For Quick Alerts
ALLOW NOTIFICATIONS  
For Daily Alerts

ಡಾಬಾದ ದಾಲ್ ಕರಿ ಏಕೆ ಅಷ್ಟೊಂದು ರುಚಿಕರ?

|

ಡಾಬಾ ಶೈಲಿಯ ಅಡುಗೆಯ ರುಚಿಯೇ ವಿಭಿನ್ನ. ಅವರು ಮಾಡಿದ ದಾಲ್ ಸಾರಿಗೂ, ನಾವು ಮಾಡುವ ಬೇಳೆ ಸಾರಿಗೂ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಅವರ ಅಡುಗೆಯೇ ವಿಧಾನವೇ ಹಾಗೆ ತಮ್ಮ ಅಡುಗೆಯ ಸ್ವಾದದಿಂದ ಗ್ರಾಹಕರನ್ನು ಮತ್ತೆ-ಮತ್ತೆ ಸೆಳೆಯುವಂತಿರುತ್ತದೆ.

ಡಾಬಾದಲ್ಲಿ ದೊರೆಯುವ ದಾಲ್ ರುಚಿಯನ್ನು ಮನೆಯಲ್ಲಿಯೇ ಮಾಡಿ ತಿನ್ನ ಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ.

Dhaba Ki Dal

ಬೇಕಾಗುವ ಸಾಮಾಗ್ರಿಗಳು
ತೊಗರಿ ಬೇಳೆ ಅರ್ಧ ಕಪ್
ಉದ್ದಿನ ಬೇಳೆ ಅರ್ಧ ಕಪ್
ರಾಜ್ಮಾ ಅರ್ಧ ಕಪ್
ಜೀರಿಗೆ 1 ಚಮಚ
ಕೊತ್ತಂಬರಿ ಪುಡಿ 1 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಟೊಮೆಟೊ 1
ಈರುಳ್ಳಿ1
ಕಸೂರಿ ಮೇತಿ (ಒಣ ಮೆಂತೆ ಎಲೆ) 2 ಚಮಚ
ಎಣ್ಣೆ 2 ಚಮಚ
ತೆಂಗಿನೆಣ್ಣೆ 1 ಚಮಚ
ನೀರು 2 ಕಪ್

ತಯಾರಿಸುವ ವಿಧಾನ:

* ರಾಜ್ಮಾವನ್ನು ಕಮ್ಮಿಯೆಂದರೂ 4 ಗಂಟೆ ನೀರಿನಲ್ಲಿ ನೆನೆ ಹಾಕಿರಬೇಕು.

* ನಂತರ ಅದನ್ನು ತೊಗರಿಬೇಳೆ ಮತ್ತು ಉದ್ದಿನಬೇಳೆ ಜೊತೆ ಹಾಕಿ , 2 ಕಪ್ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ. ನಂತರ ಉರಿಯಿಂದ ಇಳಿಸಿ 5 ನಿಮಿಷ ಇಡಿ.

* ಈಗ ಸಾರು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 2-3 ನಿಮಿಷ ಹುರಿಯಿರಿ, ನಂತರ ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಈಗ ಜೀರಿಗೆ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಮತ್ತೆ 2 ನಿಮಿಷ ಹುರಿಯಿರಿ, ನಂತರ ಟೊಮೆಟೊ ಮತ್ತು ಸ್ವಲ್ಪ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ, ನಂತರ ಬೇಯಿಸಿದ ಬೇಳೆ ಮತ್ತು ರಾಜ್ಮಾ ಮಿಶ್ರಣವನ್ನು ಹಾಶಕಿ ಒಮ್ಮೆ ಸೌಟ್ ನಿಂದ ಆಡಿಸಿ ಪಾತ್ರೆಯ ಬಾಯಿ ಮುಚ್ಚಿ 5-6 ನಿಮಿಷ ಬೇಯಿಸಿ. ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ.

* ನಂತರ ಉರಿಯಿಂದ ಇಳಿಸಿ ಕಸೂರಿ ಮೇತಿಯನ್ನು ಉದುರಿಸಿ, ನಂತರ ಒಮ್ಮೆ ಮಿಕ್ಸ್ ಸ್ವಲ್ಪ ತೆಂಗಿನೆಣ್ಣೆ ಅಥವಾ ಬೆಣ್ಣೆ ಹಾಕಿದರೆ ಡಾಬಾ ಶೈಲಿಯಲ್ಲಿ ದಾಲ್ ಕರಿ ರೆಡಿ.

English summary

Dhaba Ki Dal

Dal can be prepared in a million ways, but dhaba ki dal is definitely special. With just a few spices and three different kinds of legumes make this dal recipe burst with some delicious flavours. It is one of the perfect vegan recipes to try.
X
Desktop Bottom Promotion