For Quick Alerts
ALLOW NOTIFICATIONS  
For Daily Alerts

ಚುಮುಚುಮು ಚಳಿಗೆ-ಬಿಸಿ ಬಿಸಿ ಹಲಸಿನ ಬೀಜದ ರಸಂ

By Jaya subramanya
|

ಋತುಮಾನದ ಹಣ್ಣಾಗಿ ಪ್ರಸಿದ್ಧವಾಗಿರುವ ಹಲಸಿನ ಹಲ್ಲು ಸೆಕೆಗಾಲದಲ್ಲಿ ಹೆಚ್ಚು ಲಭ್ಯ. ಭಾರತದ ಕೆಲವೆಡೆಗಳಲ್ಲಿ ಈ ಹಣ್ಣು ಜುಲೈನಲ್ಲೂ ಲಭ್ಯವಿರುತ್ತದೆ. ಹಲಸಿನ ಹಣ್ಣು ಅತಿಯಾಗಿ ಸೇವನೆ ಮಾಡಿದಲ್ಲಿ ಹೊಟ್ಟೆಯುಬ್ಬರ ಉಂಟಾಗಿ ಮಲಬದ್ಧತೆ ಸಮಸ್ಯೆ ಎದುರಾಗುತ್ತದೆ. ಅದಕ್ಕಾಗಿ ಈ ಹಣ್ಣನ್ನು ಬೇಯಿಸಿ ಖಾದ್ಯಗಳನ್ನು ಸಿದ್ಧಪಡಿಸಿ ಸೇವಿಸುವುದು ವಾಡಿಕೆ. ಹೊರಗಡೆ ಮುಳ್ಳಿನಿಂದ ಕೂಡಿದ ರಚನೆಯನ್ನು ಹೊಂದಿದ್ದರೂ ಒಳಭಾಗದಲ್ಲಿ ಮೃದುವಾದ ಹಣ್ಣನ್ನು ನಮಗೆ ನೀಡುವ ಹಲಸು ಹೊರಗೆ ಕಠೋರವಾಗಿದ್ದರೂ ಒಳಗೆ ಮೃದುವಾಗಿರಬೇಕೆಂಬ ಜೀವನ ಪಾಠವನ್ನು ಕಲಿಸುತ್ತದೆ.

ಪೋಷಕಾಂಶಗಳ ಆಗರವನ್ನೇ ತನ್ನಲ್ಲಿ ತುಂಬಿಕೊಂಡಿರುವ ಈ ಹಣ್ಣಿನಿಂದ ತಯಾರು ಮಾಡದ ತಿಂಡಿಗಳೇ ಇಲ್ಲವೆಂದೇ ಹೇಳಬಹುದು. ಹಲಸಿನ ಹಣ್ಣು ಬೆರಟಿ, ಪಾಯಸ, ಕಾಯಿಯಾದಲ್ಲಿ ಅದರ ಪಲ್ಯ, ಸಾಂಬಾರು, ಹಪ್ಪಳ ಹೀಗೆ ಬಾಯಲ್ಲಿ ನೀರೂರಿಸುವ ತಿಂಡಿಗಳನ್ನು ಮಾಡಿ ಮಳೆಗಾಲಕ್ಕೆ ಸಂಗ್ರಹವಾಗಿರಿಸುವುದು ಹಳ್ಳಿಗಳಲ್ಲಿ ಈಗಲೂ ನಡೆಯುತ್ತಿದೆ.

ಇನ್ನು ಹಲಸಿನ ಬೀಜ ಕೂಡ ತನ್ನದೇ ರುಚಿ ವೈವಿಧ್ಯತೆಯನ್ನು ಪಡೆದುಕೊಂಡು ಖಾದ್ಯ ತಯಾರಿಯಲ್ಲಿ ಮುಂದಿದೆ. ಹಲಸಿನ ಬೀಜವನ್ನು ಕೆಂಡದಲ್ಲಿ ಸುಟ್ಟು ಉಪ್ಪಿನೊಂದಿಗೆ ಸವರಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಹ ಭಾವನೆ ಮನದಲ್ಲಿ ಮೂಡುವುದು ಸಹಜವೇ ಇಂದಿನ ಲೇಖನದಲ್ಲಿ ಹಲಸಿನ ಬೀಜದಿಂದ ತಯಾರಿಸಲಾದ ಬಿಸಿ ಸಾರಿನ ರೆಸಿಪಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದು ನಿಮ್ಮ ಮನೆಮಂದಿ ಇದನ್ನು ಮೆಚ್ಚಿಕೊಳ್ಳುವುದು ಖಂಡಿತ.

ಪ್ರಮಾಣ - 4
*ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು
*ಸಿದ್ಧತೆಗೆ ತಗಲುವ ಸಮಯ - 20 ನಿಮಿಷಗಳು ಸಿಹಿ ಪಾಕಶಾಲೆ: ರುಚಿಕರ ಹಲಸಿನ ಪಾಯಸ

Delicious Jackfruit Rasam Recipe

ಸಾಮಾಗ್ರಿಗಳು
*ಹಲಸಿನ ಹಣ್ಣಿನ ಬೀಜಗಳು - 10 ರಿಂದ 15
*ತುರಿದ ತೆಂಗಿನ ಕಾಯಿ - 1 ಕಪ್
*ಜೀರಿಗೆ - 1/2 ಕಪ್
*ಕೆಂಪು ಮೆಣಸು - 4 ರಿಂದ 5
*ಕೊತ್ತಂಬರಿ ಬೀಜ - 1/2 ಚಮಚ
*ಹುಳಿ - ಲಿಂಬೆ ಗಾತ್ರದಷ್ಟು
*ಬೆಲ್ಲ - 1 ಚಮಚ
*ಅರಿಶಿನ - 1/2 ಚಮಚ
*ಸಾಸಿವೆ - 1/2 ಚಮಚ
*ಈರುಳ್ಳಿ - 1 ಕಪ್
*ಟೊಮೇಟೊ - 1 ಕಪ್
*ಕರಿಬೇವಿನೆಸಳು - 1/2 ಕಪ್
*ಉಪ್ಪು
*ಎಣ್ಣೆ ಈಸಿ ಹಲಸಿನ ಚಿಪ್ಸ್ ಸಂಜೆ ಟೀ ಜೊತೆಗಿರಲಿ

ಮಾಡುವ ವಿಧಾನ
1.ಮೇಲೆ ತಿಳಿಸಿದಂತೆ, ಬಿಸಿಲಿಗೆ ಹಲಸಿನ ಬೀಜವನ್ನು ಒಣಗಿಸಿ (ಹೀಗೆ ಮಾಡುವುದರಿಂದ ಬೀಜದ ಹೊರಕವಚವನ್ನು ಸುಲಭವಾಗಿ ತೆಗೆಯಬಹುದಾಗಿದೆ)
2.ಬೇರೆ ಬೇರೆ ಆಕಾರಗಳಲ್ಲಿ ಬೀಜವನ್ನು ಜಜ್ಜಿ
3.ಈಗ, ಕುಕ್ಕರ್ ತೆಗೆದುಕೊಂಡು ಅದಕ್ಕೆ ಒಣಗಿ ಜಜ್ಜಿದ ಹಲಸಿನ ಬೀಜವನ್ನು ಹಾಕಿರಿ.
4. ಇನ್ನು ನೀರು ಮತ್ತು ಹುಳಿಯನ್ನು ಸೇರಿಸಿ
5. ಈಗ, 4 ರಿಂದ 5 ವಿಶಲ್ ಬರುವವರೆಗೆ ಬೇಯಿಸಿ. ಇದರಿಂದ ಬೀಜ ಮೆತ್ತಗಾಗುತ್ತದೆ.
6. ಕುಕ್ಕರ್ ತಣ್ಣಗಾದೊಡನೆ, ಲಿಡ್ ತೆಗೆಯಿರಿ.
7.ಬೀಜ ಮೆತ್ತಗಾಗಿದೆ ಎಂಬುದನ್ನು ಖಾತ್ರಿಪಡಿಸಿ ನಂತರ ಬದಿಗೆ ತೆಗೆದಿಡಿ.
8.ತಳ ಆಳವಿರುವ ಪಾತ್ರೆಯನ್ನು ತೆಗೆದುಕೊಂಡು, ಬಿಸಿಯಾದೊಡನೆ ಜೀರಿಗೆ, ಕೊತ್ತಂಬರಿ ಮತ್ತು ಕೆಂಪು ಮೆಣಸನ್ನು ಹಾಕಿರಿ
9. ಚೆನ್ನಾಗಿ ಇವನ್ನು ಹುರಿದುಕೊಳ್ಳಿ
10.ಹುರಿದ ಸಾಮಾಗ್ರಿಗಳನ್ನು ಪಕ್ಕದಲ್ಲಿಡಿ. ಇದಕ್ಕೆ ಹುಳಿ, ಬೆಲ್ಲ ಮತ್ತು ಕಾಯಿಯನ್ನು ಸೇರಿಸಿ ರುಬ್ಬಿಕೊಳ್ಳಿ.
11. ಮಿಕ್ಸಿ ಜಾರಿಗೆ, ಬೇಯಿಸಿದ 4, 5 ಹಲಸಿನ ಬೀಜವನ್ನು ಸೇರಿಸಿ
12. ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ
13.ಈಗ, ದೊಡ್ಡ ಪಾತ್ರೆಯನ್ನು ತೆಗೆದುಕೊಳ್ಳಿ, ಇದಕ್ಕೆ ಎಣ್ಣೆ ಹಾಕಿ ನಂತರ ಸ್ವಲ್ಪ ಸಾಸಿವೆ, ಈರುಳ್ಳಿ ಮತ್ತು ಟೊಮೇಟೊವನ್ನು ಹಾಕಿ. ಚೆನ್ನಾಗಿ ಹುರಿದುಕೊಳ್ಳಿ
14.ಈಗ, ಪಾತ್ರೆಗೆ ರುಬ್ಬಿದ ಮಸಾಲೆಯನ್ನು ಹಾಕಿ ನಂತರ ಉಪ್ಪು ಹಾಕಿಕೊಳ್ಳಿ, ನಂತರ, ಪಾತ್ರೆಗೆ ನೀರು ಬೆರೆಸಿ, ಚೆನ್ನಾಗಿ ರಸಂ ಅನ್ನು ಕುದಿಸಿ
15.ನಂತರ ಕೊತ್ತಂಬರಿ ಸೊಪ್ಪನ್ನು ರಸಂಗೆ ಹಾಕಿ ಅಲಂಕರಿಸಿಕೊಳ್ಳಿ.

ಈಗ ಸಿದ್ಧಗೊಂಡ ಬಿಸಿ ಬಿಸಿ ಹಲಸಿನ ಬೀಜದ ಸಾರನ್ನು ಅನ್ನ ಮತ್ತು ತುಪ್ಪದೊಂದಿಗೆ ಕಲಸಿ ಸವಿಯಿರಿ. ನಿಜಕ್ಕೂ ಈ ಅನೂಹ್ಯ ಸ್ವಾದವುಳ್ಳ ರಸಂ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ.

English summary

Delicious Jackfruit Rasam Recipe

Jackfruit is the most delicious fruit that you have to try! This juicy fruit never allows us stop with just one bite! Since it is a seasonal fruit, it is available during the summer season until the month of July in some parts of India. Have a look at this easy jackfruit rasam recipe that can tantalise your taste buds for sure.
X
Desktop Bottom Promotion