For Quick Alerts
ALLOW NOTIFICATIONS  
For Daily Alerts

ಮಿಶ್ರ ಬೇಳೆಯ ಸಾಂಬಾರ್ ರೆಸಿಪಿ

By Super Admin
|

ಸಾಮಾನ್ಯವಾಗಿ ಸಾರು ಅಥವಾ ಸಾಂಬಾರ್ ತಯಾರಿಸುವಾಗ ತೊಗರಿಬೇಳೆ ಅಥವಾ ಹೆಸರು ಬೇಳೆ ಹಾಕಿ ಮಾಡುತ್ತೇವೆ. ಆದರೆ ಈ ಎರಡು ಬೇಳೆಯನ್ನು ಸಮಪ್ರಮಾಣದಲ್ಲಿ ಹಾಕಿ ತಯಾರಿಸುವ ಸಾಂಬಾರ್ ನ ರುಚಿ ನೋಡಿದ್ದೀರಾ?

ಇಲ್ಲ ಅಂದರೆ ಈ ರೆಸಿಪಿಯನ್ನು ಇವತ್ತೇ ಟ್ರೈ ಮಾಡಿ. ಇದನ್ನು ಮಾಡುವ ವಿಧಾನ ಹೀಗಿದೆ.

Special Dal Recipe For Summer

ಬೇಕಾಗುವ ಸಾಮಾಗ್ರಿಗಳು
ಹೆಸರುಬೇಳೆ 1/4 ಕಪ್
ತೊಗರಿ ಬೇಳೆ 1/4 ಕಪ್
ಅರಿಶಿಣ ಪುಡಿ ಅರ್ಧ ಚಮಚ
ಈರುಳ್ಳಿ1
ಆಲೂಗಡ್ಡೆ
ಟೊಮೆಟೊ 1
ಸ್ವಲ್ಪ ಶುಂಠಿ
ಬೆಳ್ಳುಳ್ಳಿ ಪೇಸ್ಟ್ 3-4
ಸ್ವಲ್ಪ ಕುಂಬಳಕಾಯಿ
ಹಸಿ ಮೆಣಸಿನಕಾಯಿ
ತೆಂಗಿನತುರಿ 1 ಚಮಚ
ಜೀರಿಗೆ 1 ಚಮಚ
ನುಗ್ಗೆಕಾಯಿ 2
1 ಬದನೆ
ಸ್ವಲ್ಪ ಬೀನ್ಸ್
ಕೊತ್ತಂಬರಿ ಬೀಜ ಸ್ವಲ್ಪ
ಸ್ವಲ್ಪ ಚಕ್ಕೆ
3-4 ಲವಂಗ
ಮೆಂತೆ
ಜೀರಿಗೆ
ಇಂಗು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು
ಒಣ ಮೆಣಸು(ಖಾರಕ್ಕೆ ತಕ್ಕಂತೆ)
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:
* ಹೆಸರು ಬೇಳೆ, ತೊಗರಿ ಬೇಳೆ, ಉಪ್ಪು, ಅರಿಶಿಣ, ಈರುಳ್ಳಿ, ನುಗ್ಗೆಕಾಯಿ, ಟೊಮೆಟೊ,ಆಲೂಗಡ್ಡೆ, ಬದನೆ, ಬೀನ್ಸ್, ಕುಂಬಳಕಾಯಿ ಹಾಕಿ ಸ್ವಲ್ಪ ನೀರು ಹಾಕಿ 2 ವಿಷಲ್ ಬರುವವರೆಗೆ ಬೇಯಿಸಿ.

* ತರಕಾರಿಗಳನ್ನು ಕತ್ತರಿಸಿ, ಚಕ್ಕೆ, ಲವಂಗ, ಕೊತ್ತಂಬರಿ ಬೀಜ, ಒಣಮೆಣಸು, ಜೀರಿಗೆ, ಮೆಂತೆ, ತೆಂಗಿನ ತುರಿ, ಶುಂಠಿ-ಬೆಳ್ಳುಳ್ಳಿಯನ್ನು ಹಾಕಿ ಗಟ್ಟಿಯಾದ ಪೇಸ್ಟ್ ಮಾಡಿಡಿ.

* ಈಗ ಸಾರು ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ 1 ಚಮಚ ಎಣ್ನೆ ಹಾಕಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಸ್ವಲ್ಪ ಇಂಗು, ಕರಿಬೇವಿನ ಎಲೆ ಹಾಕಿ ನಂತರ ಬೇಯಿಸಿ ತರಕಾರಿ ಹಾಕಿ.

* ಈಗ ರುಬ್ಬಿದ ಮಸಾಲೆ ಪೇಸ್ಟ್ ಅನ್ನು ಸೇರಿಸಿ. ಸಾಧಾರಣ ಉರಿಯಲ್ಲಿ ಸಾರನ್ನು ಕುದಿಸಿ. ಮಿಶ್ರಣ ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಬಹುದು.

* ಸಾರು ಬೆಂದ ಮೇಲೆ ಅದರ ಉಪ್ಪು ನೋಡಿ ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಿಶ್ರ ಬೇಳೆಯ ಸಾಂಬಾರ್ ರೆಡಿ.

English summary

Special Dal Recipe For Summer |Variety Of Sambar Recipe | ಮಿಶ್ರ ಬೇಳೆಯ ಸಾಂಬಾರ್ ರೆಸಿಪಿ | ಅನೇಕ ಬಗೆಯ ಸಾಂಬಾರ್ ರೆಸಿಪಿ

Having the same type of dal all the time becomes very boring. So you can try this novel dal recipe to give your taste-buds a change. It is also the best way to feed some healthy vegetables to your fussy kids.
X
Desktop Bottom Promotion