For Quick Alerts
ALLOW NOTIFICATIONS  
For Daily Alerts

ಸಿಹಿ ಮತ್ತು ಖಾರ ಮಿಶ್ರಿತ ಆಲೂ ಸಬ್ಜಿ-ಗ್ರೇವಿ

|

ಸಿಹಿ ಮತ್ತು ಖಾರ ಮಿಶ್ರಿತ ಆಲೂ ಸಬ್ಕಿಯನ್ನು ರೊಟ್ಟಿ, ಚಪಾತಿ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಸಾಮಾನ್ಯವಾಗಿ ಆಲೂ ಸಬ್ಜಿಯನ್ನು ಡ್ರೈ ರೀತಿಯಲ್ಲಿ ಮಾಡುತ್ತೇವೆ, ಆದರೆ ಗ್ರೇವಿ ರೀತಿಯ ಆಲೂ ಸಬ್ಜಿಯ ರುಚಿ ನೋಡಿದ್ದೀರಾ?

ಸರಳ ತರಕಾರಿಗಳನ್ನು ಬಳಸಿ ಈ ಸಬ್ಜಿಯನ್ನು ಮಾಡಲಾಗುವುದು. ಈ ಕೆಳಗೆ ಗ್ರೇವಿ ರೀತಿಯ ಆಲೂ ಸಬ್ಜಿಯ ರೆಸಿಪಿ ನೀಡಲಾಗಿದೆ.

Sweet Spicy Aloo Ki Sabji

ಬೇಕಾಗುವ ಸಾಮಾಗ್ರಿಗಳು
* ಚಿಕ್ಕ ಗಾತ್ರದ 5-6 ಬೇಯಿಸಿದ ಆಲೂಗಡ್ಡೆ (ಸಿಪ್ಪೆ ಸುಲಿದು 2 ಭಾಗಗಳಾಗಿ ಕತ್ತರಿಸಿರಬೇಕು)
* 2 ಸಾಧಾರಣ ಗಾತ್ರದ ಈರುಳ್ಳಿ
* 2 ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್
* 4-5 ಹಸಿ ಮೆಣಸಿನ ಕಾಯಿ
* 2 ಟೊಮೆಟೊ
* ಚಿಟಿಕೆಯಷ್ಟು ಅರಿಶಿಣ ಪುಡಿ
* ಖಾರಕ್ಕೆ ತಕ್ಕ ಅರಿಶಿಣ ಪುಡಿ
* ಕೊತ್ತಂಬರಿ ಪುಡಿ ಅರ್ಧ ಚಮಚ
* ರುಚಿಗೆ ತಕ್ಕ ಉಪ್ಪು
* ಗರಂ ಮಸಾಲ ಅರ್ಧ ಚಮಚ
* 2 ಟೊಮೆಟೊ ಕೆಚಪ್
* ಅರ್ಧ ಚಮಚ ಜೀರಿಗೆ
* ಪಲಾವ್ ಎಲೆ 1
* 1 ಕಪ್ ನೀರು
*ಎಣ್ಣೆ

ತಯಾರಿಸುವ ವಿಧಾನ:

* ಒಂದು ಬಟ್ಟಲಿಗೆ ಎಲ್ಲಾ ಮಸಾಲೆ ಪುಡಿಗಳನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿ.

* ಈರುಳ್ಳಿಯನ್ನು ಪೇಸ್ಟ್ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ನಂತರ ಟೊಮೆಟೊವನ್ನು ಪೇಸ್ಟ್ ಮಾಡಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ ಹಾಕಿ ಜೀರಿಗೆ ಸ್ವಲ್ಪ ಶಬ್ದ ಬರುವಾಗ ಈರುಳ್ಳಿ ಪೇಸ್ಟ್ ಹಾಕಿ 2-3 ನಿಮಿಷ ಹುರಿಯಿರಿ.

* ಈಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಹುರಿದು, ಪಲಾವ್ ಎಲೆ ಹಾಕಿ, ಈಗ ಟೊಮೆಟೊ ಪೇಸ್ಟ್ ಹಾಕಿ ಸ್ವಲ್ಪ ಕುದಿಸಿ, ನಂತರ ಕಲೆಸಿದ ಮಸಾಲೆಯನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣವನ್ನು ಕುದಿಸಿ, ನಂತರ ಬೇಯಿಸಿದ ಆಲೂಗಡ್ಡೆ ಹಾಕಿ ನಂತರ ಉರಿಯಿಂದ ಇಳಿಸಿ, ನಂತರ ಈ ಮಿಶ್ರಣಕ್ಕೆ ಟೊಮೆಟೊ ಕೆಚಪ್ ಹಾಕಿದರೆ ಸಿಹಿ ಮತ್ತು ಖಾರ ಮಿಶ್ರಿತ ಆಲೂಗಡ್ಡೆ ಸಬ್ಜಿ ರೆಡಿ.

English summary

Sweet Spicy Aloo Ki Sabji | Variety Of Gravy Recipe | ಆಲೂ ಸಬ್ಜಿ ರೆಸಿಪಿ | ಅನೇಕ ಬಗೆಯ ಗ್ರೇವಿ ರೆಸಿಪಿ

Aloo ki sabji is one of the most common and preferred curry among the vegetarians. If you are bored of making the same sabji every mow and then, it is time to try a variety with the potatoes.
X
Desktop Bottom Promotion