For Quick Alerts
ALLOW NOTIFICATIONS  
For Daily Alerts

ಬಟಾಣಿಯಿಂದ ಮಾಡುವ ಕೋಫ್ತಾ ಗ್ರೇವಿ

|

ಕೋಫ್ತಾ ರೆಸಿಪಿ ಉತ್ತರ ಭಾರತದ ಶೈಲಿಯ ಅಡುಗೆಯಾದರೂ ದಕ್ಷಿಣ ಭಾರತದಲ್ಲೂ ಜನಪ್ರಿಯತೆಯನ್ನು ಗಳಿಸಿದೆ. ಅನೇಕ ಬಗೆಯ ಕೋಫ್ತಾ ತಯಾರಿಸಬಹುದು, ಪನ್ನೀರ್ ಕೋಫ್ತಾ, ಆಲೂ ಕೋಫ್ತಾ, ಬಾಳೆಕಾಯಿ ಕೋಫ್ತಾ ಹೀಗೆ ಸಾಮಾನ್ಯವಾಗಿ ಎಲ್ಲಾ ಬಗೆಯ ತರಕಾರಿಗಳನ್ನು ಬಳಸಿ ಕೋಫ್ತಾ ರೆಸಿಪಿ ತಯಾರಿಸಬಹುದು.

ಇಲ್ಲಿ ನಾವು ಬಟಾಣಿಯಿಂದ ಮಾಡುವ ಕೋಫ್ತಾದ ರೆಸಿಪಿ ನೀಡಿದ್ದೇವೆ ನೋಡಿ:

Peas Kofta Recipe

ಬೇಕಾಗುವ ಪದಾರ್ಥಗಳು
ಕೋಫ್ತಾ ಮಾಡಲು ಬೇಕಾಗುವ ಪದಾರ್ಥಗಳು
ಬಟಾಣಿ 2 ಕಪ್
ಕಡಲೆ ಹಿಟ್ಟು 3-4 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಖಾರದ ಪುಡಿ 1ಚಮಚ, ಅರಿಶಿಣ ಪುಡಿ ಅರ್ಧ ಚಮಚ
ನಿಂಬೆ ರಸ 1 ಚಮಚ
ಎಣ್ಣೆ

ಸಾರು ಮಾಡಲು ಬೇಕಾಗುವ ಪದಾರ್ಥಗಳು
ಜೀರಿಗೆ ಅರ್ಧ ಚಮಚ
ಈರುಳ್ಳಿ 3
ಟೊಮೆಟೊ 2
ಎಣ್ಣೆ
ಕೊತ್ತಂಬರಿ ಪುಡಿ 1 ಚಮಚ
ಖಾರದ ಪುಡಿ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ
ಕರಿಬೇವಿನ ಎಲೆ
ಸ್ವಲ್ಪ ಸಾಸಿವೆ

ಮಾಡುವ ವಿಧಾನ:
* ಒಂದು ದೊಡ್ಡ ಬಟ್ಟಲಿನಲ್ಲಿ ಬಟಾಣಿ, ಕಡಲೆ ಹಿಟ್ಟು, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಅರಿಶಿಣ ಪುಡಿ, 1 ಚಮಚ ಖಾರದ ಪುಡಿ, ನಿಂಬೆ ರಸ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಉಂಡೆ ಕಟ್ಟಿ ಒಂದು ಬದಿಯಲ್ಲಿ ಇಡಿ.

* ಈಗ ಪ್ಯಾನ್ ಗೆ ಅರ್ಧದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಕಾದ ಎಣ್ಣೆಗೆ ಬಟಾಣಿಯ ಉಂಡೆಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಒಂದು ಬಟ್ಟಲಿನಲ್ಲಿ ಹಾಕಿಡಿ.

* ನಂತರ ಈರುಳ್ಳಿಯನ್ನು ಪೇಸ್ಟ್ ಮಾಡಿ, ಟೊಮೆಟೊವನ್ನು ಕೂಡ ಪೇಸ್ಟ್ ಮಾಡಿ.

* ಈಗ ಸಾರು ಮಾಡಲು ಪ್ಯಾನ್ ಅನ್ನು ಉರಿ ಮೇಲೆ ಇಟ್ಟು ಒಂದು ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಜೀರಿಗೆ ಮತ್ತು ಕರಿಬೇವಿನ ಎಲೆ ಹಾಕಿ ಒಂದು ನಿಮಿಷ ಫ್ರೈ ಮಾಡಿ, ನಂತರ ಪೇಸ್ಟ್ ಮಾಡಿದ ಈರುಳ್ಳಿ ಹಾಕಿ 5 ನಿಮಿಷ ಫ್ರೈ ಮಾಡಿ.

* ನಂತರ ಟೊಮೆಟೊ ಹಾಕಿ 2-3 ನಿಮಿಷ ಫ್ರೈ ಮಾಡಿ, ನಂತರ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಅರ್ಧ ಕಪ್ ನೀರು ಸೇರಿಸಿ ಕುದಿಸಿ.

* ಮಿಶ್ರಣ ಚೆನ್ನಾಗಿ ಕುದಿ ಬಂದು ಗ್ರೇವಿ ರೀತಿಯಲ್ಲಿ ಆಗುವಾಗ ರೆಡಿ ಮಾಡಿಟ್ಟ ಕೋಫ್ತಾ ಹಾಕಿ 2 ನಿಮಿಷ ಕುದಿಸಿ ಉರಿಯಿಂದ ಇಳಿಸಿದರೆ ಬಟಾಣಿ ಕೋಫ್ತಾ ರೆಡಿ.

English summary

Peas Kofta Recipe

Kofta recipes are a favourite among many. A kofta curry can be served with roti or rice preparations alike. Peas kofta is among the most highly popular and delicious of all the kofta recipes. This kofta curry is made with an ensemble of a few spices and peas
X
Desktop Bottom Promotion