For Quick Alerts
ALLOW NOTIFICATIONS  
For Daily Alerts

ಶಿವರಾತ್ರಿಗಾಗಿ ಸೋರೆಕಾಯಿ ಕೋಫ್ತಾ ಸ್ಪೆಶಲ್ ರೆಸಿಪಿ

|

ಶಿವರಾತ್ರಿಗೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ. ಶಿವರಾತ್ರಿಯಂದು ಮಾಡುವ ಉಪವಾಸವೆಂದರೆ ದಿನಪೂರ್ತಿ ಉಪವಾಸವಿರುವುದು ಎಂದಲ್ಲ. ಹಗಲು - ರಾತ್ರಿ ಮಾಡುವ ಉಪವಾಸ ಇದಾದ್ದರಿಂದ ಶಕ್ತಿಯನ್ನು ಪಡೆಯಲು ಸ್ವಲ್ಪ ಆಹಾರವನ್ನಾದರೂ ವೃತವನ್ನಾಚರಿಸುವವರು ತೆಗೆದುಕೊಳ್ಳಲೇಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿ ಸ್ಪೆಶಲ್: ರುಚಿಕರವಾಗಿರುವ ಸಾಬಕ್ಕಿ ರೆಸಿಪಿ

ವೃತ ಅಥವಾ ಉಪವಾಸದಂದು ಸುಲಭವಾಗಿ ಜೀರ್ಣವಾಗುವ ಕೆಲವೊಂದು ಪದಾರ್ಥಗಳನ್ನು ಹಿಂದೂ ಧರ್ಮ ಉಲ್ಲೇಖಿಸುತ್ತದೆ. ಅವುಗಳೆಂದರೆ ತುಪ್ಪ, ಕಲ್ಲುಪ್ಪು, ಹುರುಳಿ, ಕುಟ್ಟು ಹಿಟ್ಟು, ಈರುಳ್ಳಿ ಬೆಳ್ಳುಳ್ಳಿ ಹಾಕದಿರುವ ತರಕಾರಿ ಪದಾರ್ಥಗಳು ಇತ್ಯಾದಿಗಳು. ಆದರೂ ಕೆಲವೊಂದು ವೃತಗಳಲ್ಲಿ ವೃತಾಧಾರಿಯು ತಯಾರಿಸಿ ಸೇವಿಸುವ ಹಲವಾರು ವೃತದ ಅಡುಗೆಗಳಿದ್ದು ಧಾರ್ಮಿಕ ಆಚರಣೆಗಳಿಗೆ ಅನುಸಾರವಾಗಿವೆ.

Dudhi Kofta Recipe For Shivratri Vrat

ನೀವು ಶಿವರಾತ್ರಿ ವೃತವನ್ನು ಆಚರಿಸುವವರಾಗಿದ್ದರೆ ನಾವಿಂದು ವಿಶೇಷವಾದ ಸೋರೆಕಾಯಿ ಕೋಫ್ತಾ ರೆಸಿಪಿಯನ್ನು ನೀವು ಪ್ರಯತ್ನಿಸಲೆಂದೇ ಇಲ್ಲಿ ನೀಡುತ್ತಿದ್ದೇವೆ. ಇದೊಂದು ಆರೋಗ್ಯಕರ ಮತ್ತು ರುಚಿಕರ ಪರಿಪೂರ್ಣ ಖಾದ್ಯವಾಗಿದೆ. ಸೋರೆಕಾಯಿಯನ್ನು ತುರಿದು ನಂತರ ಬಾಲ್ ರೀತಿ ಅಥವಾ ಕೋಫ್ತಾದಂತೆ ಮಾಡಿ ಟೊಮೇಟೋ ಗ್ರೇವಿಯಲ್ಲಿ ಬೇಯಿಸಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿಗೆ ಸ್ಪೆಷಲ್ ಅಡುಗೆ ಈ ಪ್ಯಾನ್ ಕೇಕ್

ಹಾಗಿದ್ದರೆ ತಡವೇಕೆ ಶಿವರಾತ್ರಿ ವೃತಾಚರಣೆಗಾಗಿ ಈ ವಿಶೇಷ ರೆಸಿಪಿಯನ್ನು ಪ್ರಯತ್ನಿಸಿ.

ಪ್ರಮಾಣ: 4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ತಗಲುವ ಸಮಯ: 30 ನಿಮಿಷಗಳು

ಸಾಮಾಗ್ರಿಗಳು
.ಸೋರೆಕಾಯಿ - (1 ಸಣ್ಣದು, ತುರಿದದ್ದು)
.ಕಡಲೆ ಹಿಟ್ಟು - 2ಸ್ಪೂನ್
.ಶುಂಠಿ ಪೇಸ್ಟ್ - 1ಸ್ಪೂನ್
.ಟೊಮೇಟೋ ಪೂರಿ - 3ಸ್ಪೂನ್
.ಜೀರಿಗೆ ಹುಡಿ - 2ಸ್ಪೂನ್
.ಅರಶಿನ ಹುಡಿ - 2ಸ್ಪೂನ್
.ಮೆಣಸಿನ ಹುಡಿ - 2ಸ್ಪೂನ್
.ಕೊತ್ತಂಬರಿ ಹುಡಿ - 1ಸ್ಪೂನ್
.ಜೀರಿಗೆ ಬೀಜ - 1ಸ್ಪೂನ್
.ರೈಸಿನ್ಸ್ - 1ಸ್ಪೂನ್
.ಇಂಗು - ಸಣ್ಣದು
.ಕಲ್ಲುಪ್ಪು - ರುಚಿಗೆ ತಕ್ಕಷ್ಟು
.ಕರಿಬೇವಿನೆಲೆ - 2 ಸ್ಪೂನ್ (ಕತ್ತರಿಸಿದ್ದು, ಅಲಂಕಾರಕ್ಕಾಗಿ)
.ತುಪ್ಪ - ಹುರಿಯಲು
.ನೀರು - 1/2 ಕಪ್

ಮಾಡುವ ವಿಧಾನ
1. ಸೋರೆಕಾಯಿಯನ್ನು ತುರಿಯಿರಿ ಮತ್ತು ಮಸ್ಲಿನ್ ಬಟ್ಟೆಯಿಂದ ಅದರಲ್ಲಿನ ನೀರನ್ನು ಹಿಂಡಿ ತೆಗೆಯಿರಿ.

2.ಒಮ್ಮೆ ನೀವು ಸೋರೆಕಾಯಿಯಿಂದ ಎಲ್ಲಾ ನೀರನ್ನು ಹಿಂಡಿದ ನಂತರ ಪಕ್ಕದಲ್ಲಿರಿಸಿ.

3.ಪ್ಯಾನ್ ಬಿಸಿಮಾಡಿಕೊಂಡು ಅದರಲ್ಲಿ ಕಡಲೆಹಿಟ್ಟನ್ನು ಹುರಿಯಿರಿ.

4.ನಂತರ ತುರಿದ ಸೋರೆಕಾಯಿಯನ್ನು ಪ್ಯಾನ್‌ಗೆ ಹಾಕಿಕೊಂಡು ಅದರಲ್ಲಿರುವ ಉಳಿದ ನೀರು ಇಂಗುವವರೆಗೆ ಬೇಯಿಸಿ.

5.ನಂತರ ಪ್ಯಾನ್ ಅನ್ನು ಕೆಳಗಿರಿಸಿ ಅದು ತಣ್ಣಗಾಗಲು ಬಿಡಿ.

6.ಸೋರೆಕಾಯಿ ಕೋಫ್ತಾವನ್ನು ಹುರಿಯಲು ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ.

7.ಸೋರೆಕಾಯಿ ಮಿಶ್ರಣ ತಣ್ಣಗಾದಂತೆ, ಜೀರಿಗೆ ಹುಡಿಯನ್ನು ಮಿಶ್ರಣಕ್ಕೆ ಹಾಕಿ, ನಂತರ ಅರಶಿನ ಹುಡಿ, ಮೆಣಸಿನ ಹುಡಿ ಮತ್ತು ಕಲ್ಲುಪ್ಪನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

8.ಸಣ್ಣ ಬಾಲ್‌ಗಳಂತೆ ಮಾಡಿಕೊಂಡು ಸಣ್ಣ ಉರಿಯಲ್ಲಿ ಈ ಬಾಲ್‌ಗಳನ್ನು ತುಪ್ಪದಲ್ಲಿ ಹುರಿಯಿರಿ.

9.ಕೋಫ್ತಾ ಚಿನ್ನದ ಬಣ್ಣಕ್ಕೆ ತಿರುಗುತ್ತಿದ್ದಂತೆ, ಅದನ್ನು ತಟ್ಟೆಗೆ ವರ್ಗಾಯಿಸಿ.

10.ಈಗ ಒಂದು ಸ್ಪೂನ್‌ನಷ್ಟು ತುಪ್ಪವನ್ನು ಬಿಸಿ ಮಾಡಿಕೊಂಡು ಅದಕ್ಕೆ ಜೀರಿಗೆ, ರೈಸನ್ಸ್, ಇಂಗು ಹಾಕಿ ಸ್ವಲ್ಪ ಸಮಯದವರೆಗೆ ಹುರಿಯಿರಿ.

11.ನಂತರ ಶುಂಠಿ ಪೇಸ್ಟ್, ಜೀರಿಗೆ ಹುಡಿ, ಕೊತ್ತಂಬರಿ ಹುಡಿ, ಅರಶಿನ, ಮೆಣಸಿನ ಹುಡಿಯನ್ನು ಹಾಕಿ ಸಣ್ಣ ಉರಿಯಲ್ಲಿ 2-3 ನಿಮಿಷಗಳಷ್ಟು ಕಾಲ ಹುರಿಯಿರಿ.

12.ನಂತರ ಟೊಮೇಟೋ ಪೂರಿಯನ್ನು ಸೇರಿಸಿ ಮತ್ತು 4-5 ನಿಮಿಷಗಳವರೆಗೆ ಬೇಯಿಸಿ.

13.ಕಲ್ಲುಪ್ಪು ಮತ್ತು ನೀರು ಸೇರಿಸಿ. 2 ನಿಮಿಷಗಳ ಕಾಲ ಬೇಯಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸವಿರುಚಿಯ ಸಿಹಿಕುಂಬಳಕಾಯಿಯ ಪಾಯಸ

14.ಇದೀಗ ಹುರಿದ ಕೋಫ್ತಾಗಳನ್ನು ಗ್ರೇವಿಗೆ ಹಾಕಿ ಮತ್ತು ಸಣ್ಣ ಉರಿಯಲ್ಲಿ 3-4 ನಿಮಿಷಗಳ ಕಾಲ ಹಾಗೆ ಇರಲಿ.

15.ಒಮ್ಮೆ ಆದ ನಂತರ, ಉರಿಯನ್ನು ನಿಲ್ಲಿಸಿ ಮತ್ತು ಕರಿಬೇವಿನ ಎಲೆಯಿಂದ ಅಲಂಕರಿಸಿ.

ಶಿವರಾತ್ರಿ ವೃತ ವಿಶೇಷ ಸೋರೆಕಾಯಿ ಕೋಫ್ತಾ ಬಡಿಸಲು ಸಿದ್ಧಗೊಂಡಿದೆ. ಕುಟ್ಟು ಚಪಾತಿ ಅಥವಾ ವೃತದ ಅನ್ನದೊಂದಿಗೆ ಈ ಡಿಶ್ ಅನ್ನು ನೀವು ಸೇವಿಸಬಹುದು.

English summary

Dudhi Kofta Recipe For Shivratri Vrat

Shivratri is just around the corner and many of us will be on a fast. Fasting on Shivratri does not involve staying without food for the entire day. Since it is a day-and-night fast, the person observing it should eat a few things to keep up the energy.
Story first published: Wednesday, February 26, 2014, 11:35 [IST]
X
Desktop Bottom Promotion