For Quick Alerts
ALLOW NOTIFICATIONS  
For Daily Alerts

ಓಣಂ 2019 ಸಂಭ್ರಮಕ್ಕೆ ಸಾತ್ ಕೊಡುವ-ಎರಿಶೇರಿ ರೆಸಿಪಿ

|

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಾಂಬಾರು ಮತ್ತು ಸಾರು ಹೇಗೆಯೋ ಹಾಗೇ ಕೇರಳದಲ್ಲಿ ಎರಿಶೇರಿ ಅನ್ನದೊಡನೆ ಕಲಸಿ ತಿನ್ನುವ ಊಟದ ಎರಡನೆಯ ಮುಖ್ಯ ಭಾಗ. ಸಾಂಬಾರಿಗೂ ಎರಿಶೇರಿಗೂ ಖಾರದಲ್ಲಿ ಕೊಂಚ ವ್ಯತ್ಯಾಸ ಬಿಟ್ಟರೆ ಇನ್ನುಳಿದಂತೆ ತಯಾರಿಸಲು ಸರಿಸುಮಾರು ಸಾಂಬಾರಿನಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಆದರೆ ವ್ಯತ್ಯಾಸವೆಂದರೆ ಈ ಸಾರಿಸಲ್ಲಿ ಬೇಳೆಯ ಅಗತ್ಯವಿಲ್ಲ. ಬದಲಿಗೆ ಕುಂಬಳಕಾಯಿ ತುರಿಯನ್ನು ಬಳಸಲಾಗುತ್ತದೆ.

ಆದರೆ ರುಚಿಯ ಮಟ್ಟಿಗೆ ಮಾತ್ರ ಸಾಂಬಾರಿಗೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದ ಎರಿಶೇರಿ ಶತಮಾನಗಳಿಂದ ಕೇರಳೀಯರ ಮನೆಗಳ ವಿಶೇಷ ಸ್ವಾದವಾಗಿದ್ದು ಈಗ ನಿಮ್ಮ ಮನೆಯ ಸದಸ್ಯರ ನಾಲಿಗೆಗಳನ್ನೂ ಈಗ ಮೆಚ್ಚಿಸಬಹುದು. ಕೇರಳೀಯರು ಓಣಂ ಹಬ್ಬದ ಪ್ರಯುಕ್ತ ಈ ಸಾರನ್ನು ಓಣಂನ ವಿಶೇಷ ಅಡುಗೆಯ ಒಂದು ಭಾಗವಾಗಿ ಬಡಿಸುತ್ತಾರೆ.

ಈ ಸಾಲಿನ ತಿರು ಓಣಂ 11ರಂದು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ರುಚಿಕರವಾದ ಎರಿಶೇರಿ ಸಾಂಬಾರು ತಯಾರಿಸುವ ವಿಧಾನವನ್ನು ತಿಳಿಸಕೊಡಲಾಗುವುದು. ಬನ್ನಿ, ಓಣಂ ಹಬ್ಬದ ಪ್ರಯುಕ್ತ ಈ ಸ್ವಾದಿಷ್ಟ ಸಾರನ್ನು ಹೇಗೆ ಮಾಡುವುದು ಎಂಬುದನ್ನು ನಾವೂ ಕಲಿಯೋಣ. ಓಣಂಗೆ ಕೇರಳ ಸ್ಪೆಷಲ್ ರೆಸಿಪಿ

ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಕುಂಬಳಕಾಯಿ - ತುರಿದದ್ದು, ಸುಮಾರು ಇನ್ನೂರು ಗ್ರಾಂ
*ಕಾಯಿತುರಿ: ಒಂದು ಕಪ್
*ಅರಿಶಿನ ಪುಡಿ: ಕಾಲು ಟೀ ಚಮಚ
*ಕೆಂಪು ಮೆಣಸು: ನಾಲ್ಕರಿಂದ ಐದು (ಬ್ಯಾಡಗಿ ಮೆಣಸು, ಕಾಶ್ಮೀರಿ ಚಿಲ್ಲಿ ಆದರೆ ಆರು, ಗಿಡ್ಡವಾದ ಖಾರ ಮೆಣಸಾದರೆ ಎರಡೇ ಸಾಕು)
*ಹಸಿಮೆಣಸು: ಒಂದು
*ಸಾಸಿವೆ: ಕಾಲು ಟೀ ಚಮಚ
*ಜೀರಿಗೆ: ಒಂದು ಚಿಕ್ಕ ಚಮಚ
*ಉಪ್ಪು: ರುಚಿಗನುಸಾರ
*ಮೆಣಸಿನ ಪುಡಿ: ಒಂದು ಚಿಕ್ಕ ಚಮಚ
*ಕರಿಬೇವಿನ ಎಲೆ: ಸುಮಾರು ಹತ್ತು
*ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು
*ಎಣ್ಣೆ: ಒಂದು ದೊಡ್ಡ ಚಮಚ

ವಿಧಾನ:
*ಪ್ರೆಶರ್ ಕುಕ್ಕರ್‌ನಲ್ಲಿ ಕೊಂಚ ನೀರು ಹಾಕಿ ತುರಿದ ಕುಂಬಳಕಾಯಿ, ಮೆಣಸಿನ ಪುಡಿ, ಅರಿಸಿನ ಮತ್ತು ಉಪ್ಪು ಹಾಕಿ ಎರಡು ಸೀಟಿ ಬರುವವರೆಗೆ ಬೇಯಿಸಿ
*ಅತ್ತ ಕುಕ್ಕರ್ ಬೇಯುತ್ತಿದ್ದಂತೆ, ಮಿಕ್ಸಿಯ ದೊಡ್ಡ ಜಾರ್‌ನಲ್ಲಿ ಕಾಯಿತುರಿ, ಜೀರಿಗೆ, ಹಸಿಮೆಣಸು ಹಾಕಿ ನುಣ್ಣಗೆ ಅರೆಯಿರಿ.
*ಒಂದು ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಬಳಿಕ ಒಣಮೆಣಸು, ಕರಿಬೇವು ಹಾಕಿ ತಿರುವಿ.
*ಈಗ ಬೇಯಿಸಿದ ಕುಂಬಳ ಕಾಯಿ ಮತ್ತು ಮಸಾಲೆಯನ್ನು ಹಾಕಿ ತಿರುವಿ, ಇನ್ನೂ ಕೊಂಚ ಉಪ್ಪು ಹಾಕಿ.
*ನಿಮಗೆ ಅಗತ್ಯವೆನಿಸಿದಷ್ಟು ಹದಕ್ಕೆ ನೀರು ಹಾಕಿ ಬೇಯಿಸಿ.
*ಸುಮಾರು ಐದು ನಿಮಿಷ ಅಥವಾ ಕುಂಬಳಕಾಯಿ ಬೆಂದಿದೆ ಅನ್ನಿಸುವವರೆಗೆ ಬೇಯಿಸಿ ಕೊತ್ತಂಬರಿ ಸೊಪ್ಪು ಸೇರಿಸಿ ಕೆಳಗಿಳಿಸಿ. ಕೊಂಚ ಕಾಲ ಮುಚ್ಚಳ ತೆರೆದಿಡಿ.
*ಬಿಸಿಬಿಸಿಯಿದ್ದಂತೆಯೇ ಅನ್ನದೊಡನೆ ಬಡಿಸಿ.

ಸಲಹೆ:
*ಇದರಲ್ಲಿ ಮೆಣಸು ಹೆಚ್ಚಾಗಿರುವುದರಿಂದ ಊಟದ ಬಳಿಕ ಮೊಸರು ಅಥವಾ ಮಜ್ಜಿಗೆಯನ್ನು ಕಡ್ಡಾಯವಾಗಿ ಸೇವಿಸಬೇಕು, ಇಲ್ಲದಿದ್ದರೆ ಮರುದಿನದ ಬಹಿರ್ದೆಶೆ ಉರಿ ತರಿಸುತ್ತದೆ.
*ಕೊನೆಯದಾಗಿ ಎರಿಶೇರಿ ಹೇಗೆನ್ನಿಸಿತು?, ಮನೆಯವರಿಗೆ ಇಷ್ಟವಾಯಿತೋ ಎಂದು ನಮಗೆ ತಿಳಿಸಿ.

English summary

Errisheri South Indian Tasty Recipe

Errisheri is a typical Kerala recipe. This is the blend of the all the spices and is very healthy. The main ingredient that we use is the pumpkin. Erreshery is basically similar to a sambar recipe. Errisheri is a very easy recipe, though it is similar to a sambar recipe, there are no lentils that is added to it. The recipe tastes best with rice.
X
Desktop Bottom Promotion