For Quick Alerts
ALLOW NOTIFICATIONS  
For Daily Alerts

ಈರುಳ್ಳಿ ಹಾಕದ ಮಿಶ್ರ ಸೊಪ್ಪಿನ ಗ್ರೇವಿ

|

ಈರುಳ್ಳಿ ರೇಟ್ ಕೇಳುವಾಗ ಅದನ್ನು ಕತ್ತರಿಸುವ ಮುನ್ನವೇ ಕಣ್ಣಿನಲ್ಲಿ ನೀರು ಬರುತ್ತದೆ. ಈರುಳ್ಳಿ ಕೆಜಿಗೆ 60 ರು. ಅಂದರೆ ಬೆಲೆಯೇನು ಸಾಮಾನ್ಯವೇ? ಕೆಲ ಗೃಹಿಣಿಯರಿಗಂತೂ ಈರುಳ್ಳಿ ಇಲ್ಲವೆಂದರೆ ಅಡುಗೆ ಮಾಡುವುದು ಹೇಗೆ ಎಂದು ತೋಚುವುದೇ ಇಲ್ಲ. ಪ್ರತಿಯೊಂದು ಸಾರು, ಪಲ್ಯಕ್ಕೆ ಈರುಳ್ಳಿ ಹಾಕಿ ಮಾಡಿ ಅಭ್ಯಾಸವಾದರೆ ಈರುಳ್ಳಿ ಇಲ್ಲವಾದರೆ ಅಡುಗೆ ರುಚಿಯಾಗಿ ಬರುವುದಿಲ್ಲವೆಂದೇ ಭಾವಿಸುತ್ತೇವೆ.

ಆದರೆ ಕೆಲವೊಂದು ಗ್ರೇವಿ, ಪಲ್ಯ, ಸಾರುಗಳಿವೆ ಅವುಗಳಿಗೆ ಈರುಳ್ಳಿ ಇಲ್ಲದಿದ್ದರೂ ನಡೆಯುತ್ತೆ, ರುಚಿಯೂ ಸೂಪರ್ ಆಗಿರುತ್ತೆ. ಸಾರಿಗೆ ನೋ ಆನಿಯನ್ ಎಂದು ಹೇಳ ಬಯಸುವವರಿಗಾಗಿ ಇಲ್ಲಿದೆ ನೋಡಿ ರೆಸಿಪಿ.

Mixed Leaves Gravy Without Onion

ಬೇಕಾಗುವ ಸಾಮಾಗ್ರಿಗಳು
ಪಾಲಾಕ್ ಸೊಪ್ಪು 2 ಕಟ್ಟು
ಮೆಂತೆ ಸೊಪ್ಪು 1 ಚಿಕ್ಕ ಕಟ್ಟು
ಸ್ವಲ್ಪ ಸಬ್ಬಸ್ಸಿಗೆ ಸೊಪ್ಪು
ದಂಟಿನ ಸೊಪ್ಪು(ಒಂದು ಚಿಕ್ಕ ಕಟ್ಟು)
ಹೆಸರು ಬೇಳೆ ಅರ್ಧ ಕಪ್ (ಕಡಲೆ ಬೇಳೆ ಹಾಕಿಯೂ ಮಾಡಬಹುದು, ಕಡಲೆ ಬೇಳೆಯಾದರೆ 15 ನಿಮಿಷ ನೀರಿನಲ್ಲಿ ನೆನೆಹಾಕಿ ನಂತರ ಮಾಡಿ)
ಆಲೂಗಡ್ಡೆ 2
ಬದನೆಕಾಯಿ1
ಟೊಮೆಟೊ 1-2
ಎಣ್ಣೆ 2 ಚಮಚ
ಜೀರಿಗೆ 1 ಚಮಚ
ಹಸಿ ಮೆಣಸಿನಕಾಯಿ 2
ಸ್ವಲ್ಪ ಶುಂಠಿ
ಖಾರದ ಪುಡಿ(ನಿಮ್ಮ ರುಚಿಗೆ ತಕ್ಕಷ್ಟು)
ಅರಿಶಿಣ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಆಲೂಗಡ್ಡೆ, ಟೊಮೆಟೊ, ಬದನೆಕಾಯಿಯನ್ನು ಸ್ವಚ್ಛ ಮಾಡಿ ಚಿಕ್ಕದಾಗಿ ಕತ್ತರಿಸಿ.

* ಈಗ ಪ್ರೆಶರ್ ಕುಕ್ಕರ್ ತರಕಾರಿ ಮತ್ತು ಸ್ವಚ್ಛ ಮಾಡಿದ ಸೊಪ್ಪು, ಹೆಸರು ಬೇಳೆ, ಹಸಿ ಮೆಣಸಿನಕಾಯಿ, ಸ್ವಲ್ಪ ಉಪ್ಪು, ನೀರು ಹಾಕಿ 2-3 ವಿಶಲ್ ಬರುವವರೆಗೆ ಬೇಯಿಸಿ( ಸೊಪ್ಪು ಹಾಕುವುದರಿಂದ ತುಂಬಾ ನೀರು ಹಾಕಬೇಡಿ)

* ಈಗ ಸಾರು ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಶುಂಠಿ ಹಾಕಿ, ನಂತರ ಬೇಯಿಸಿದ ತರಕಾರಿಯನ್ನು ಹಾಕಿ , ರುಚಿಗೆ ತಕ್ಕ ಖಾರ ಹಾಕಿ, ಅರಿಶಿಣ ಪುಡಿ ಹಾಕಿ, ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿ 5 ನಿಮಿಷ ಕುದಿಸಿದರೆ ಸವಿರುಚಿಯ ಮಿಶ್ರ ಸೊಪ್ಪಿನ ಗ್ರೇವಿ ರೆಡಿ.

English summary

Mixed Leaves Gravy Without Onion

Onion rate itself brings tears in our eyes. If you want to prepare gravy without putting onion, here is a delicious gravy recipe.
X
Desktop Bottom Promotion