ವ್ಹಾ! ಆಲೂಗಡ್ಡೆ ಬಟಾಣಿ ಕರಿ, ಅದೇನ್ ರುಚಿ ಅಂತೀರಾ?

ಸಾಮಾನ್ಯವಾಗಿ ಆಲೂಗಡ್ಡೆ ಕರಿಯನ್ನು ಹೆಚ್ಚಾಗಿ ಎಲ್ಲಾ ಮನೆಗಳಲ್ಲೂ ಚಪಾತಿ, ಪಲ್ಯ, ದೋಸೆ ಮೊದಲಾದ ತಿಂಡಿಗಳಿಗೆ ಮಾಡಿದರೂ ಇಂದಿಲ್ಲಿ ನಾವು ಇದನ್ನು ಹೊಸ ಬಗೆಯಲ್ಲಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.... ಮುಂದೆ ಓದಿ...

By: Jaya subramanya
Subscribe to Boldsky

ಮಾನವರಿಗೆ ಬಾಯಿ ಚಪಲ ಹೆಚ್ಚು ಎಂಬಂತೆ ನಾವು ಹಳೆಯ ತಿಂಡಿಗಳಿಗಿಂತ ಹೊಸದರತ್ತ ಒಲವನ್ನು ತುಸು ಹೆಚ್ಚಾಗಿಯೇ ತೋರಿಸುತ್ತೇವೆ. ಒಂದೇ ಬಗೆಯ ತಿಂಡಿಯನ್ನು ತಿಂದು ನಾಲಿಗೆ ಜಡ್ಡುಗಟ್ಟಿ ಹೋಗಿದೆ ಎಂಬ ಮಾತು ಇದಕ್ಕೆ ಕೂಡಿ ಕೊಂಡಿರುತ್ತದೆ. ಆದರೆ ಹಳೆಯ ತಿಂಡಿಗಳಲ್ಲಿ ಹೊಸತನವನ್ನು ತಂದುಕೊಂಡು ಅದರ ಸ್ವಾದವನ್ನು ಆಸ್ವಾದಿಸುವ ಮನಸ್ಸು ನಾವು ಮಾಡುವುದೇ ಇಲ್ಲ.  ಬೆಳಗ್ಗಿನ ತಿಂಡಿಗೆ ಸ್ಪೆಷಲ್ ಆಲೂ ಮಟರ್ ಚಪಾತಿ

ಇಂದಿನ ಲೇಖನದಲ್ಲಿ ಹಳತಾದರೂ ಹೊಸತನದಲ್ಲಿ ಮಿಂಚಿರುವ ಆಲೂಗಡ್ಡೆ ಬಟಾಣಿ ಕರಿ (ಆಲೂ ಮಟರ್ ಕರಿ) ರೆಸಿಪಿಯನ್ನು ತಿಳಿಸಲಿದ್ದೇವೆ. ಹೆಚ್ಚಾಗಿ ಎಲ್ಲಾ ಮನೆಗಳಲ್ಲೂ ಈ ಕರಿಯನ್ನು ಚಪಾತಿ, ಪಲ್ಯ, ದೋಸೆ ಮೊದಲಾದ ತಿಂಡಿಗಳಿಗೆ ಮಾಡಿದರೂ ಇಂದಿಲ್ಲಿ ನಾವು ಇದನ್ನು ಹೊಸ ಬಗೆಯಲ್ಲಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಬನ್ನಿ ತಯಾರಿ ವಿಧಾನವನ್ನು ಇಲ್ಲಿ ತಿಳಿದುಕೊಳ್ಳೋಣ... 

 ಪ್ರಮಾಣ - 4
*ಸಿದ್ಧತಾ ಸಮಯ - 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು  

Aloo mutter
 

ಸಾಮಾಗ್ರಿಗಳು
1. ಎಣ್ಣೆ - 2 ಚಮಚ
2. ಜೀರಿಗೆ - 1/2 ಚಮಚ
3. ಈರುಳ್ಳಿ - 3/4 ಕಪ್ (ಕತ್ತರಿಸಿದ್ದು)
4. ಬೆಳ್ಳುಳ್ಳಿ - 1 ಚಮಚ
5. ಶುಂಠಿ - 1 ಚಮಚ (ಕತ್ತರಿಸಿದ್ದು)
6. ಹಸಿಮೆಣಸಿನ ಪೇಸ್ಟ್ - 1 ಚಮಚ
7. ಟೊಮೇಟೊ - 1 ಕಪ್ (ಕತ್ತರಿಸಿದ್ದು)


8. ನೀರು ಬೇಕಾದಷ್ಟು
9. ಬಟಾಣಿ - 1 ಕಪ್ (ಬೇಯಿಸಿದ್ದು)
10. ಆಲೂಗಡ್ಡೆ ಕತ್ತರಿಸಿದ್ದು - 1 1/2 ಕಪ್ (ಬೇಯಿಸಿದ್ದು)
11. ಉಪ್ಪು ರುಚಿಗೆ ತಕ್ಕಷ್ಟು
12. ಮೆಣಸಿನ ಹುಡಿ - 1 1/2 ಚಮಚ
13. ಗರಂ ಮಸಾಲಾ - 1/2 ಚಮಚ
14. ಅರಿಶಿನ - ಚಿಟಿಕೆಯಷ್ಟು
15. ಕರಿಬೇವಿನೆಸಳು - 1 ಚಮಚ (ಕತ್ತರಿಸಿದ್ದು)       ಚಪಾತಿ ಜೊತೆ ಸವಿಯಲು ಆಲೂಮಟರ್ ಗ್ರೇವಿ  
step 1
 

ಮಾಡುವ ವಿಧಾನ
1. ನಾನ್ ಸ್ಟಿಕ್ ಪ್ಯಾನ್ ಅನ್ನು ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ
2. ಈಗ, ಇದಕ್ಕೆ ಜೀರಿಗೆಯನ್ನು ಹಾಕಿ, ಇದು ಸಿಡಿಯುತ್ತಿದ್ದಂತೆ, ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ
3. ಚೆನ್ನಾಗಿ ಹುರಿಯಿರಿ, ಈರುಳ್ಳಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ

step 2

4. ಇನ್ನು, ಬೆಳ್ಳುಳ್ಳಿ, ಶುಂಠಿ, ಟೊಮೇಟೊ, ಮತ್ತು ಹಸಿಮೆಣಸಿನ ಪೇಸ್ಟ್ ಅನ್ನು ಹಾಕಿ. ಟೊಮೇಟೊ ಬೇಯಲು ಇನ್ನೂ ಸಮಯ ಬೇಕು ಎಂದಾದಲ್ಲಿ ಸ್ವಲ್ಪ ನೀರನ್ನು ಹಾಕಿ.
5. ಈಗ, ಚೆನ್ನಾಗಿ ಮಿಶ್ರ ಮಾಡಿಕೊಂಡು ಟೊಮೇಟೊವನ್ನು ಸ್ವಲ್ಪ ಒತ್ತಿ. ಎಲ್ಲಾ ಮಸಾಲೆ ಪದಾರ್ಥಗಳು ಬೆಂದ ನಂತರ, ಬಟಾಣಿ ಮತ್ತು ಆಲೂಗಡ್ಡೆಯನ್ನು ಇದಕ್ಕೆ ಹಾಕಿ
step 3

6.ಉಪ್ಪು, ಕೆಂಪು ಮೆಣಸಿನ ಹುಡಿ, ಅರಿಶಿನ ಹುಡಿ ಮತ್ತು ಗರಂ ಮಸಾಲಾ ಹುಡಿಯನ್ನು ಇದಕ್ಕೆ ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ
7. ಈಗ, ಒಂದು ಕಪ್‎ನಷ್ಟು ನೀರನ್ನು ಹಾಕಿ ಮತ್ತು ಕರಿಯನ್ನು ಬೇಯಲು ಬಿಡಿ
allo mutter

8. ಆಲೂಗಡ್ಡೆಯನ್ನು ಹಿಸುಕಿ, ಇದರಿಂದ ಕರಿ ಕೊಂಚ ದಪ್ಪಗಾಗುತ್ತದೆ
9. ಆಲೂ ಬಟಾಣಿ ಇಲ್ಲವೇ ಆಲೂ ಮಟರ್ ಕರಿ ಸವಿಯಲು ಸಿದ್ಧವಾಗಿದೆ.
step 4

ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸವಿಯಲು ನೀಡಿ. ಈ ಕರಿ ರೆಸಿಪಿಯನ್ನು ಎಷ್ಟು ಸರಳವಾಗಿ ತಯಾರಿಸಬಹುದು ಎಂಬುದು ನಿಮಗೆ ತಿಳಿಯಿತು ಅಲ್ಲವೇ? ಬ್ರೆಡ್ ಜೊತೆಗೂ ಇದನ್ನು ಸವಿಯಬಹುದಾಗಿದೆ. ತರಕಾರಿ ಇಷ್ಟಪಡದ ಮಕ್ಕಳೂ ಈ ಕರಿಯನ್ನು ರೋಟಿ ಇಲ್ಲವೇ ಅನ್ನದೊಂದಿಗೆ ಖಂಡಿತ ಸವಿಯುತ್ತಾರೆ.

English summary

Quick Style Aloo Matar Recipe: Video

Aloo Matar is one of the most common dishes that is prepared in many households. It comprises of peas and potatoes and the curry is made with several spices.Whether at lunch or dinner, with rice or roti, aloo matar can go well at anytime and with anything....
Please Wait while comments are loading...
Subscribe Newsletter