For Quick Alerts
ALLOW NOTIFICATIONS  
For Daily Alerts

ಕೇವಲ 6 ಹಂತಗಳಲ್ಲಿ ರುಚಿಕರವಾದ ಆಲೂ ಕ್ಯಾಪ್ಸಿಕಂ ಕರಿ ರೆಸಿಪಿ

|

ಚಳಿಗಾಲ ಇನ್ನೇನು ಶುರುವಾಗಿಯೇ ಬಿಟ್ಟಿತು. ಈ ಚಳಿಗಾಲದಲ್ಲಿ ನಿಮ್ಮ ನಾಲಿಗೆಯನ್ನು ತಣಿಸುವ ರುಚಿಕರ ತರಕಾರಿ ಸಾರು ಮಾಡಿಕೊಳ್ಳುವ ಬಯಕೆ ನಿಮಗಾಗಿಲ್ಲವೆ. ಕ್ಯಾರೆಟ್, ಮೂಲಂಗಿ, ಕ್ಯಾಪ್ಸಿಕಂ (ದಪ್ಪ ಮೆಣಸಿನ ಕಾಯಿ), ಹಸಿರು ಬಟಾಣಿ, ಬೀಟ್‍ರೂಟ್, ಎಲೆಕೋಸು, ಹೂಕೋಸು ಹೀಗೆ ತರಹೇವಾರಿ ತರಕಾರಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಯಾವುದನ್ನು ಆರಿಸಿಕೊಳ್ಳುವುದು ಮತ್ತು ಯಾವುದನ್ನು ಬಿಡುವುದು ಎಂದು ನಿಮಗೆ ಆಲೋಚನೆಯಾಗಿರಬಹುದು.

ಬನ್ನಿ ಇಂದು ನಾವು ದಪ್ಪ ಮೆಣಸಿನಕಾಯಿ ಅಂದರೆ ಕ್ಯಾಪ್ಸಿಕಂನಿಂದ ಶುರು ಮಾಡೋಣ. ಇದು ಈ ಚಳಿಗಾಲಕ್ಕೆ ಹೇಳಿ ಮಾಡಿಸಿದಂತಹ ತರಕಾರಿಯಾಗಿದೆ. ಇದನ್ನು ಬೇರೆ ಬೇರೆ ಶೈಲಿಯಲ್ಲಿ ಮಾಡಿಕೊಂಡು ತಿನ್ನಬಹುದು. ಬೇರೆ ತರಕಾರಿಗಳ ಜೊತೆಗೂ ಸಹ ಮಾಡಿಕೊಂಡು ತಿನ್ನಬಹುದು. ಇಲ್ಲವಾದಲ್ಲಿ ಚೈನೀಸ್ ಸಾಸ್ ಜೊತೆಗೆ ಅಥವಾ ಸಾರಿನ ರೂಪದಲ್ಲಿ ಸಹ ಮಾಡಿಕೊಂಡು ತಿನ್ನಬಹುದು ಹೇಗೆ ಮಾಡಿಕೊಂಡು ತಿಂದರು ಇದರ ರುಚಿ ಅಮೋಘವಾಗಿರುತ್ತದೆ.

ಇಂದು ನಾವು ಕ್ಯಾಪ್ಸಿಕಂ ಕರಿಯನ್ನು ಕೇವಲ 6 ಹಂತಗಳಲ್ಲಿ ಮಾಡಿಕೊಳ್ಳುವುದು ಹೇಗೆಂದು ತಿಳಿಸುತ್ತಿದ್ದೇವೆ. ಬನ್ನಿ ಕೇಳಿದ ಕೂಡಲೆ ನಿಮ್ಮ ರುಚಿ ಗ್ರಂಥಿಗಳು ವಾವ್ ಎಂದು ಲಾಲಾರಸವನ್ನು ಉತ್ಪಾದಿಸಿರಬೇಕಲ್ಲವೆ. ಬನ್ನಿ ತಡಮಾಡದೆ ಅದನ್ನು ತಯಾರಿಸುವುದು ಹೇಗೆಂದು ತಿಳಿದುಕೊಳ್ಳೋಣ. ಊಟದ ಸವಿಯನ್ನು ಹೆಚ್ಚಿಸುವ ರುಚಿಕರ ಆಲೂಗಡ್ಡೆ ಬೀನ್ಸ್ ಪಲ್ಯ

ಪ್ರಮಾಣ: 3 ಜನರಿಗೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ: 10 ನಿಮಿಷಗಳು
ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ನಿಮಗೆ ಬೇಕಾದ ಪದಾರ್ಥಗಳು
*ಆಲೂಗಡ್ಡೆಗಳು- 4 (ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಿ)
*ಕ್ಯಾಪ್ಸಿಕಂ - 3 (ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಿ)
*ಈರುಳ್ಳಿ - 1 (ಕತ್ತರಿಸಿದಂತಹುದು)
*ಟೊಮೇಟೊಗಳು - 2 (ಕತ್ತರಿಸಿದಂತಹುದು)
*ಬೆಳ್ಳುಳಿ - 5 pods (ಕತ್ತರಿಸಿದಂತಹುದು)
*ಅರಿಶಿಣ ಪುಡಿ - 1 ಟೀ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಜೀರಿಗೆ ಪುಡಿ - 2 ಟೀ.ಚಮಚ
*ಗರಂ ಮಸಾಲ ಪುಡಿ - 1 ಟೀ.ಚಮಚ
*ಜೀರಿಗೆ - 1 ಟೀ.ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಕೊತ್ತಂಬರಿ ಸೊಪ್ಪು - 2 ಟೀ.ಚಮಚ (ಕತ್ತರಿಸಿದಂತಹುದು, ಅಲಂಕಾರಕ್ಕೆ)
*ಎಣ್ಣೆ- 2 ಟೀ.ಚಮಚ
* ನೀರು - 1 ಕಪ್ ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ

ವಿಧಾನ
1. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ ಮತ್ತು ಅದಕ್ಕೆ ಜೀರಿಗೆಯನ್ನು ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ. ಇದನ್ನು ಒಂದು ನಿಮಿಷ ಉರಿಯಿರಿ, ನಂತರ ಇದಕ್ಕೆ ಈರುಳ್ಳಿಗಳನ್ನು ಸೇರಿಸಿ.
2. ಈರುಳ್ಳಿಗಳು ಹೊಂಬಣ್ಣಕ್ಕೆ ಬಂದ ಮೇಲೆ, ಅದಕ್ಕೆ ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಆಲೂಗಡ್ಡೆಗಳು,ಕ್ಯಾಪ್ಸಿಕಂ ಅನ್ನು ಬೆರೆಸಿ. 4-5 ನಿಮಿಷಗಳ ಕಾಲ ಬೇಯಿಸಿ.
3. ನಂತರ, ಇದಕ್ಕೆ ಕತ್ತರಿಸಿದ ಟೊಮೇಟೊವನ್ನು ಮತ್ತು ಉಪ್ಪನ್ನು ಸೇರಿಸಿ. ಮಧ್ಯಮ ಗಾತ್ರದ ಉರಿಯಲ್ಲಿ 4-5 ನಿಮಿಷಗಳ ಕಾಲ ಬೇಯಿಸಿ.


4. ಇದಕ್ಕೆ ಒಂದು ಕಪ್ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪಾತ್ರೆಯನ್ನು 5-6 ನಿಮಿಷಗಳ ಕಾಲ ಮುಚ್ಚಿ, ಬೇಯಿಸಿ.
5. ತರಕಾರಿಗಳೆಲ್ಲ ಬೆಂದ ಮೇಲೆ, ಮುಚ್ಚಳವನ್ನು ತೆಗೆಯಿರಿ, ಅದರ ಮೇಲೆ ಗರಂ ಮಸಾಲವನ್ನು ಚಿಮುಕಿಸಿ.
6. ಈಗ ಉರಿಯನ್ನು ಆರಿಸಿ, ಕರಿಯ ಮೇಲೆ ಕೊತ್ತಂಬರಿಯ ಸೊಪ್ಪನ್ನು ಚಿಮುಕಿಸಿ, ಅಲಂಕಾರಿಕವಾಗಿ ಕಾಣುವಂತೆ ಮಾಡಿ. ಈಗ ನಿಮ್ಮ ಮುಂದೆ ರುಚಿಕರವಾದ ಆಲೂ ಕರಿ ತಯಾರಾಗಿದೆ. ಇದನ್ನು ನಿಮ್ಮ ಪ್ರೀತಿ ಪಾತ್ರರಿಗೆ ರೋಟಿ ಅಥವಾ ಪರೋಟದ ಜೊತೆಗೆ ಬಡಿಸಿ.

ಪೋಷಕಾಂಶಗಳ ಪ್ರಮಾಣ
ಆಲೂ ಕ್ಯಾಪ್ಸಿಕಂ ಕರಿಯಲ್ಲಿ ವಿಟಮಿನ್ ಎ ಮತ್ತು ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದರಲ್ಲಿ ಕೊಬ್ಬಿನಂಶ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಡಯಟ್ ಮಾಡುವವರಿಗೆ ಇದು ಹೇಳಿ ಮಾಡಿಸಿದ ಆಹಾರವಾಗಿದೆ.

ಅಡುಗೆ ಮಾಡಲು ಸಲಹೆಗಳು
ಈರುಳ್ಳಿಗಳನ್ನು ಉರಿಯುವಾಗ ಒಂದು ಚಿಟಿಕೆ ಉಪ್ಪನ್ನು ಹಾಕಿ. ಇದರಿಂದ ಈರುಳ್ಳಿ ಬೇಗ ಬೇಯುತ್ತದೆ. ನಿಮಗೆ ಅಗತ್ಯವಿದ್ದಲ್ಲಿ ನೀವು ಮತ್ತಷ್ಟು ತರಕಾರಿಗಳನ್ನು ಇದಕ್ಕೆ ಸೇರಿಸಬಹುದು.

English summary

Delicious Aloo Capsicum Curry In 6 Easy Steps

Winter is almost here and the markets are filled with exotic winter vegetables which we all crave for. Carrots, radish, capsicum, green peas, beetroot, cauliflower, cabbage and so many other wonder vegetables of the season have taken over the market.
X
Desktop Bottom Promotion