For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟಕರ ಮಸೂರ್ ದಾಲ್ ರೆಸಿಪಿ

|

ಸಾಮಾನ್ಯವಾಗಿ ನಾವು ತೊಗರಿ ಬೇಳೆ ಅಥವಾ ಹೆಸರು ಬೇಳೆ ಬಳಸಿ ಬೇಳೆ ಸಾರು ತಯಾರಿಸುತ್ತೇವೆ. ಮಾಮೂಲಿ ಮಾಡುವ ಬೇಳೆ ಸಾರಿಗಿಂತ ಭಿನ್ನ ರುಚಿಯ ಬೇಳೆ ಸಾರಿನ ರುಚಿ ನೋಡ ಬಯಸುವುದಾದರೆ ಮಸೂರ್ ದಾಲ್ ಟ್ರೈ ಮಾಡಬಹುದು.

ಮಸೂರ್ ಜೊತೆ ಸ್ವಲ್ಪ ತರಕಾರಿ ಹಾಕಿದರೆ ರುಚಿ ಮತ್ತಷ್ಟು ಸ್ವಾದಿಷ್ಟಕರವಾಗಿರುವುದರಿಂದ ತರಕಾರಿ ಹಾಕಿ ಮಾಡುವ ಮಸೂರ್ ದಾಲ್ ರೆಸಿಪಿ ನೀಡಿದ್ದೇವೆ ನೋಡಿ:

Masoor Dal Vegetable Recipe

ಬೇಕಾಗುವ ಸಾಮಾಗ್ರಿಗಳು
ಮಸೂರ್ ದಾಲ್ 1 ಕಪ್
ಈರುಳ್ಳಿ 1
ಸ್ವಲ್ಪ ಹೂ ಕೋಸು
ಆಲೂಗಡ್ಡೆ 2
ಬಟಾಣಿ ಅರ್ಧ ಕಪ್
ಬೀನ್ಸ್ 4-5
ಕ್ಯಾರೆಟ್ 2
ಟೊಮೆಟೊ1
ಸ್ವಲ್ಪ ಶುಂಠಿ
ಬೆಳ್ಳುಳ್ಳಿ ಎಸಳು 5-6
ಹಸಿ ಮೆಣಸಿನಕಾಯಿ 2
ಚಿಟಕಿಯಷ್ಟು ಇಂಗು
ಒಣ ಮೆಣಸು 2
ಅರಿಶಿಣ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ನಿಂಬೆ ರಸ 1 ಚಮಚ
ಸ್ವಲ್ಪ ಕರಿಬೇವಿನ ಎಲೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಎಣ್ಣೆ 1 ಚಮಚ
ನೀರು 2 ಕಪ್

ತಯಾರಿಸುವ ವಿಧಾನ:

* ಮಸೂರ್ ದಾಲ್ ಅನ್ನು ತೊಳೆದಿಡಿ.

* ಈಗ ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಇಂಗು, ಒಣ ಮೆಣಸು, ಕರಿ ಬೇವಿನ ಎಲೆ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಶುಂಠಿ ಹಾಕಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ , ಕ್ಯಾರೆಟ್, ಹೂಕೋಸು, ಬೀನ್ಸ್, ಆಲೂಗಡ್ಡೆ, ಹಸಿ ಬಟಾಣಿ ಹಾಕಿ ಮಿಕ್ಸ್ ಮತ್ತೆ 5 ನಿಮಿಷ ಫ್ರೈ ಮಾಡಿ, ಅರಿಶಿಣ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ನಂತರ ಮಸೂರ್ ದಾಲ್ ಹಾಕಿ 2 ಕಪ್ ನೀರು ಹಾಕಿ 3-4 ವಿಶಲ್ ಬರುವವರೆಗೆ ಬೇಯಿಸಿ.

* ನಂತರ ಉರಿಯಿಂದ ಇಳಿಸಿ, ಸ್ವಲ್ಪ ತಣ್ಣಗಾದ ಮೇಲೆ ಕುಕ್ಕರ್ ನ ಮುಚ್ಚಳ ತೆಗೆದು ನಿಂಬೆ ರಸ ಹಿಂಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಸೂರ್ ದಾಲ್ ಕರಿ ರೆಡಿ.

English summary

Masoor Dal Vegetable Recipe

To add a twist to our regular dal and to make it even more healthy, here we have a simple dal vegetable recipe for you.
Story first published: Friday, August 23, 2013, 17:54 [IST]
X
Desktop Bottom Promotion