For Quick Alerts
ALLOW NOTIFICATIONS  
For Daily Alerts

ಕರಿ ಮೆಣಸಿನ ಸ್ವಾದದ ಪನೀರ್ ರೆಸಿಪಿ

By Neha Mathur
|

ಕರಿಮೆಣಸಿನ ಸ್ವಾದದ ಈ ಪನೀರ್ ಸಾರು ನನ್ನ ಫೇವರೆಟ್. ಣೀವು ಖಾರ ಪ್ರಿಯರಾದರೆ 2 ಸ್ಪೂನ್ ಕರಿ ಮೆಣಸಿನ ಪುಡಿಯನ್ನು ಹಾಕಬಹುದು, ಇಲ್ಲದಿದ್ದರೆ ಒಂದು ಸ್ಪೂನ್ ಕರಿ ಮೆಣಸಿನ ಪುಡಿ ಹಾಕಿದರೆ ಸಾಕು. ತುಪ್ಪ, ಎಣ್ಣೆ, ಪನ್ನೀರ್ ಸ್ವಾದದ ಜೊತೆ ಕರಿಮೆಣಸಿನ ಸ್ವಾದ ಕೂಡ ಸೇರಿದಾಗ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

ಈ ರೆಸಿಪಿಯನ್ನು ನೀವು ಟ್ರೈ ಮಾಡುವುದಾದರೆ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಪನೀರ್ 500 ಗ್ರಾಂ
ಎಣ್ಣೆ 5 ಚಮಚ
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ(1 ಕಪ್)
ತುಪ್ಪ 1 ಚಮಚ
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಏಲಕ್ಕಿ 2
ಕರಿಮೆಣಸು4-5
ಲವಂಗ 3-4
ಮೊಸರು 1 ಕಪ್
ಖಾರದ ಪುಡಿ 1 ಚಮಚ
ಕೊತ್ತಂಬರಿ ಪುಡಿ 2 ಚಮಚ
ಜೀರಿಗೆ ಪುಡಿ 1 ಚಮಚ
ಪುಡಿ ಮಾಡಿದ ಕರಿ ಮೆಣಸು ಅರ್ಧ ಅಥವಾ ಒಂದು ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ಮಾಡುವ ವಿಧಾನ:

* ದೊಡ್ಡ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ, ಪೇಸ್ಟ್ ಮಾಡಿ.

ಮಾಡುವ ವಿಧಾನ:

ಮಾಡುವ ವಿಧಾನ:

* ಈಗ ಅದೇ ಬಾಣಲೆಗೆ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ಅದಕ್ಕೆ ಚಕ್ಕೆ, ಲವಂಗ, ಕರಿ ಮೆಣಸು, ಲವಂಗ ಕರಿಬೇವು ಅಥವಾ ಪಲಾವ್ ಎಲೆ ಹಾಕಿ , ನಂತರ ರುಬ್ಬಿದ ಈರುಳ್ಳಿ ಪೇಸ್ಟ್ ಹಾಕಿ ಸೌಟ್ ನಿಂದ 2 ನಿಮಿಷ ಫ್ರೈ ಮಾಡಿ.

ಮಾಡುವ ವಿಧಾನ:

ಮಾಡುವ ವಿಧಾನ:

* ನಂತರ ಚೆನ್ನಾಗಿ ಕದಡಿದ ಮೊಸರನ್ನು ಹಾಕಿ ಮಿಕ್ಸ್ ಮಾಡಿ.

ಮಾಡುವ ವಿಧಾನ:

ಮಾಡುವ ವಿಧಾನ:

* ನಂತರ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಏಲಕ್ಕಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ 3-4 ನಿಮಿಷ ಕುದಿಸಿ.

ಮಾಡುವ ವಿಧಾನ:

ಮಾಡುವ ವಿಧಾನ:

* ಈಗ ಒಂದು ಕಪ್ ನೀರು ಹಾಕಿ ಕತ್ತರಿಸಿದ ಪನೀರ್ ಪೀಸ್ ಗಳನ್ನು ಹಾಕಿ, ಪಾತ್ರೆಯ ಬಾಯಿ ಮುಚ್ಚಿ 10 ನಿಮಿಷ ಬೇಯಿಸಿ.

* ಈಗ ಪುಡಿ ಮಾಡಿದ ಕರಿ ಮೆಣಸು ಮತ್ತು ಕ್ರೀಮ್ ಸೇರಿಸಿ.

ಮಾಡುವ ವಿಧಾನ:

ಮಾಡುವ ವಿಧಾನ:

* 2-3 ನಿಮಿಷ ಕುದಿಸಿ, ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕರಿ ಮೆಣಸು ಹಾಕಿ ಮಾಡುವ ಪನೀರ್ ಸಾರು ರೆಡಿ.

English summary

Pepper Paneer Recipe

This is one of my favorite Paneer recipe. The heat from the black peppers gives it a nice kick. If you are not a big fan of black pepper, feel free to use it as much as you like. So here is the recipe.
X
Desktop Bottom Promotion