For Quick Alerts
ALLOW NOTIFICATIONS  
For Daily Alerts

ಸ್ಪೆಷಲ್ ಗುಜರಾತಿ ದಾಲ್ ರೆಸಿಪಿ

|

ಈ ಗುಜರಾತಿ ಶೈಲಿಯ ದಾಲ್ ರೆಸಿಪಿಯನ್ನು ಮಾಡಲು ತುಂಬಾ ಹುಳಿಯಾಗಿರುವ ಮೊಸರು ಇರಬೇಕು. ರೆಸಿಪಿ ತುಂಬಾ ಸರಳ, ಆದರೆ ಇದರ ರುಚಿ ಮಾತ್ರ ಸೂಪರ್ ಆಗಿರುತ್ತದೆ. ಇದನ್ನು ಚಪಾತಿ ಜೊತೆ ತಿನ್ನಬಹುದು, ಅನ್ನದ ಜೊತೆಯೂ ಕಲೆಸಿಕೊಂಡು ತಿನ್ನಬಹುದು.

ಬನ್ನಿ ಇದನ್ನು ಮಾಡುವುದು ಹೇಗೆಂದು ನೋಡೋಣ:

Khatta Moong: Gujarati Recipe

ಬೇಕಾಗುವ ಪದಾರ್ಥಗಳು
ಹೆಸರುಬೇಳೆ 1 ಕಪ್
ತುಂಬಾ ಹುಳಿಯಾಗಿರುವ ಮೊಸರು 1 ಕಪ್
ಕಡಲೆ ಹಿಟ್ಟು 1 ಚಮಚ
ಅರಿಶಿಣ ಪುಡಿ 1 ಚಮಚ
ಖಾರದ ಪುಡಿ 1 ಚಮಚ
ಹಸಿ ಮೆಣಸಿನಕಾಯಿ 2
ಸಕ್ಕರೆ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಲವಂಗ 2
ಚಕ್ಕೆ
ಸ್ವಲ್ಪ ಕರಿಬೇವಿನ ಎಲೆ
ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:

* ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಶುದ್ಧ ನೀರಿನಲ್ಲಿ 2 ಗಂಟೆ ಕಾಲ ನೆನೆ ಹಾಕಿ.

* ನಂತರ ನೆನೆ ಹಾಕಿದ ನೀರಿನ ಜೊತೆಯೇ ಹೆಸರುಬೇಳೆಯನ್ನು ಕುಕ್ಕರ್ ಗೆ ಹಾಕಿ ಸ್ವಲ್ಪ ನೀರು ಬೇಕಾದರೆ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ 2 ವಿಶಲ್ ಬರುವವರೆಗೆ ಬೇಯಿಸಿ.

* ಈಗ ಬಟ್ಟಲಿನಲ್ಲಿ ಮೊಸರು, ಖಾರದ ಪುಡಿ, ಕಡಲೆ ಹಿಟ್ಟು, ಸಕ್ಕರೆ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ ಹಾಕಿ 1 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

* ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ, ಜೀರಿಗೆ ಹಾಕಿ, ನಂತರ ಚಕ್ಕೆ-ಲವಂಗ ಹಾಕಿ 2 ನಿಮಿಷ ಫ್ರೈ ಮಾಡಿ.

* ನಂತರ ಕದಡಿದ ಮೊಸರಿನ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ 5 ನಿಮಿಷ ಕುದಿಸಿ, ನಂತರ ಬೇಯಿಸಿದ ಬೇಳೆ ಹಾಕಿ, ಸಕ್ಕರೆ ಹಾಕಿ ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ ಸೌಟ್ ನಿಂದ ಆಗಾಗ ಆಡಿಸುತ್ತಾ 5 ನಿಮಿಷ ಕುದಿಸಿದರೆ ಗುಜರಾತಿ ಶೈಲಿಯ ದಾಲ್ ಕರಿ ರೆಡಿ.

English summary

Khatta Moong: Gujarati Recipe

This Gujarati khatta moong is special because it has curd which makes it tangy and all the more delicious. If you eat garlic, then you can add some garlic pods to prepare this incredible Indian side dish. Check out the recipe to prepare khatta moong.
X
Desktop Bottom Promotion