For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳ ಬಾಯಿ ರುಚಿ ಹೆಚ್ಚಿಸುವ ಸಾರು

|

ಮಧುಮೇಹಿಗಳು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ತಮ್ಮ ಆಹಾರಕ್ರಮದ ಬಗ್ಗೆ ಗಮನ ಹರಿಸಬೇಕು. ಹಾಗಂತ ಪಥ್ಯ ಆಹಾರವನ್ನು ತಿನ್ನಬೇಕಾಗಿಲ್ಲ, ಬಾಯಿಗೆ ರುಚಿಕರವಾದ ಆಹಾರವನ್ನು ತಿನ್ನಬಹುದು. ಇಲ್ಲಿ ನಾವು ಮಧುಮೇಹಿಗಳೂ ತಿನ್ನಬಹುದಾದ ಬಟಾಣಿ-ಪನ್ನೀರ್ ಮಸಾಲದ ರೆಸಿಪಿ ನೀಡಿದ್ದೇವೆ.

ಈ ಅಡುಗೆ ಮಧುಮೇಹಿಗಳ ಬಾಯಿ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.

Peas Paneer Curry Recipe For Diabetics

ಬೇಕಾಗುವ ಸಾಮಾಗ್ರಿಗಳು
ಪನ್ನೀರ್ 100 ಗ್ರಾಂ
ಈರುಳ್ಳಿ2
ಬೆಳ್ಳುಳ್ಳಿ ಎಸಳು 8
ಲವಂಗ 3
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
ಕೊತ್ತಂಬರಿ ಪುಡಿ 1 ಚಮಚ
ಹಸಿ ಮೆಣಸಿನಕಾಯಿ 1
ಜೀರಿಗೆ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಗರಂ ಮಸಾಲ ಅರ್ಧ ಚಮಚ
ಟೊಮೆಟೊ 2
ಬಟಾಣಿ 1 ಕಪ್(ನೆನೆ ಹಾಕಿದ್ದು)
ಕೊತ್ತಂಬರಿ ಸೊಪ್ಪು
ಎಣ್ಣೆ 3 ಚಮಚ
1 ಕಪ್ ತೆಂಗಿನ ತುರಿ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಪ್ಯಾನ್ ನಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಪನ್ನೀರ್ ಹಾಕಿ ಫ್ರೈ ಮಾಡಿ ಒಂದು ಬದಿಯಲ್ಲಿ ಇಡಿ.

* ನಂತರ ಅದೇ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಸ್ವಲ್ಪ ಕರಿಬೇವಿನ ಎಲೆ ಹಾಕಿ, ಹಸಿ ಮೆಣಸಿನಕಾಯಿ, ಜಜ್ಜಿದ ಶುಂಠಿ, ಬೆಳ್ಳುಳ್ಳಿ ಮತ್ತು ಲವಂಗ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ, ನಂತರ ಬಟಾಣಿ ಹಾಕಿ 5 ನಿಮಿಷ ಫ್ರೈ ಮಾಡಿ, ಅದಕ್ಕೆ ಎಲ್ಲಾ ಮಸಾಲೆ ಸಾಮಾಗ್ರಿಗಳನ್ನು ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಮತ್ತೆ 2 ನಿಮಿಷ ಫ್ರೈ ಮಾಡಿ ಒಂದು ಕಪ್ ನೀರು ಹಾಕಿ ಬೇಯಿಸಿ.

* ತರಕಾರಿ ಬೆಂದ ನಂತರ ರುಬ್ಬಿದ ತೆಂಗಿನ ತುರಿ ಹಾಕಿ ಉಪ್ಪು ಸರಿಯಾಗಿದೆಯೇ ಎಂದು ನೋಡಿ ಮತ್ತೆ 5 ನಿಮಿಷ ಬೇಯಿಸಿ ನಂತರ ಫ್ರೈ ಮಾಡಿದ ಪನ್ನೀರ್ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಕುದಿಸಿ, ಉರಿಯಿಂದ ಇಳಿಸಿದರೆ ಬಟಾಣಿ ಪನ್ನೀರ್ ಮಸಾಲ ರೆಡಿ.

English summary

Peas Paneer Curry Recipe For Diabetics

The diabetic vegetarian recipe, pea and paneer curry is famous for the elderly group of people. The reason being it is that paneer is soft in nature and easy to digest too.
X
Desktop Bottom Promotion