿ ಪುಡಿಯನ್ನು ಬೆರೆಸಿ. ಒಂದು ಚಪ್ಪಟೆಯಾದ ಚಮಚದಿಂದ ಇದನ್ನು ಚೆನ್ನಾಗಿ ಕಲೆಸಿಕೊಡಿ. ಈಗ ಈ ಖಾದ್ಯಕ್ಕೆ ಮೊಸರನ್ನು ಬೆರೆಸಿ. ಪಾತ್ರೆನಲ್ಲಿರುವ ಪದಾರ್ಥಗಳ ಜೊತೆಗೆ ಇದನ್ನು ಚೆನ್ನಾಗಿ ಕಲೆಸಿಕೊಡಿ.


5. ಇದಕ್ಕೆ ನೀರು ಮತ್ತು ಉಪ್ಪನ್ನು ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿಕೊಳ್ಳಿ. ನಂತರ ಇದಕ್ಕೆ ಬೆಂದ ಹೂಕೋಸುಗಳನ್ನು ಹಾಕಬೇಕು. ಈ ತರಕಾರಿಗಳು 18 ನಿಮಿಷ ಬೇಯಲು ಬಿಡಿ. ಇದು ಬೆಂದ ಮೇಲೆ ಉರಿಯನ್ನು ಆರಿಸಿ, ಇದರ ಮೇಲೆ ಗರಂ ಮಸಾಲ ಮತ್ತು ಕೊತ್ತಂಬರಿಯನ್ನು ಚಿಮುಕಿಸುವ ಮೂಲಕ ಅಲಂಕರಿಸಿ

ಪೋಷಕಾಂಶಗಳ ಪ್ರಮಾಣ
ಹೂಕೋಸುಗಳಲ್ಲಿ ಕ್ಲೋರಿನ್‍ನ ಪ್ರಮಾಣವು ಅಧಿಕವಾಗಿರುತ್ತದೆ. ಇದೊಂದು ವಿಟಮಿನ್ ಬಿ ಆಗಿದ್ದು, ಮೆದುಳಿನ ಬೆಳವಣಿಗೆಯಲ್ಲಿ ಗಣನೀಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಆದ್ದರಿಂದ ಇದನ್ನು ನಿಮ್ಮ ಮಕ್ಕಳಿಗೆ ತಪ್ಪದೆ ತಿನ್ನಿಸಿ!

ಹೂಕೋಸುಗಳು ತಾಜಾ ಆಗಿರಬೇಕು ಮತ್ತು ಗ್ರೇವಿ ಗಟ್ಟಿಯಾಗಿರಬೇಕು. ಇದರ ಗಟ್ಟಿತನವನ್ನು ನಿಮ್ಮ ರುಚಿಯ ಪ್ರಮಾಣಕ್ಕನುಗುಣವಾಗಿ ಹೊಂದಿಸಿಕೊಳ್ಳಿ. ಈ ರುಚಿಯಾದ ಮೊಸರಿನ ಜೊತೆಗಿನ ಹೂಕೋಸನ್ನು ವೈಟ್ ಬ್ರೆಡ್ ಜೊತೆಗೆ ಸೇವಿಸಲು ಚೆನ್ನಾಗಿರುತ್ತದೆ. ಇದನ್ನು ಪೀಸ್ ಪಲಾವ್ ಜೊತೆಗು ಸಹ ಸೇವಿಸಬಹುದು.

English summary

Yummy Treat: Cauliflower With Yogurt Gravy

Tried of indulging in those spicy treats the whole week? Well, we have something better for your taste buds this afternoon - cauliflower with yogurt gravy. While preparing this yummy cauliflower with yogurt gravy, continue to stir the gravy with a thin spoon. This is the cauliflower with yogurt gravy recipe, take a look:
Story first published: Saturday, November 15, 2014, 12:55 [IST]
X
Desktop Bottom Promotion