For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ಮಾವಿನಕಾಯಿ ರಸಂ

|

ಮಾವಿನಕಾಯಿ ಬಳಸಿ ಮಾಡುವ ಅನೇಕ ಬಗೆಯ ನಳಪಾಕವನ್ನು ಈ ಸಮಯದಲ್ಲಿ ಮಾಡುವುದೇ ಸೂಕ್ತ. ಇಲ್ಲದಿದ್ದರೆ ಮಾವಿನಕಾಯಿಗಾಗಿ ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ.

ಮಾವಿನ ಕಾಯಿ ಬಳಸಿ ನೂರಕ್ಕೂ ಹೆಚ್ಚು ಅಡುಗೆಗಳನ್ನು ತಯಾರಿಸಬಹುದು. ಇಲ್ಲಿ ನಾವು ರಾತ್ರಿ ಅನ್ನದ ಜೊತೆ ತಿನ್ನಲು ಮಾವಿನ ಕಾಯಿ ಸಾರು ಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

Mango Rasam In Simple Steps

ಬೇಕಾಗುವ ಸಾಮಾಗ್ರಿಗಳು
* ಹಸಿ ಮಾವಿನಕಾಯಿ1 (ಕತ್ತರಿಸಿ ಬೇಯಿಸಿದ್ದು)
* 1 ತುಂಡು ಬೆಲ್ಲ
* ಅರ್ಧ ಚಮಚ ಕರಿ ಮೆಣಸಿನ ಪುಡಿ
* 1 ಚಮಚ ಜೀರಿಗೆ
* ಸ್ವಲ್ಪ ಕರಿ ಬೇವಿನ ಎಲೆ
* 2-3 ಹಸಿ ಮೆಣಸಿನ ಕಾಯಿ
* 1 ಕಪ್ ತುರಿದ ತೆಂಗಿನಕಾಯಿ
* 1 ಒಣ ಮೆಣಸು
* ನೀರು
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಕರಿ ಬೇವಿನ ಎಲೆ

ತಯಾರಿಸುವ ವಿಧಾನ:

* ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಸ್ವಲ್ಪ ನೀರು ಹಾಕಿ ಬೇಯಲು ಇಡಿ. ಹೀಗೆ ಇಡುವಾಗ ಹಸಿ ಮೆಣಸನ್ನೂ ಕತ್ತರಿಸಿ ಹಾಕಿ. ಮಾವಿನ ಕಾಯಿ ಬೆಂದ ನಂತರ ಅದರ ರಸದಿಂದ ತಿರುಳನ್ನು ಬೇರ್ಪಡಿಸಿ.

* ತುರಿದ ತೆಂಗಿನ ಕಾಯಿಲೆಗೆ ಸ್ವಲ್ಪ ಎಣ್ಣೆ ಹಾಕಿ, ಉರಿ ಮೇಲೆ ಇಟ್ಟು, ಒಣ ಮೆಣಸನ್ನು ಜೊತೆಯಲ್ಲಿಯೇ ಹಾಕಿ ಕಂದು ಬಣ್ಣವವರೆಗೆ ಹುರಿಯಿರಿ. ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ.

* ಬೇಯಿಸಿದ ಮಾವಿನಕಾಯಿಯಿಂದ ರಸವನ್ನು ಹಿಂಡಿ, ಆ ರಸವನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ.

* ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿ.

* ಈಗ ಕುದಿಯುತ್ತಿರುವ ಮಾವಿನ ರಸಕ್ಕೆ ಜೀರಿಗೆ, ಕರಿ ಮೆಣಸಿನ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನಂತರ ಬೆಲ್ಲವನ್ನು ಹಾಕಿ ಕುದಿಸಿ.

* ಈಗ ಒಗ್ಗರಣೆ ಮಾತ್ರೆಗೆ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ ಹಾಕಿ, ನಂತರ ಕರಿ ಬೇವಿನ ಎಲೆ ಹಾಕಿ ಮಾವಿನ ರಸಂಗೆ ಒಗ್ಗರಣೆ ಕೊಟ್ಟರೆ ಮಾವಿನಕಾಯಿ ರಸಂ ರೆಡಿ.

English summary

Mango Rasam In Simple Steps | Variety Of Mango Recipe | ಸರಳವಾದ ಮಾವಿನಕಾಯಿ ರಸಂ | ಅನೇಕ ಬಗೆಯ ಸಾರಿನ ರೆಸಿಪಿ

Here is a spicy mango rasam recipe that can be prepared for your evening supper and tastes best with rice and ghee.
X
Desktop Bottom Promotion