For Quick Alerts
ALLOW NOTIFICATIONS  
For Daily Alerts

ರಾಜ್ಮಾ ಮಖಾನಿ ಗ್ರೇವಿ-ಪಂಜಾಬಿ ಶೈಲಿಯ ಅಡುಗೆ

|

ರಾಜ್ಮಾ ಮಖಾನಿ ಇದೊಂದು ಸ್ಪೆಷಲ್ ಪಂಜಾಬಿ ರೆಸಿಪಿಯಾಗಿದೆ. ಇದರಲ್ಲಿ ಬೆಣ್ಣೆ ಪ್ರಮುಖ ಪಾತ್ರವಹಿಸುತ್ತದೆ. ಬೆಣ್ಣೆ ಬಳಸದಿದ್ದರೆ ನಿಜವಾದ ಮಖಾನಿಯ ಸ್ವಾದವನ್ನು ಸವಿಯಲು ಸಾಧ್ಯವಾಗುವುದಿಲ್ಲ.

ತೊಗರಿ ಬೇಳೆ ಮತ್ತು ರಾಜ್ಮಾವನ್ನು ಪ್ರತ್ಯೇಕವಾಗಿ ಬೇಯಿಸಿ, ನಂತರ ಹಾಲು ಸೇರಿಸಿ ಮಾಡುವ ಈ ಗ್ರೇವಿ ತುಂಬಾ ರುಚಿಯಾಗಿರುತ್ತದೆ.
ಬನ್ನಿ ಪಂಜಾಬಿ ರಾಜ್ಮಾ ಮಖಾನಿ ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು

ರಾಜ್ಮಾ 1 ಕಪ್
ತೊಗರಿ ಬೇಳೆ ಅರ್ಧ ಕಪ್
ಬೆಣ್ಣೆ 4-5 ಚಮಚ
ಕರಿಬೇವಿನ ಎಲೆ
ಈರುಳ್ಳಿ 2
ಹಸಿ ಮೆಣಸಿನಕಾಯಿ 3(2 ಭಾಗವಾಗಿ ಕತ್ತರಿಸಿ)
ಟೊಮೆಟೊ 1(ಚಿಕ್ಕದಾಗಿ ಕತ್ತರಿಸಿ)
ಖಾರದ ಪುಡಿ 1 ಚಮಚ ಅಥವಾ ನಿಮ್ಮ ಖಾರಕ್ಕೆ ತಕ್ಕ
ಜೀರಿಗೆ 1 ಚಮಚ
ಗರಂ ಮಸಾಲ 1 ಚಮಚ
ಅರಿಶಿಣ ಅರ್ಧ ಚಮಚ
ಹಾಲು 1 ಕಪ್
ಉಪ್ಪು (ರುಚಿಗೆ ತಕ್ಕಷ್ಟು)

ತಯಾರಿಸುವ ವಿಧಾನ

* ರಾಜ್ಮಾವನ್ನು ನೀರಿನಲ್ಲಿ 2 ಗಂಟೆಗಳ ನೆನೆ ಹಾಕಿ.

* ತೊಗರಿ ಬೇಳೆ ಮತ್ತು ರಾಜ್ಮಾವನ್ನು ಸಪರೇಟ್ ಆಗಿ ಕುಕ್ಕರ್ ನಲ್ಲಿ ಹಾಕಿ ಬೇಯಿಸಿ.

* ಈಗ ಬೇಯಿಸಿದ ರಾಜ್ಮಾದಿಂದ ನೀರನ್ನು ಸೋಸಿ ರಾಜ್ಮಾ ಮಾತ್ರ ಪಾತ್ರೆಯಲ್ಲಿಡಿ. ತೊಗರಿ ಬೇಳೆಯನ್ನು ಸೌಟ್ ನಿಂದ ಕುಟ್ಟಿ ಮ್ಯಾಶ್ (mash) ಮಾಡಿ.

* ಈಗ ಪಾತ್ರೆಯನ್ನು ಉರಿಯಲ್ಲಿಟ್ಟು ಅದು ಸ್ವಲ್ಪ ಬಿಸಿಯಾದಾಗ ಬೆಣ್ಣೆಹಾಕಿ, ನಂತರ ಕರಿ ಬೇವಿನ ಎಲೆ ಮತ್ತು ಹಸಿ ಮೆಣಸಿನಕಾಯಿ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರಗೆ 2-3 ನಿಮಿಷ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ. ಈಗ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.

* ಈಗ ಖಾರದ ಪುಡಿ, ಅರಿಶಿಣ, ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು(1 ಚಮಚ ಮೊದಲು ಹಾಕಿ, ಬೇಕಿದ್ದರೆ ಮತ್ತೆ ಸೇರಿಸಬಹುದು) ಹಾಕಿ 2 ನಿಮಿಷ ಸೌಟ್ ನಿಂದ ಆಡಿಸಿ, ಬೇಯಿಸಿ ತೊಗರಿಬೇಳೆ ಮತ್ತು ರಾಜ್ಮಾವನ್ನು ಸೇರಿಸಿ. 1 ಕಪ್ ನೀರು ಹಾಕಿ, ಉರಿ ಸ್ವಲ್ಪ ಕಮ್ಮಿ ಮಾಡಿ ಸಾರನ್ನು ಕುದಿಸಿ.

* ಸಾರು ಕುದಿ ಬರುವಾಗ ಹಾಲನ್ನು ಸೇರಿಸಿ ಮತ್ತೆ 5 ನಿಮಿಷ ಕುದಿಸಿ, ನಂತರ ಉಪ್ಪು ಸರಿಯಾಗಿದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ ರುಚಿಯಾದ ಗ್ರೇವಿ ರಾಜ್ಮಾ ಮಖಾನಿ ರೆಡಿ.

English summary

Rajma Makhani: Punjabi Delicacy

As you understand from the name Rajma 'Makhani', butter has a huge role to play in the making of this Indian curry. Rajma and toor dal are both cooked separately and then blended in a buttery sauce of onions and other spices.
X
Desktop Bottom Promotion