For Quick Alerts
ALLOW NOTIFICATIONS  
For Daily Alerts

ಇಲ್ಲಿದೆ ಟಾಪ್ 7 ವೆಜ್ ಸ್ಪೆಷಲ್ ರೆಸಿಪಿ

|

ಶ್ರಾವಣ ತಿಂಗಳಿನಲ್ಲಿ ಹೆಚ್ಚಿನವರು ಮಾಂಸಾಹಾರ ಮುಟ್ಟದೆ, ಸಸ್ಯಾಹಾರ ಮಾತ್ರ ತಿನ್ನುತ್ತಾರೆ. ಮಾಂಸಾಹಾರ ಪ್ರಿಯರಿಗೆ ಈ ಒಂದು ತಿಂಗಳು ಬರೀ ವೆಜ್ ಮಾತ್ರ ತಿನ್ನುವುದು ಸ್ವಲ್ಪ ಕಷ್ಟ ಅನಿಸಿದರೂ, ಶ್ರಾವಣ ಮಾಸದ ಫಲ ದೊರೆಯಲೆಂದು ಪೂಜೆ, ವೃತ ಮಾಡುತ್ತಾ ಫುಲ್ ವೆಜೆಟೇರಿಯನ್ ಗಳಾಗುತ್ತಾರೆ.

ಇನ್ನೇನು ಆಷಾಢ ಮಾಸ ಮುಗಿಯುತ್ತಾ ಬಂತು. ಆಗಸ್ಟ್ 7ರಂದು ಶ್ರಾವಣ ಮಾಸ ಪ್ರಾರಂಭವಾಗುವುದು. ಈ ಸಮಯದಲ್ಲಿ ವೆಜ್ ಮಾತ್ರ ತಿನ್ನುವವರಿಗಾಗಿ ಕೆಲ ಸ್ವಾದಿಷ್ಟಕರ ರೆಸಿಪಿಗಳನ್ನು ಅಡ್ವಾನ್ಸ್ ಆಗಿ ನೀಡುತ್ತಿದ್ದೇವೆ. ಈ ಅಡುಗೆಗಳು ಶ್ರಾವಣ ಮಾಸದಲ್ಲಿ ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸುವಂತೆ ಮಾಡುತ್ತದೆ.

 ಬೀನ್ಸ್ ಪಲ್ಯ

ಬೀನ್ಸ್ ಪಲ್ಯ

ಈ ಬೀನ್ಸ್ ಪಲ್ಯ ಸಮ್ ಥಿಂಗ್ ಸ್ಪೆಷಲ್ ಅನ್ನುವುದಕ್ಕೂ ಕಾರಣವಿದೆ. ಈ ಬೀನ್ಸ್ ಪಲ್ಯವನ್ನು ಬೇಯಿಸಲು ಯಾವುದೇ ನೀರು ಹಾಕುವುದಿಲ್ಲ. ಆದ್ದರಿಂದಲೇ ಇದರ ರುಚಿ ಇತರ ಬೀನ್ಸ್ ಪಲ್ಯಗಿಂತ ಹೆಚ್ಚು ಸ್ವಾದಿಷ್ಟಕರವಾಗಿರುತ್ತದೆ. ಇದನ್ನು ಮಾಡುವ ವಿಧಾನ ತುಂಬಾ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಚೆನ್ನಾ ಮಸಾಲ ಸಬ್ಜಿ

ಚೆನ್ನಾ ಮಸಾಲ ಸಬ್ಜಿ

ಚಪಾತಿ, ಪರೋಟ ಈ ರೀತಿಯ ಪದಾರ್ಥಗಳನ್ನು ಮಾಡಿದಾಗ ಅದರ ಜೊತೆ ತಿನ್ನಲು ಚೆನ್ನಾ ಸಬ್ಜಿ ಸೂಪರ್. ಈ ಚೆನ್ನಾ ಸಬ್ಜಿಯನ್ನು ಗಟ್ಟಿಯಾಗಿ ತಯಾರಿಸಿದರೆ ರುಚಿಯಾಗಿರುತ್ತದೆ. ಬೇಕಿದ್ದರೆ ಸ್ವಲ್ಪ ನೀರಾಗಿ ತಯಾರಿಸಬಹುದು, ಆದರೆ ಈ ಸಬ್ಜಿಯನ್ನು ತುಂಬಾ ನೀರು ಮಾಡಿದರೆ ಅಷ್ಟೇನು ರುಚಿಯಾಗಿರುವುದಿಲ್ಲ. ಚೆನ್ನಾ ಮಸಾಲ ಸಬ್ಜಿಯನ್ನು ಮಾಡುವ ವಿಧಾನ ನೋಡೋಣ ಬನ್ನಿ.

 ಪಾಲಾಕ್ ಅಂಬಾಟ್

ಪಾಲಾಕ್ ಅಂಬಾಟ್

ಏರುತ್ತಿರುವ ತರಕಾರಿ ರೇಟ್ ನೋಡಿದರೆ ಏನು ಅಡುಗೆ ಮಾಡುವುದೇ ಗೊತ್ತಾಗುವುದಿಲ್ಲ. ತರಕಾರಿ ರೇಟ್ ಹೆಚ್ಚಾಗಿದೆ ಎಂದು ಬಾಯಿ ರುಚಿಗೆ ಮೋಸ ಮಾಡಿಕೊಳ್ಳಲು ಸಾಧ್ಯವೇ? ಆದ್ದರಿಂದ ಇಲ್ಲಿ ನಾವು ಮಿತವಾದ ತರಕಾರಿ ಬಳಸಿ, ರುಚಿಯಾಗಿ ಮಾಡಬಹುದಾದ ಪಾಲಾಕ್ ಅಂಬಾಟ್ ನ ರೆಸಿಪಿ ನೀಡಿದ್ದೇವೆ.

ಆಲೂ ಜಾಲ್ ಫ್ರೆಜಿ

ಆಲೂ ಜಾಲ್ ಫ್ರೆಜಿ

ಜಾಲ್ ಫ್ರಿಜಿ ಮೂಲತಃ ಪಾಕಿಸ್ತಾನ ಶೈಲಿಯ ಅಡುಗೆಯಾಗಿದ್ದರೂ ಭಾರತದಲ್ಲಿಯೂ ಪ್ರಸಿದ್ಧಿಯನ್ನು ಪಡೆದಿದೆ. ಭಾರತೀಯ ಹೋಟೆಲ್ ಗಳಲ್ಲಿ, ಡಾಬಾಗಳಲ್ಲಿ ಆಲೂ ಜಾಲ್ ಫ್ರೆಜಿ ದೊರೆಯುತ್ತದೆ. ಇಲ್ಲಿ ನಾವು ಆಲೂ ಬಳಸಿ ಜಾಲ್ ಫ್ರೆಜಿ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

ಭಿನ್ನ ರುಚಿಯ ಆಲೂ ಸಬ್ಜಿ

ಭಿನ್ನ ರುಚಿಯ ಆಲೂ ಸಬ್ಜಿ

ಸಾಮಾನ್ಯವಾಗಿ ಆಲೂ ಸಬ್ಜಿಯನ್ನು ಡ್ರೈ ರೀತಿಯಲ್ಲಿ ಮಾಡುತ್ತೇವೆ, ಆದರೆ ಗ್ರೇವಿ ರೀತಿಯ ಆಲೂ ಸಬ್ಜಿಯ ರುಚಿ ನೋಡಿದ್ದೀರಾ? ಸರಳ ತರಕಾರಿಗಳನ್ನು ಬಳಸಿ ಈ ಸಬ್ಜಿಯನ್ನು ಮಾಡಲಾಗುವುದು. ಈ ಕೆಳಗೆ ಗ್ರೇವಿ ರೀತಿಯ ಆಲೂ ಸಬ್ಜಿಯ ರೆಸಿಪಿ ನೀಡಲಾಗಿದೆ.

ಬೆಂಡೆಕಾಯಿ ಕಿಚಡಿ

ಬೆಂಡೆಕಾಯಿ ಕಿಚಡಿ

ಇಲ್ಲಿ ನಾವು ಬೆಂಡೆಕಾಯಿಯಿಂದ ತಯಾರಿಸುವ ಕಿಚಡಿ ಅಂದರೆ ಗ್ರೇವಿ ರೀತಿಯ ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:

ಮೊಸರು ಹಾಕಿ ಮಾಡುವ ಬದನೆಕಾಯಿ ಗ್ರೇವಿ

ಮೊಸರು ಹಾಕಿ ಮಾಡುವ ಬದನೆಕಾಯಿ ಗ್ರೇವಿ

ಬದನೆಕಾಯಿಯನ್ನು ಮೊಸರು ಜೊತೆ ಹಾಕಿ ತಯಾರಿಸಿದ ಗ್ರೇವಿಯ ರುಚಿ ನೋಡಿದ್ದೀರಾ? ಇಲ್ಲ ಅಂದರೆ ಅದನ್ನು ಒಮ್ಮೆ ಮಾಡಿ ನೋಡಿ ಈ ಖಾದ್ಯದ ರುಚಿಗೆ ಒಂದು ತುತ್ತು ಅನ್ನ ಅಧಿಕವೇ ಸೇರುತ್ತದೆ, ಅಷ್ಟು ರುಚಿಯಾಗಿರುತ್ತದೆ ಈ ಅಡುಗೆ.

English summary

Special Veg Recipe For Shravan

Having same taste vegetables curry every day can become very monotonous. So, we at Boldsky bring to you a delicious collection of our vegetarian recipes which you can try out during this holy month of Shravan.
X
Desktop Bottom Promotion