For Quick Alerts
ALLOW NOTIFICATIONS  
For Daily Alerts

ಇತರ ಸಾಂಬಾರ್ ಗಿಂತ ಭಿನ್ನ, ಕೊಂಕಣಿ ಸಾಂಬಾರ್

|

ಸಾಂಬಾರ್ ಒಂದು ಸಾಮಾನ್ಯವಾದ ಅಡುಗೆಯಾಗಿದ್ದು, ಅಲ್ಪ-ಸ್ವಲ್ಪ ಅಡುಗೆ ಬರುವವರೆಗೆ ಸಾಂಬಾರ್ ಮಾಡುವುದು ಗೊತ್ತಿರುತ್ತದೆ. ಆದರೆ ರುಚಿಯಾದ ಸಾಂಬಾರ್ ಅನ್ನು ಮಾಡಲು ಅಡುಗೆ ಪರಿಣಿತರಗಷ್ಟೇ ಸಾಧ್ಯ. ಏಕೆಂದರೆ ಸಾಂಬಾರ್ ಗೆ ಹಾಕುವ ಮಸಾಲೆ ಮತ್ತು ತಗರಕಾರಿಗಳ ಪ್ರಮಾಣ ಎಷ್ಟಿರಬೇಕೆಂದು ತಿಳಿದಿರಬೇಕು.

ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ಸಾಂಬಾರ್ ಮಾಡುತ್ತಾರೆ. ಶೈಲಿ ಬದಲಾದಂತೆ ರುಚಿ ಕೂಡ ಬದಲಾಗಿರುತ್ತದೆ. ಉಡುಪಿ ಶೈಲಿಯ ಸಾಂಬಾರ್ ನ ರುಚಿಗೂ, ಕೊಂಕಣಿ ಶೈಲಿಯಲ್ಲಿ ಮಾಡುವ ಸಾಂಬಾರ್ ಗೂ ರುಚಿಯಲ್ಲಿ ವ್ಯತ್ಯಾಸವಿರುತ್ತದೆ. ಇಲ್ಲಿ ನಾವು ಕೊಂಕಣಿ ಶೈಲಿಯ ಸಾಂಬಾರ್ ನ ರೆಸಿಪಿ ನೀಡಿದ್ದೇವೆ. ಇದನ್ನು ಟ್ರೈ ಮಾಡಿ , ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.

Konkani Sambar Recipe

ಬೇಕಾಗುವ ಸಾಮಾಗ್ರಿಗಳು
ಹೆಸರು ಬೇಳೆ 1 ಕಪ್
ಅರಿಶಿಣ ಪುಡಿ ಅರ್ಧ ಚಮಚ
ಸಾಸಿವೆ ಅರ್ಧ ಚಮಚ
ಕೊತ್ತಂಬರಿ ಬೀಜ 1 ಚಮಚ
ಜೀರಿಗೆ ಅರ್ಧ ಚಮಚ
ಮೆಂತೆ ಅರ್ಧ ಚಮಚ
ಟೊಮೆಟೊ 2
ಈರುಳ್ಳಿ 2
ಒಣ ಮೆಣಸು 4-5 (ಖಾರಕ್ಕೆ ತಕ್ಕಷ್ಟು)
ಚಿಟಿಕೆಯಷ್ಟು ಇಂಗು
ಸ್ವಲ್ಪ ಕರಿ ಬೇವಿನ ಎಲೆ
ಕಡಲೆ ಬೇಳೆ 1 ಚಮಚ
ತೆಂಗಿನ ತುರಿ 1 ಕಪ್
ಸ್ವಲ್ಪ ಬೀನ್ಸ್
ಹೂ ಕೋಸು ಅರ್ಧ ಕಪ್
ಕ್ಯಾರೆಟ್ 1(ಕತ್ತರಿಸಿದ್ದು)
ನುಗ್ಗೆಕಾಯಿ 2
1 ಚಮಚ ಬೆಲ್ಲದ ಪಾಕ
ರುಚಿಗೆ ತಕ್ಕ ಉಪ್ಪು
ರುಚಿಗೆ ತಕ್ಕ ಉಪ್ಪು
2 ಚಮಚ ಎಣ್ಣೆ

ತಯಾರಿಸುವ ವಿಧಾನ:

* ಹೆಸರು ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ ಅದಕ್ಕೆ ಬೇಯಲು ತಕ್ಕ ನೀರು ಮತ್ತು ಬೀನ್ಸ್, ನುಗ್ಗೆ ಕಾಯಿ, ಕ್ಯಾರೆಟ್, ಹೂ ಕೋಸು, ಅರಿಶಿಣ ಪುಡಿ, ಸ್ವಲ್ಪ ಉಪ್ಪು ಹಾಕಿ ಬೇಯಿಸಿ.

* ಒಣ ಮೆಣಸು, ಕೊತ್ತಂಬರಿ ಯನ್ನು ಸ್ವಲ್ಪ ಹುರಿದು ಪಾತ್ರೆಯಲ್ಲಿ ಹಾಕಿ. ನಂತರ ತೆಂಗಿನ ತುರಿಯನ್ನು ಹುರಿದು ಮೆಣಸು. ಸಂಬಾರ ಹಾಕಿದ ಪಾತ್ರೆಗೆ ಹಾಕಿ. ತೆಂಗಿನ ತುರಿಯ ಬಿಸಿ ಸ್ವಲ್ಪ ಆರಿದ ನಂತರ ಅದಕ್ಕೆ ತೆಂಗಿನ ತುರಿ ಮತ್ತು ಮಸಾಲೆಯನ್ನು ಮಿಕ್ಸಿಯಲ್ಲಿ ಜೀರಿಗೆ ಹಾಕಿ , ಮೆಂತೆ ಹಾಕಿ ಹಾಕಿ ಚೆನ್ನಾಗಿ ರುಬ್ಬಿ.

* ಈಗ ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಬರುವಾಗ ಅದಕ್ಕೆ ಕಡಲೆ ಬೇಳೆ ಹಾಕಿ ನಂತರ ಕರಿ ಬೇವಿನ ಎಲೆ, ಚಿಟಿಕೆಯಷ್ಟು ಇಂಗು ಹಾಕಿ. ಈರುಯಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

* ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ನಂತರ ಬೇಯಿಸಿದ ತರಕಾರಿ ಹಾಕಿ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನಂತರ 1 ಚಮಚ ಬೆಲ್ಲದ ಪಾಕ ಹಾಕಿ ಮತ್ತೆ 2 ನಿಮಿಷ ಕುದಿಸಿ ಉರಿಯಿಂದ ಇಳಿಸಿದರೆ ರುಚಿ ರುಚಿಯಾದ ಸಾಂಬಾರ್ ರೆಡಿ.

ಸಾಂಬಾರ್ ಪುಡಿ ರೆಸಿಪಿ

English summary

Konkani Sambar Recipe | variety Of Sambar Recipe | ಕೊಂಕಣಿ ಶೈಲಿಯಲ್ಲಿ ಸಾಂಬಾರ್ | ಅನೇಕ ಬಗೆಯ ಸಾಂಬಾರ್ ರೆಸಿಪಿ

This sambar recipe is slightly different from the other popular kinds of sambar. Like all other Konkani recipes, fresh coconut is added to Kokani sambar as well. This recipe also has special Konkani spices that makes it taste different from other sambar recipes.
X
Desktop Bottom Promotion