For Quick Alerts
ALLOW NOTIFICATIONS  
For Daily Alerts

ಘಮ್ಮೆನ್ನುವ ಮೊಸರು ಬೆಂಡೆಕಾಯಿ ಸಾರು

|

ಈ ಮೊಸರು ಬೆಂಡೆಕಾಯಿ ಸಾರಿನ ರುಚಿ ಒಂದು ಹಿಡಿ ಅನ್ನವನ್ನು ಹೆಚ್ಚೇ ನಿಮ್ಮ ಹೊಟ್ಟೆ ತಲುಪುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಹೈದ್ರಾಬಾದ್ ಶೈಲಿಯ ಅಡುಗೆಯಾಗಿದೆ.

ಘಮ್ಮೆನ್ನುವ ಸುವಾಸನೆ ಹಾಗೂ ಸವಿರುಚಿ ಹೊಂದಿರುವ ಈ ಸಾರನ್ನು ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

Hyderabadi Dahi Bhindi Masala

ಬೇಕಾಗುವ ಸಾಮಾಗ್ರಿಗಳು
ಬೆಂಡೆಕಾಯಿ ಕಾಲು ಕೆಜಿ
ಈರುಳ್ಳಿ1
ಟೊಮೆಟೊ 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಮೊಸರು 1 ಕಪ್
ಸ್ವಲ್ಪ ತೆಂಗಿನ ತುರಿ
ಗೋಡಂಬಿ 6-7
ಗರಂ ಮಸಾಲ 1 ಚಮಚ
ಖಾರದ ಪುಡಿ ( ಖಾರಕ್ಕೆ ತಕ್ಕಷ್ಟು)
ಅರಿಶಿಣ ಪುಡಿ ಅರ್ಧ ಚಮಚ
ಆಮ್ ಚುರ್ ( ಒಣ ಮಾವಿನ ಚೂರು) 1 ಚಮಚ
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ನೀರು 1 ಕಪ್
ಒಗ್ಗರಣೆಗೆ
ಸಾಸಿವೆ
ಜೀರಿಗೆ
ಉದ್ದಿನ ಬೇಳೆ
ಒಣ ಮೆಣಸು 1
ಇಂಗು
ಕರಿ ಬೇವಿನ ಬೆಲೆ
ಎಣ್ಣೆ

ತಯಾರಿಸುವ ವಿಧಾನ:

1. ಬೆಂಡೆಕಾಯಿಯನ್ನು ತೊಳೆದು ಕತ್ತರಿಸಿ. ನಂತರ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಂಡೆ ಕಾಯಿ ಹಾಕಿ ಫ್ರೈ ಮಾಡಿಡಿ.

2. ಗೋಡಂಬಿಯನ್ನು 5 ನಿಮಿಷ ಬಿಸಿ ನೀರಿನಲ್ಲಿ ಹಾಕಿಡಿ. ನಂತರ ತೆಂಗಿನ ತುರಿ ಹಾಕಿ ನುಣ್ಣನೆ ರುಬ್ಬಿ.

3. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, 1 ನಿಮಿಷದ ಬಳಿಕ ಉದ್ದಿನ ಬೇಳೆ,ಜೀರಿಗೆ, ಇಂಗು ಹಾಕಿ, ಒಣ ಮೆಣಸನ್ನು ಮುರಿದು ಹಾಕಿ 1 ನಿಮಿಷ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

4. ಈಗ ರುಬ್ಬಿದ ಗೋಡಂಬಿ ಪೇಸ್ಟ್ ಹಾಕಿ 2 ನಿಮಿಷ ಹುರಿಯಿರಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಪುಡಿ, ಅರಿಶಿಣ ಪುಡಿ ಹಾಕಿ ಮತ್ತೆ 2 ನಿಮಿಷ ಹುರಿಯಿರಿ. ನಂತರ ನಿಧಾನಕ್ಕೆ ಮೊಸರು ಹಾಕಿ,1 ಕಪ್ ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ.

5. ಸಾರು ಕುದಿ ಬರುವಾಗ ಫ್ರೈ ಮಾಡಿದ ಬೆಂಡೆ ಕಾಯಿ ಮತ್ತೆ 5 ನಿಮಿಷ ಕುದಿಸಿ ಉರಿಯಿಂದ ಇಳಿಸಿದರೆ ರುಚಿಯಾದ ಮೊಸರು ಬೆಂಡೆಕಾಯಿ ಸಾರು ರೆಡಿ.

English summary

Hyderabadi Dahi Bhindi Masala | Variety Of Curry Recipe | ಮೊಸರು ಬೆಂಡೆಕಾಯಿ ಸಾರು | ಅನೇಕ ಬಗೆಯ ಸಾರಿನ ರೆಸಿಪಿ

Bhindi masala is a popular recipe. There are a number of versions of the recipe. However here we have a entirely different and delicious vegetarian recipe of bhindi masala with a creamy and tangy twist.
X
Desktop Bottom Promotion