For Quick Alerts
ALLOW NOTIFICATIONS  
For Daily Alerts

ಸರಳವಾದ, ರುಚಿಯಾದ ಸಾರು-ಕ್ಯಾಪ್ಸಿಕಂ ಪನ್ನೀರ್

|

ಈ ಪನ್ನೀರ್ ಸಾರು ತುಂಬಾ ಸರಳವಾದ ರೆಸಿಪಿಯಾಗಿದೆ. ರುಬ್ಬಿ ಮಾಡುವಷ್ಟು ಪುರುಸೊತ್ತು ಇಲ್ಲ ಅನ್ನುವಾಗ ಈ ಅಡುಗೆಯನ್ನು ಮಾಡಬಹುದು. ಈ ಸಾರು ಮಾಡುವ ವಿಧಾನ ಸರಳವಾಗಿದ್ದರೂ, ಸಾರು ರುಚಿಕರವಾಗಿರುತ್ತದೆ. ಬ್ಯಾಚುಲರ್ಸ್ ಹೆಚ್ಚಿನ ಶ್ರಮವಿಲ್ಲದೆ ಮಾಡಬಹುದಾದ ಅಡುಗೆ ಇದಾಗಿದೆ.

ಬನ್ನಿ ಇದನ್ನು ಮಾಡುವ ವಿಧಾನ ತಿಳಿಯೋಣ:

Paneer Capsicum Curry With Roti

ಬೇಕಾಗುವ ಸಾಮಾಗ್ರಿಗಳು
ಪನ್ನೀರ್ 200 ಗ್ರಾಂ
ಈರುಳ್ಳಿ 1
ದುಂಡು ಮೆಣಸಿನಕಾಯಿ 1
ಟೊಮೆಟೊ 2
ಹಸಿ ಮೆಣಸಿನಕಾಯಿ 2
ಜೀರಿಗೆ ಅರ್ಧ ಚಮಚ
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಜೀರಿಗೆ 1 ಚಮಚ
ಕೊತ್ತಂಬರಿ ಪುಡಿ ಅರ್ಧ ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಗರಂ ಮಸಾಲ 1/4ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಎಣ್ಣೆಯನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಬಿಸಿಯಾದಾಗ ಪನ್ನೀರ್ ತುಂಡುಗಳನ್ನು ಹಾಕಿ, ಪನ್ನೀರ್ ಕಂದು ಬಣ್ಣ ಬರುವವರೆಗೆ ಹುರಿಯಿರಿ. ತುಂಬಾ ಫ್ರೈ ಮಾಡಬೇಡಿ. ಈಗ ಪನ್ನೀರ್ ತುಂಡುಗಳನ್ನು ಒಂದು ಪಾತ್ರೆಗೆ ಹಾಕಿಡಿ.

* ಈಗ ಪುನಃ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ನಂತರ ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ದುಂಡು ಮೆಣಸಿನಕಾಯಿ ಹಾಕಿ 2 ನಿಮಿಷ ಹುರಿದು, ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ನಂತರ ಉಪ್ಪು, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ , ಗರಂ ಮಸಾಲ ಪುಡಿ ಹಾಕಿ 1 ಕಪ್ ನೀರು ಹಾಕಿ ಕುದಿಸಿ.

* ನಂತರ ಪನ್ನೀರ್ ಹಾಕಿ 4-5 ನಿಮಿಷ ಕುದಿಸಿ, ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕ್ಯಾಪ್ಸಿಕಂ ಪನ್ನೀರ್ ಸಾರು ರೆಡಿ.

English summary

Paneer Capsicum Curry With Roti | Variety Of Paneer Recipe | ಪನ್ನೀರ್ ಕ್ಯಾಪ್ಸಿಕಂ ರೆಸಿಪಿ | ಅನೇಕ ಬಗೆಯ ಪನ್ನೀರ್ ರೆಸಿಪಿ

The special taste of the paneer capsicum curry comes from its utter simplicity. We are going to make the Northern variety of this paneer recipe today.
 
X
Desktop Bottom Promotion