For Quick Alerts
ALLOW NOTIFICATIONS  
For Daily Alerts

ಪಾಲಾಕ್-ಮಶ್ರೂಮ್ ಗ್ರೇವಿ ರೆಸಿಪಿ

|

ಚಪಾತಿ ಅಥವಾ ರೊಟ್ಟಿಗೆ ಈ ಪಾಲಾಕ್-ಮಶ್ರೂಮ್ ಗ್ರೇವಿಯಿದ್ದರೆ ಬಾಯಿ ರುಚಿ ಹೆಚ್ಚುವುದು. ಸಾಮಾನ್ಯವಾಗಿ ಪಾಲಾಕ್ ಮತ್ತು ಮಶ್ರೂಮ್ ಮಿಕ್ಸ್ ಮಾಡಿ ಅಡುಗೆ ಮಾಡುವುದು ತುಂಬಾ ವಿರಳ. ಪಾಲಾಕ್ ಪನ್ನೀರ್ ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿರುತ್ತದೆ.

ಪ್ರತೀಬಾರಿ ಪಾಲಾಕ್ ಪನ್ನೀರ್ ಏಕೆ? ಪಾಲಾಕ್ ಮಶ್ರೂಮ್ ಟ್ರೈ ಮಾಡೋಣ ಏನಂತೀರಿ?

Palak And Mushroom Gravy

ಬೇಕಾಗುವ ಸಾಮಾಗ್ರಿಗಳು
2 ಕಟ್ಟು ಪಾಲಾಕ್ ಸೊಪ್ಪು
ಅಣಬೆ (2 ಪ್ಯಾಕೆಟ್)
ಈರುಳ್ಳಿ 1
ಬೆಳ್ಳುಳ್ಳಿ 4-5 ಎಸಳು
ಜೀರಿಗೆ ಅರ್ಧ ಚಮಚ
ಹಸಿ ಮೆಣಸಿನಕಾಯಿ 2-3
ಅರ್ಧ ಚಮಚ ಕರಿಮೆಣಸಿನ ಪುಡಿ
ಗರಂ ಮಸಾಲ 1 ಚಮಚ
ಬೆಣ್ಣೆ 1 ಚಮಚ

ತಯಾರಿಸುವ ವಿಧಾನ:

* ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಿ, ನಂತರ ಅದನ್ನು ಬಿಸಿ ನೀರಿನಿಂದ ತೆಗೆದು ತಣ್ಣೀರು ಇರುವ ಪಾತ್ರೆಗೆ ಹಾಕಿ, ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಒಂದು ಬದಿಯಲ್ಲಿಡಿ.

* ಈಗ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ, ಹಸಿ ಮೆಣಸಿನಕಾಯಿ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಬೆಳ್ಳುಳ್ಳಿ ಹಾಕಿ ಮತ್ತೆ 2 ನಿಮಿಷ ಹುರಿಯಿರಿ, ಕರಿ ಮೆಣಸಿನ ಪುಡಿ ಸೇರಿಸಿ, ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ, ಈಗ ಅಣಬೆ ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ, ಗರಂ ಮಸಾಲ ಹಾಕಿ 5 ನಿಮಿಷ ಹುರಿಯಿರಿ.

* ನಂತರ ಪಾಲಾಕ್ ಪೇಸ್ಟ್ ಹಾಕಿ ಮತ್ತೆ 3-4 ನಿಮಿಷ ಸೌಟ್ ನಿಂದ ಆಡಿಸಿ ಉಪ್ಪು ಸರಿಯಿದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ ಮಶ್ರೂಮ್-ಪಾಲಾಕ್ ಗ್ರೇವಿ ರೆಡಿ.

English summary

Palak And Mushroom Gravy | Variety Of Gravy Recipe

Both palak and mushrooms are favourite of those who likes a continental touch in their foods these days. So, it is good to have an Indian recipe that makes use of both palak and mushrooms. This dish is actually a spinach based curry and is called Palak and mushroom Gravy.
Story first published: Friday, May 24, 2013, 17:44 [IST]
X
Desktop Bottom Promotion