For Quick Alerts
ALLOW NOTIFICATIONS  
For Daily Alerts

ಹೆಸರುಬೇಳೆ ಬಳಸಿ ಮಾಡುವ ಭಿನ್ನ ರೆಸಿಪಿ!

|

ಶ್ರಾವಣ ಮಾಸದಲ್ಲಿ ಹೆಚ್ಚಿನವರು ಈರುಳ್ಳಿ-ಬೆಳ್ಳುಳ್ಳಿ ತಿನ್ನುವುದಿಲ್ಲ. ಆದ್ದರಿಂದ ಶ್ರಾವಣ ಮಾಸದ ಸ್ಪೆಷಲ್ ರೆಸಿಪಿಯಾಗಿ ಹೆಸರುಬೇಳೆಯಿಂದ ಮಾಡುವ ದಾಲ್ ಕಡಿ ರೆಸಿಪಿ ನೀಡಿದ್ದೇವೆ.

ಕಡಿಯನ್ನು ಸಾಮಾನ್ಯವಾಗಿ ಕಡಲೆ ಹಿಟ್ಟಿನಿಂದ ಮಾಡುತ್ತಾರೆ. ಮೊದಲು ಪಕೋಡ ಮಾಡಿ, ನಂತರ ಕಡಲೆ ಹಿಟ್ಟಿನ ಗ್ರೇವಿ ಮಾಡಿ ಅದನ್ನು ಮೊಸರಿನಲ್ಲಿ ಕುದಿಸಿ ಮಾಡಲಾಗುವುದು. ಆದರೆ ಇಲ್ಲಿ ನಾವು ಸ್ವಲ್ಪ ಭಿನ್ನ ರುಚಿಯಾಗಿ ಹೆಸರುಬೇಳೆಯಿಂದ ಮಾಡುವ ಕಡಿ ರೆಸಿಪಿ ನೀಡಿದ್ದೇವೆ ನೋಡಿ:

Moong Dal Kadhi Recipe

ಬೇಕಾಗುವ ಸಾಮಾಗ್ರಿಗಳು
ಹೆಸರುಬೇಳೆ ಒಂದೂವರೆ ಕಪ್
ಮೊಸರು 2 ಕಪ್
ಚಿಟಿಕೆಯಷ್ಟು ಇಂಗು
ಮೆಂತೆ ಬೀಜ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಹಸಿ ಮೆಣಸಿನಕಾಯಿ 2+2
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
ಎಣ್ಣೆ 1 ಚಮಚ
ನೀರು 1 ಕಪ್
ಫ್ರೈ ಮಾಡಲು ಎಣ್ಣೆ

ತಯಾರಿಸುವ ವಿಧಾನ:

* ಹೆಸರುಬೇಳೆಯನ್ನು 3-4 ಗಂಟೆಗಳ ನೀರಿನಲ್ಲಿ ನೆನೆ ಹಾಕಿ. ನಂತರ ನೀರು ಸೋಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ.

* ನಂತರ ಆ ಪೇಸ್ಟ್ ಅನ್ನು 2 ಭಾಗಗಳಾಗಿ ವಿಂಗಡಿಸಿ.

* ಅರ್ಧ ಭಾಗದಲ್ಲಿ ಹಸಿ ಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು, 1 ಚಮಚ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಚಿಕ್ಕ-ಚಿಕ್ಕ ಉಂಡೆ ಕಟ್ಟಿ.

* ಈಗ ಉಂಡೆ ಕಟ್ಟಿದ ಹೆಸರು ಬೇಳೆಯನ್ನು ಡೀಪ್ ಫ್ರೈ ಮಾಡಿ ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ಸಾರು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಜೀರಿಗೆ, ಮೆಂತೆ, ಇಂಗು, ಹಸಿ ಮೆಣಸಿನಕಾಯಿ ಹಾಕಿ 2 ನಿಮಿಷ ಫ್ರೈ ಮಾಡಿ ಮೊಸರು, ರುಬ್ಬಿಟ್ಟ ಹೆಸರುಬೇಳೆ ಮತ್ತು 1 ಕಪ್ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ, ಅರಿಶಿಣ ಸೇರಿಸಿ ಸಾಧಾರಣ ಉರಿಯಲ್ಲಿ 15ರಿಂದ 20 ನಿಮಿಷ ಕುದಿಸಿ.

* ನಂತರ ಫ್ರೈ ಮಾಡಿಟ್ಟ ಪಕೋಡ ಹಾಕಿ ಒಮ್ಮೆ ಮಿಕ್ಸ್ ಮಾಡಿ, ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ದಾಲ್ ಕಡಿ ರೆಡಿ.

English summary

Moong Dal Kadhi Recipe

Kadhi is generally prepared with gram flour or besan. First the pakoras are fried out of the besan and then it is cooked with the curd and gram flour based gravy. Here we have added a tasty twist to this recipe by substituting the gram flour with another healthy and tasty option of moong dal or golden lentil. Moong dal adds a delightful flavour to this tangy vegetarian recipe.
X
Desktop Bottom Promotion