For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ವೆಜಿಟೆಬಲ್ ಕರಿ

|

ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್, ಖನಿಜಾಂಶ ಮತ್ತು ಅತ್ಯಗತ್ಯ ಪೋಷಕಾಂಶಗಳು ತರಕಾರಿಗಳಲ್ಲಿದೆ. ಹಾಗಾಗಿ ತರಕಾರಿಗಳನ್ನು ಬಳಸಿ ಮಾಡುವ ಎಲ್ಲಾ ರೆಸಿಪಿಯೂ ಕೂಡ ಆರೋಗ್ಯಕಾರಿಯಾಗಿರುತ್ತದೆ. ಇಂದು ಬೋಲ್ಡ್ ಸ್ಕೈ ನಿಮಗಾಗಿ ಹಲವು ರೀತಿಯ ತರಕಾರಿಗಳ ಮಿಶ್ರಣದ ಕರಿಯನ್ನು ಪರಿಚಯಿಸುತ್ತಿದ್ದು ಇದು ಖಂಡಿತವಾಗಿಯೂ ನಿಮ್ಮ ಮನ ತಣಿಸುವುದರಲ್ಲಿ ಸಂಶಯವೇ ಇಲ್ಲ.

ವಿಶಿಷ್ಟ ಸ್ವಾದಭರಿತ ಮಸಾಲೆ ಬೆರೆಸಿ ಮಾಡುವ ಈ ಕರಿ ನಿಮ್ಮ ನಾಲಿಗೆಯ ರುಚಿಯನ್ನು ತಣಿಸುವುದಂತೂ ಖಚಿತ. ಹಲವು ತರಕಾರಿಗಳನ್ನು ಈ ಕರಿನಲ್ಲಿ ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಹಾಗಾದರೆ ಇನ್ನೇಕೆ ತಡ ? ಬನ್ನಿ ತರಕಾರಿ ಕರಿಯನ್ನು ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

Tasty Vegetable curry Recipe

ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ

ಬೇಕಾಗುವ ಸಾಮಾಗ್ರಿ:
* 3 ಚಮಚ ಕೆಂಪು ಮೆಣಸಿನ ಪುಡಿ
* 1 ಚಮಚ ಮೆಂತ್ಯೆ ಕಾಳು
* ಈರುಳ್ಳಿ, 2 (ಕತ್ತರಿಸಲಾಗಿರುವ)
* ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
* ಅಗತ್ಯವಿದ್ದಷ್ಟು ಕತ್ತರಿಸಿದ ಟೊಮೆಟೊ, ಕ್ಯಾಪ್ಸಿಕಂ, ಹೂಕೋಸು, ಬಟಾಣಿ
* 1 ಚಮಚ ಗರಂ ಮಸಾಲೆ
* ಉಪ್ಪು ರುಚಿಗೆ ತಕ್ಕಷ್ಟು
* 1/2 ಚಮಚ ಅರಿಶಿಣ
* 1 ಚಮಚ ಧನಿಯಾ ಪುಡಿ
* 1 ಚಮಚ ಕಸೂರಿ ಮೇತಿ
* 2 ಕಪ್ ನೀರು

ತರಕಾರಿ ಕರಿ ತಯಾರಿಸುವ ವಿಧಾನ:
* ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ಹಾಗೂ ಮೇಲೆ ತಿಳಿಸಿರುವ ತರಕಾರಿಗಳನ್ನು (ಕತ್ತರಿಸಲಾಗಿರುವ ಟೊಮೆಟೊ, ಕ್ಯಾಪ್ಸಿಕಂ, ಹೂಕೋಸು, ಬಟಾಣಿ) ಸ್ವಲ್ಪ ಕೆಂಪುಮೆಣಸಿನ ಪುಡಿ ಮತ್ತು ಮೆಂತ್ಯೆ ಕಾಳುಗಳೊಂದಿಗೆ ಹುರಿದುಕೊಳ್ಳಿ.
* ತದನಂತರ ಇದಕ್ಕೆ ಈರುಳ್ಳಿ ಮತ್ತು ಇನ್ನಿತರ ಪೇಸ್ಟನ್ನು ಬೆರೆಸಿ ಚೆನ್ನಾಗಿ ಹುರಿದುಕೊಳ್ಳಿ.
* ಅರಿಶಿಣ, ಧನಿಯಾ ಪುಡಿ, ಗರಂ ಮಸಾಲೆ, ಉಪ್ಪು, ನೀರು ಹಾಕಿ ತರಕಾರಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿದರೆ ರುಚಿ ರುಚಿಯಾದ ತರಕಾರಿ ಕರಿ ಸವಿಯಲು ತಯಾರಾಗಿರುತ್ತೆ.
* ಕೊನೆಯಲ್ಲಿ ಇದರ ಮೇಲೆ ಕಸೂರಿ ಮೇತಿ ಹಾಕಿ ಬಿಸಿ ಬಿಸಿಯಾಗಿ ಸೇವಿಸಿ ರುಚಿ ಇನ್ನಷ್ಟು ರುಚಿಕರವಾಗಿರುತ್ತದೆ

Story first published: Wednesday, June 11, 2014, 12:51 [IST]
X
Desktop Bottom Promotion