For Quick Alerts
ALLOW NOTIFICATIONS  
For Daily Alerts

ಪಾಲಾಕ್ ಅಂಬಾಟ್ ರೆಸಿಪಿ

By Herman Vaz
|

ಏರುತ್ತಿರುವ ತರಕಾರಿ ರೇಟ್ ನೋಡಿದರೆ ಏನು ಅಡುಗೆ ಮಾಡುವುದೇ ಗೊತ್ತಾಗುವುದಿಲ್ಲ. ತರಕಾರಿ ರೇಟ್ ಹೆಚ್ಚಾಗಿದೆ ಎಂದು ಬಾಯಿ ರುಚಿಗೆ ಮೋಸ ಮಾಡಿಕೊಳ್ಳಲು ಸಾಧ್ಯವೇ? ಆದ್ದರಿಂದ ಇಲ್ಲಿ ನಾವು ಮಿತವಾದ ತರಕಾರಿ ಬಳಸಿ, ರುಚಿಯಾಗಿ ಮಾಡಬಹುದಾದ ಪಾಲಾಕ್ ಅಂಬಾಟ್ ನ ರೆಸಿಪಿ ನೀಡಿದ್ದೇವೆ.

ಈ ಸಾರನ್ನು ಸುಲಭವಾಗಿ ಮಾಡಬಹುದಾಗಿದ್ದು, ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಪಾಲಾಕ್ 2-3 ಕಟ್ಟು(ಪಾಲಾಕ್ ಕಟ್ಟು ಮೀಡಿಯಂ ಇದ್ದರೆ 2 ಸಾಕು)
ತೊಗರಿ ಬೇಳೆ
ಈರುಳ್ಳಿ1
ತೊಗರಿ ಬೇಳೆ(ಕಾಲು ಕಪ್ ಗಿಂತ ಸ್ವಲ್ಪ ಕಡಿಮೆ)
ಬೆಲ್ಲದ ಪುಡಿ 1 ಚಮಚ(ಬೇಕಿದ್ದರೆ
ರುಚಿಗೆ ತಕ್ಕ ಉಪ್ಪು
ಅರಿಶಿಣ ಅರ್ಧ ಚಮಚ

ಮಸಾಲೆಗೆ
ಅರ್ಧ ಕಪ್ ತೆಂಗಿನ ತುರಿ
ಹುಣಸೆ ಹಣ್ಣು (ಚಿಕ್ಕ ನಿಂಬೆ ಗಾತ್ರದಷ್ಟು)
ಒಣ ಮೆಣಸು 5-6
ಎಣ್ಣೆ ಅರ್ಧ ಚಮಚ(ತೆಂಗಿನೆಣ್ಣೆ ಒಳ್ಳೆಯದು)

ಮಾಡುವ ವಿಧಾನ:

* ತೊಗರಿ ಬೇಳೆಯನ್ನು ತೊಳೆದು ಪ್ರೆಶರ್ ಕುಕ್ಕರ್ ಗೆ ಹಾಕಿ, ನಂತರ ಪಾಲಾಕ್ ಸೊಪ್ಪನ್ನು ಶುಚಿ ಮಾಡಿ ಹಾಕಿ, ಈರುಳ್ಳಿ ಹಾಕಿ ಬೆಲ್ಲ ಸೇರಿಸಿ, ರುಚಿಗೆ ತಕ್ಕ ಉಪ್ಪು, ಅರಿಶಿಣ, 3 ಕಪ್ ನೀರು ಹಾಕಿ ಪ್ರೆಶರ್ ಕುಕ್ಕರ್ ನ ಬಾಯಿ ಮುಚ್ಚಿ 3-4 ವಿಶಲ್ ಬರುವವರೆಗೆ ಬೇಯಿಸಿ. ತೊಗರಿ ಬೇಳೆ ಚೆನ್ನಾಗಿ ಬೆಂದಿರಬೇಕು.

* ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಒಣ ಮೆಣಸನ್ನೂ ಹಾಕಿ ಹುರಿಯಿರಿ. ಆದರೆ ಒಣ ಮೆನಸು ಸೀದು ಹೋಗದಂತೆ ಎಚ್ಚರವಹಿಸಿ.

* ಈಗ ತೆಂಗಿನ ತುರಿ, ಹುರಿದ ಒಣ ಮೆಣಸನ್ನು ಮಿಕ್ಸಿಗೆ ಹಾಕಿ, ಹುಣಸೆ ಹಣ್ಣು ಸೇರಿಸಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿ.

* ಈಗ ಪ್ರೆಶರ್ ಕುಕ್ಕರ್ ನ ಮುಚ್ಚಳ ತೆಗೆದು ಬೇಯಿಸಿ ತೊಗರಿಬೇಳೆಯನ್ನು ಸೌಟ್ ನಿಂದ ಮ್ಯಾಶ್ ಮಾಡಿ.

* ಈಗ ಗ್ಯಾಸ್ ಉರಿ ಮೇಲೆ ಮಾತ್ರೆ ಇಟ್ಟು ಅದರಲ್ಲಿ ರುಬ್ಬಿದ ಮಸಾಲೆ ಹಾಕಿ, ನಂತರ ಮ್ಯಾಶ್ ಮಾಡಿದ ತೊಗರಿಬೇಳೆ ಹಾಕಿ, ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ ಸಾಧಾರಣ ಉರಿಯಲ್ಲಿ 10 ನಿಮಿಷ ಕುದಿಸಿ. ಹೀಗೆ ಕುದಿಸುವಾಗ ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ.

ಇಷ್ಟು ಮಾಡಿದರೆ ರುಚಿಯಾದ ಪಾಲಾಕ್ ಅಂಬಾಟ್ ರೆಡಿ. ಇದನ್ನು ಅನ್ನದ ಜೊತೆಯೂ ತಿನ್ನಲೂ ರುಚಿಯಾಗಿರುತ್ತದೆ. ಇಡ್ಲಿ, ದೋಸೆಗೆ ಬೆಸ್ಟ್ ಕಾಂಬಿನೇಷನ್ ಕೂಡ ಹೌದು.

English summary

Palak Ambat Recipe

In this recipe the spinach is cooked in a creamy, coconut gravy with a hint of sourness due to the tamarind. You can easily prepare this delectable spinach curry in very less time.
X
Desktop Bottom Promotion