For Quick Alerts
ALLOW NOTIFICATIONS  
For Daily Alerts

ಊಟದ ರುಚಿ ಹೆಚ್ಚಿಸುವ ಮಸಾಲಾ ದಾಲ್ ರೆಸಿಪಿ

|

ಯಾವಾಗಲೂ ಒಂದೇ ರೀತಿಯ ದಾಲ್ ರೆಸಿಪಿಯನ್ನು ಸವಿಯುದೆಂದರೆ ಬೇಜಾರು. ನಿಮ್ಮ ಅದೇ ದಾಲ್‌ಗೆ ಸ್ವಲ್ಪ ಮಸಾಲೆ ಮತ್ತು ಸುಗಂಧವನ್ನು ಸೇರಿಸಿದರೆ ನಿಮ್ಮ ಊಟವೂ ಚೆನ್ನಾಗಿ ಆಗುತ್ತದೆ ಮತ್ತು ರುಚಿಯೂ ತೃಪ್ತಿಯೂ ನಿಮ್ಮದಾಗುತ್ತದೆ ಅಲ್ಲವೇ? ಅಂತಹ ದಾಲ್ ಅನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಮಸಾಲಾ ದಾಲ್ ರೆಸಿಪಿಯನ್ನು ಮಾಡುವುದು ಹೇಗೆಂಬುದು ನಿಮ್ಮ ಚಿಂತೆಯಾಗಿದ್ದರೆ ಆ ಚಿಂತೆಯನ್ನು ದೂರ ಮಾಡುವ ಪರಿಹಾರ ಕೂಡ ನಮ್ಮ ಕೈಯಲ್ಲಿದೆ. ಹೌದು ನಿಮಗಾಗಿ ಈ ಲೇಖನದಲ್ಲಿ ಮಸಾಲಾ ದಾಲ್ ರೆಸಿಪಿಯ ವಿಧಾನವನ್ನು ಇಲ್ಲಿ ನೀಡುತ್ತಿದ್ದೇವೆ.

ಮೂರು ಬಗೆಯ ಬೇಳೆ ಕಾಳುಗಳನ್ನು ಬಳಸಿ ಈ ದಾಲ್ ರೆಸಿಪಿಯನ್ನು ನಾವಿಲ್ಲಿ ತಯಾರಿಸಿದ್ದೇವೆ. ನಿಮ್ಮ ಊಟವನ್ನು ಇನ್ನಷ್ಟು ಮಸಾಲೆಭರಿತವನ್ನಾಗಿಸುವ ಚಮತ್ಕಾರ ಈ ದಾಲ್‌ಗಿದೆ. ನಿಮ್ಮ ರೆಸಿಪಿಗೆ ಈ ಸುವಾಸನೆ ಒಂದು ವಿಭಿನ್ನ ಟೇಸ್ಟ್ ಅನ್ನು ನೀಡುವುದು ಖಂಡಿತ. ದಾಲ್‌ಗೆ ಸೇರಿಸಲಾಗುವ ಸಾಂಬಾರು ಪದಾರ್ಥಗಳು ದಾಲ್‌ನ ರುಚಿಯನ್ನು ಹೆಚ್ಚಿಸಿ ಇನ್ನೂ ಬೇಕೆಂಬ ತುಡಿತವನ್ನು ನಿಮ್ಮಲ್ಲಿ ಹೆಚ್ಚಿಸುತ್ತದೆ.

Tasty Masala Dal Recipe

ಸರಳವಾದ ಮಸಾಲಾ ದಾಲ್ ರೆಸಿಪಿ ನಿಮ್ಮ ನಾಲಗೆಯ ಹಸಿವನ್ನು ತಣಿಸುವುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೆ ಮತ್ತೇಕೆ ತಡ, ರುಚಿಯಾದ ಮಸಾಲಾ ದಾಲ್ ರೆಸಿಪಿಯನ್ನು ಪ್ರಯತ್ನಿಸಿ ಮನೆಯವರ ಮೆಚ್ಚುಗೆ ಪಡೆಯಿರಿ.

ಚಪಾತಿ ಜೊತೆ ಸವಿಯಲು ದಾಲ್ ರೆಸಿಪಿ

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು:
.ಹೆಸರು ಬೇಳೆ - 1 ಕಪ್
.ಕಡಲೆ ಬೇಳೆ - 1 ಕಪ್ (1 ಗಂಟೆಯಷ್ಟು ಸಮಯ ನೀರಿನಲ್ಲಿ ನೆನೆಸಿರುವಂಥದ್ದು)
.ಮಸೂರ್ ದಾಲ್ - 1/2 ಕಪ್
.ಈರುಳ್ಳಿ - 1 (ದೊಡ್ಡ ಗಾತ್ರದ್ದು, ಕತ್ತರಿಸಿದ್ದು)
.ಟೊಮೇಟೋ - 2 (ಮಧ್ಯಮ ಗಾತ್ರದ್ದು, ಸಣ್ಣದಾಗಿ ಕತ್ತರಿಸಿದ್ದು)
.ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
.ಇಂಗು - ಸಣ್ಣದು
.ಅರಶಿನ ಹುಡಿ - 1 ಸ್ಪೂನ್
.ಮೆಣಸಿನ ಹುಡಿ - 1 ಸ್ಪೂನ್
.ಕೊತ್ತಂಬರಿ ಹುಡಿ - 1 ಸ್ಪೂನ್
.ಜೀರಿಗೆ ಹುಡಿ - 1 ಸ್ಪೂನ್
.ಕೊತ್ತಂಬರಿ ಬೀಜ - 1 ಸ್ಪೂನ್ (ಜಜ್ಜಿದ್ದು)
.ಒಣ ಕೆಂಪು ಮೆಣಸು - 1 (ಮುರಿದ)
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 2 ಸ್ಪೂನ್
.ನೀರು - 3 ಕಪ್‌ಗಳು
.ಕೊತ್ತಂಬರಿ ಸೊಪ್ಪು - 2 ಸ್ಪೂನ್ (ಕತ್ತರಿಸಿದ್ದು)

ರುಚಿರುಚಿಯಾದ ತೊಗರಿಬೇಳೆ ದಾಲ್

ಮಾಡುವ ವಿಧಾನ;
1.ಬೇಳೆಕಾಳುಗಳನ್ನು ಚೆನ್ನಾಗಿ ತೊಳೆದು ಒಂದು ಕಡೆ ತೆಗೆದಿಡಿ.
2.ನೀರು ಹಾಕಿ ಬೇಳೆಯನ್ನು ಪ್ರಶ್ಶರ್ ಕುಕ್ಕರ್‌ನಲ್ಲಿ 4 ವಿಶಲ್ ಬರುವವರೆಗೆ ಬೇಯಿಸಿ.
3.ಬೇಳೆ ಬೆಂದ ಒಡನೆ, ಉರಿಯನ್ನು ನಿಲ್ಲಿಸಿ ಮತ್ತು ಕುಕ್ಕರ್‌ನ ಆವಿ ತಣಿಯುವವರೆಗೆ ಕಾಯಿರಿ.
4.ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಜಜ್ಜಿದ ಕೊತ್ತಂಬರಿ ಬೀಜ, ಇಂಗು, ಒಣ ಕೆಂಪು ಮೆಣಸು ಸೇರಿಸಿ. ಸ್ವಲ್ಪ ನಿಮಿಷ ಹುರಿಯಿರಿ.
5.ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಹುರಿಯಿರಿ.
6.ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಬೇಯಿಸಿ.
7.ಕತ್ತರಿಸಿದ ಟೊಮೇಟೋ, ಅರಶಿನ ಹುಡಿ, ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ ಸೇರಿಸಿ ಮತ್ತು 4-5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿಯಿರಿ.
8.ಈಗ ಬೇಯಿಸಿದ ಬೇಳೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
9.ಒಗ್ಗರಣೆಯನ್ನು ಪರಿಶೀಲಿಸಿಕೊಳ್ಳಿ ಮತ್ತು ಉಪ್ಪು ಹಾಕಿ.
10.ಗ್ಯಾಸ್ ಆಫ್ ಮಾಡಿ ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಮಸಾಲಾ ದಾಲ್‌ಗೆ ಅಲಂಕರಿಸಿ.

English summary

Tasty Masala Dal Recipe

Aren't you bored of eating the same plain dal everyday? So, add a little favour and spices to your boring dal and make it interesting. If you are wondering how to go about it, then we are here 
 to help you out with that.
Story first published: Tuesday, April 15, 2014, 11:09 [IST]
X
Desktop Bottom Promotion