For Quick Alerts
ALLOW NOTIFICATIONS  
For Daily Alerts

ಅಡುಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲವೇ?

|

ಕೆಲವೊಮ್ಮೆ ಏನು ಅಡುಗೆ ಮಾಡಬೇಕೆಂದೇ ತೋಚುವುದಿಲ್ಲ. ಸ್ವಲ್ಪ ಶ್ರಮವಹಿಸಿ ರುಚಿಕಟ್ಟಾದ ಅಡುಗೆ ಮಾಡಲು ಮನಸ್ಸಿರುವುದಿಲ್ಲ. ಸುಲಭದಲ್ಲಿ ಮಾಡಬಹುದಾದ ಟೊಮೆಟೊ ಸಾರು ಮಾಡೋಣ ಎಂದರೆ, ಅದೂ ತಿಂದು ಸಾಕಾಗಿರುತ್ತದೆ. ಇನ್ನು ಸಾಂಬಾರ್ ಮಾಡೋಣ ಅಂದರೆ ಅದಕ್ಕೂ ಮನಸ್ಸಾಗುವುದಿಲ್ಲ. ಯಾವುದಾದರು ಸುಲಭದಲ್ಲಿ ಮಾಡಬಹುದಾದ ಅಡುಗೆಯನ್ನು ಮಾಡಿ, ಕೂತು ಬಿಡೋಣ ಎಂದೆನಿಸಿಬಿಡುತ್ತದೆ.

ಈ ರೀತಿ ಅನಿಸಿದ ದಿನ, ನೀವು ವೈಟ್ ಗ್ರೇವಿ ಇಷ್ಟಪಡುವವರಾದರೆ ರುಚಿಯಾದ, ಮಾಡಲು ಸರಳವಾದ ಈ ಪನ್ನೀರ್ ವೈಟ್ ಗ್ರೇವಿಯನ್ನು ಮಾಡಬಹುದು.

Paneer In White Gravy

ಬೇಕಾಗುವ ಸಾಮಾಗ್ರಿಗಳು
ಎಣ್ಣೆ 3 ಚಮಚ
ಈರುಳ್ಳಿ 1
ಶುಂಠಿ (ಒಂದು ಚಿಕ್ಕ ಪೀಸ್)
ಬೆಳ್ಳುಳ್ಳಿ ಎಸಳು 4-5
ಗೋಡಂಬಿ4-5
ಗರಂ ಮಸಾಲ 1/4 ಚಮಚ
ಹಾಲು 6 ಚಮಚ
ಕ್ರೀಮ್ 3 ಚಮಚ (ಕ್ರೀಮ್ ಫುಡ್ ಬಜಾರ್ ನಲ್ಲಿ ದೊರೆಯುವುದು)
ನೀರು 2 ಕಪ್
ಪನ್ನೀರ್ 2 ಕಪ್
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು(ಅಲಂಕಾರ ಮಾಡಲು)

ತಯಾರಿಸುವ ವಿಧಾನ:

* ಮಿಕ್ಸಿಯಲ್ಲಿ ಈರುಳ್ಳಿ, ಶುಂಠಿ, ಗೋಡಂಬಿ, ಬೆಳ್ಳುಳ್ಳಿ ಹಾಕಿ ನುಣ್ಣನೆ ರುಬ್ಬಿ.

* ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಈರುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಈಗ ಬಾಣಲೆಗೆ ಹಾಲು, ನೀರು, ಕ್ರೀಮ್ ಹಾಕಿ, ನಂತರ ಪನ್ನೀರ್, ಗರಂ ಮಸಾಲ, ರುಚಿಗೆ ತಕ್ಕ ಉಪ್ಪು ಹಾಕಿ 5 ನಿಮಿಷ ಕುದಿಸಿ, ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಉರಿಯಿಂದ ಇಳಿಸಿ.

ಈಗ ರೆಡಿಯಾದ ಪನ್ನೀರ್ ಗ್ರೇವಿ ಬಿಸಿ-ಬಿಸಿ ಇರುವಾಗಲೇ ರೊಟ್ಟಿ ಜೊತೆ ಸವಿಯಿರಿ.

English summary

Paneer In White Gravy

Whenever you will be short on ideas on what to cook, paneer comes as a rescue. This is very quick and easy recipe and it tastes awesome. If you like white gravies, then try this one.
X
Desktop Bottom Promotion