For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟಕರ ದಾಲ್ ಸಬ್ಜಿಯ ರೆಸಿಪಿ

|

ಬೇಳೆ ಸಾರನ್ನು ಒಬ್ಬೊಬ್ಬರು ಒಂದೊಂದು ರುಚಿಯಲ್ಲಿ ತಯಾರಿಸುತ್ತಾರೆ. ಬರೀ ಬೇಳೆ ಸಾರು ಮಾಡಬಹುದು ಅಥವಾ ಅದಕ್ಕೆ ತರಕಾರಿ ಹಾಕಿ ದಾಲ್ ಸಬ್ಜಿ ಮಾಡಬಹುದು. ತರಕಾರಿ ಹಾಕಿ ಮಾಡುವ ಬೇಳೆ ಸಾರನ್ನು ಸ್ವಲ್ಪ ಗಟ್ಟಿಯಾಗಿ ಮಾಡಬೇಕು.

ಈ ಸಬ್ಜಿಯನ್ನು ಅನ್ನದ ಜೊತೆಯೂ ತಿನ್ನಬಹುದು, ರೊಟ್ಟಿ, ಚಪಾತಿ ಜೊತೆಯೂ ತಿನ್ನಬಹುದು. ಇದನ್ನು ಮಾಡುವ ವಿಧಾನ ಇತರ ಬೇಳೆ ಸಾರುಗಳಂತೆ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

Dal Sabji Recipe, Variety Of Dal Recipe

ಬೇಕಾಗುವ ಸಾಮಾಗ್ರಿಗಳು
1 ಕಪ್ಪು ಹೆಸರು ಬೇಳೆ
1-2 ಈರುಳ್ಳಿ
1 ಚಮಚ ಜೀರಿಗೆ
2 ಚಮಚ ಹುಣಸೆ ಹಣ್ಣಿನ ರಸ
1 ಆಲೂಗಡ್ಡೆ
1 ಕ್ಯಾರೆಟ್
1ಕಪ್ ಸೋರೆ ಕಾಯಿ
1 ಚಮಚ ಬೆಲ್ಲದ ಪಾಕ
1 ಚಮಚ ಮೆಣಸಿನ ಪುಡಿ
1 ಚಮಚ ಸಾಸಿವೆ
1/2 ಚಮಚ ಅರಿಶಿಣ
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
1 ಚಿಟಿಕೆಯಷ್ಟು ಇಂಗು
1 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕರಿಬೇವಿನ ಎಲೆ

ತಯಾರಿಸುವ ವಿಧಾನ:

* ಹೆಸರು ಬೇಳೆಯನ್ನು ಒಂದು ಗಂಟೆ ನೀರಿನಲ್ಲಿ ನೆನೆಹಾಕಿರಬೇಕು. ನಂತರ ಅದನ್ನು ತೊಳೆದು ಅದಕ್ಕೆ ಸೋರೆಕಾಯಿ, ಈರುಳ್ಳಿ , ಆಲೂಗಡ್ಡೆ, ಕ್ಯಾರೆಟ್ ಹಾಕಿ ಸ್ವಲ್ಪ ಅರಿಶಿಣವನ್ನು ಹಾಕಿ , ಸ್ವಲ್ಪ ಉಪ್ಪು ಮತ್ತು ಬೇಯಲು ಅಗತ್ಯವಿರುವ ನೀರಿ ಹಾಕಿ ಬೇಯಿಸಿ.

* ಈಗ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಗ್ಯಾಸ್ ಉರಿಯನ್ನು ಕಮ್ಮಿ ಮಾಡಿ, ಅದಕ್ಕೆ ಸಾಸಿವೆ ಮತ್ತು ಜೀರಿಗೆ ಹಾಕಿ. ಸಾಸಿವೆ ಚಟಾಪಟ ಶಬ್ದ ಮಾಡುವಾಗ ಅದಕ್ಕೆ ಇಂಗು, ಕರಿಬೇವಿನ ಎಲೆ ಮತ್ತು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ನಂತರ ಬೇಯಿಸಿದ ತರಕಾರಿ ಹಾಕಿ. ನಂತರ ಗ್ಯಾಸ್ ಉರಿಯನ್ನು ಹೆಚ್ಚಿಸಿ ಈ ಸಾರನ್ನು 5 ನಿಮಿಷ ಬೇಯಿಸಿ.

* ಈಗ ಹುಣಸೆ ಹಣ್ಣಿನ ರಸ ಮತ್ತು ರುಚಿಗೆ ತಕ್ಕ ಉಪ್ಪು ಮತ್ತು ಖಾರದ ಪುಡಿ ಹಾಕಿ ಕುದಿಸಿ. ನಂತರ ಬೆಲ್ಲದ ಪಾಕವನ್ನು ಹಾಕಿ ಒಮ್ಮೆ ತಿರುಗಿಸಿ ಉರಿಯಿಂದ ಇಳಿಸಿದರೆ ರುಚಿಕರವಾದ ದಾಲ್ ಸಬ್ಜಿ ರೆಡಿ.

English summary

Dal Sabji Recipe | Variety Of Dal Recipe | ದಾಲ್ ಸಬ್ಜಿ ರೆಸಿಪಿ | ಅನೇಕ ಬಗೆಯಲ್ಲಿ ಬೇಳೆಯ ರೆಸಿಪಿ

Dal recipes are quite abundant in the Indian sub-continent. We will prepare variety taste of dal curry. Here is a recipe of dal sabji.
X
Desktop Bottom Promotion