For Quick Alerts
ALLOW NOTIFICATIONS  
For Daily Alerts

ರುಚಿರುಚಿಯಾದ ತೊಗರಿಬೇಳೆ ದಾಲ್

By Manohar.V
|

ನೀವು ತೊಗರಿಬೇಳೆ ದಾಲ್ ಅನ್ನು ಇಷ್ಟ ಪಡುತ್ತೀರಿ ಎಂದಾದರೆ, ಮಧ್ಯಾಹ್ನದ ಊಟಕ್ಕೆ ರುಚಿ ರುಚಿಯಾದ ತೆಂಗಿನ ಕಾಯಿ ಹಾಲು ಮಿಶ್ರಿತ ತೊಗರಿಬೇಳೆ ದಾಲ್ ಅನ್ನು ನೀವು ಪ್ರಯತ್ನಿಸಬಹುದು. ಕೆನೆಭರಿತ ಹಾಗೂ ರುಚಿಕರವಾದ ಈ ತೆಂಗಿನ ಹಾಲಿನ ತೊಗರಿಬೇಳೆ ದಾಲ್ ತರಕಾರಿ ಪ್ರಿಯರಿಗೆ ನಾಲಿಗೆಯ ಹಸಿವನ್ನು ನಿಜವಾಗಿಯೂ ತಣಿಸುತ್ತದೆ. ಅಲ್ಲದೆ ದಾಲ್ ಪಾಕಕ್ಕೆ ಮಿಶ್ರ ಮಾಡುವ ಸಾಮಾಗ್ರಿಗಳು ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ.

ಇಂದು ಮಧ್ಯಾಹ್ನ ನಿಮ್ಮ ಅತೀ ವೆಚ್ಚದ ತರಕಾರಿಗಳಾದ ಪನ್ನೀರ್ ಅಥವಾ ಮಷ್‪ರೂಮ್ ಅನ್ನು ಬದಿಗೆ ಸರಿಸಿರಿ ಹಾಗೂ ಸರಳ ಮತ್ತು ಆರೋಗ್ಯಯುಕ್ತವಾಗಿರುವ ರೆಸೆಪಿಯನ್ನು ಪ್ರಯತ್ನಿಸಿ. ಈ ದಾಲ್ ರೆಸೆಪಿಯು ಮಾಂಸಹಾರಿ ಪ್ರಿಯರ ಬಾಯಿ ಚಪ್ಪರಿಸುವಂತೆ ಮಾಡುತ್ತದೆ ಎಂಬುದು ಅಕ್ಷರಶಃ ಸತ್ಯ.

Coconut Dal Recipe For Vegetarians

ಇನ್ನೇಕೆ ತಡ ? ಬನ್ನಿ ರುಚಿ ರುಚಿಯಾದ ತೆಂಗಿನಕಾಯಿಯ ದಾಲ್ ರೆಸೆಪಿಯನ್ನು ಪ್ರಯತ್ನಿಸೋಣ

ತಯಾರಿಸುವ ಸಮಯ : 15 ನಿಮಿಷಗಳು
ಅಡುಗೆಯ ಸಮಯ : 20 ನಿಮಿಷಗಳು

ಮಾಡುವ ವಿಧಾನ :

ಮಸೂರ್ ತೊಗರಿಬೇಳೆ - 225 ಗ್ರಾಂ

ಕಡಲೆ ಕಾಯಿ ಎಣ್ಣೆ - 2 ಟೀ ಸ್ಪೂನ್

ನೀರುಳ್ಳಿ - 1 ( ಕತ್ತರಿಸಲಾಗಿರುವ)

ಬೆಳ್ಳುಳ್ಳಿ ಮತ್ತು ಲವಂಗ (4 ತುಂಡು)

ಜೀರಿಗೆ ಪುಡಿ- 2 ಟೀ ಸ್ಪೂನ್

ಅರಶಿನ ಹುಡಿ - 2 ಟೀ ಸ್ಪೂನ್

ತೆಂಗಿನಕಾಯಿ ಹಾಲು - 400 ಎಮ್ ಎಲ್

ತರಕಾರಿ ಮಿಶ್ರಣ ರಸ - 400 ಎಮ್ಎಲ್

ಟೊಮ್ಯಾಟೊ ಹಣ್ಣು - 4

ಹೀರೆಕಾಯಿ - 1 (ಕತ್ತರಿಸಿದ)

ನಿಂಬೆ ರಸ - 2 ಚಮಚ

ಕೊತ್ತಂಬರಿ - 3 ಟೀ ಸ್ಪೂನ್ (ಕತ್ತರಿಸಲಾಗಿರುವ)

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

1. ಕಡಲೆ ಕಾಯಿ ಎಣ್ಣೆಯನ್ನು ಒಂದು ಪಾತ್ರೆಗೆ ಹಾಕಿ, ತದನಂತರ ಅದನ್ನು ಒಲೆ ಮೇಲೆ ಇಟ್ಟು ಬಿಸಿ ಆಗುವವರೆಗೆ ಕಾಯಿರಿ. ಇನ್ನು ಕತ್ತರಿಸಲಾಗಿರುವ ನೀರುಳ್ಳಿ ಹಾಗೂ ಹಸಿಮೆಣಸು ಹಾಕಿ ಚೆನ್ನಾಗಿ ಹುರಿಯಿರಿ

2. ಇನ್ನೊಂದು ಪಾತ್ರೆಯಲ್ಲಿ, ತೊಗರಿಬೇಳೆಯನ್ನು ಸಾಕಷ್ಟು ಪ್ರಮಾಣದ ನೀರಿನಿಂದ ಮುಳುಗಿಸಿಕೊಳ್ಳಿ. ಈರುಳ್ಳಿ ಮತ್ತು ಇತರ ಮಸಾಲೆ ಸಾಮಾಗ್ರಿಗಳನ್ನು ನೀವು ಬೇಯಿಸುವವರೆಗೆ ಬೇಳೆ ನೆನೆಯಲಿ.

3. ಪಾತ್ರೆಗೆ ಈಗ ಬೆಳ್ಳುಳ್ಳಿ, ಶುಂಠಿ, ಜೀರಿಗೆ ಮತ್ತು ಅರಿಶಿನ ಪುಡಿಯನ್ನು ಹಾಕಿ. ಸಣ್ಣ ಉರಿಯಲ್ಲಿ, ಸಾಮಾಗ್ರಿಗಳನ್ನು ಹುರಿಯಿರಿ. ಚಪ್ಪಟೆ ಚಮಚದಲ್ಲಿ ಚೆನ್ನಾಗಿ ಕದಡಿ.

4. ಸಾಮಾಗ್ರಿಗಳನ್ನು ಚೆನ್ನಾಗಿ ಹುರಿದ ನಂತರ ನೆನೆಸಿದ ತೊಗರಿಬೇಳೆಯನ್ನು ನೀರಿಲ್ಲದಂತೆ ಮಿಶ್ರ ಮಾಡಿ. ಇದೀಗ ತೆಂಗಿನಕಾಯಿ ಹಾಲು, ತರಕಾರಿ ಮಿಶ್ರಣ ರಸವನ್ನು ಬೇಳೆಗೆ ಸೇರಿಸಿ. ಸ್ವಲ್ಪ ನೀರು ಹಾಕಿ ಅದನ್ನು ಕುದಿಸಿ.

5. ಮಂದ ಉರಿಯಲ್ಲಿ ಮಿಶ್ರಣವನ್ನು ಚೆನ್ನಾಗಿ ಬೇಯಲು ಬಿಡಿ ಮುಚ್ಚಳವನ್ನು ಮುಚ್ಚಿ.

6. ಬೇಳೆ ಕುದಿಯುತ್ತಿರುವಾಗ ಹೆಚ್ಚಿದ ಟೊಮೇಟೊವನ್ನು ನೀರನ್ನು ಹಾಕಿ. ಸ್ವಲ್ಪ ಹೊತ್ತು ಹಾಗೆ ಬಿಡಿ ತದನಂತರ ಒಣಗಿದ ಸೌಟಲ್ಲಿ ಟೊಮೇಟೊವನ್ನು ಹೊರತೆಗೆದು ತಣ್ಣೀರಿನಲ್ಲಿ ನೆನೆಸಿಡಿ. ಟೊಮೇಟೊ ಸಿಪ್ಪೆಯನ್ನು ಬಿಡಿಸಿ.

7. ಬೇಳೆಯಿರುವ ಪಾತ್ರೆಗೆ ಲಿಂಬೆ ರಸದೊಂದಿಗೆ ಟೊಮೇಟೊಗಳನ್ನು ಹಾಕಿ. 10 ನಿಮಿಷಗಳಿಗಾಗಿ ಬೇಯಲು ಬಿಡಿ. ಹೀರೆಕಾಯಿಯನ್ನು ಸೇರಿಸಿ 10 ನಿಮಿಷ ಬೇಯಲು ಬಿಡಿ.

8. ಬೇಳೆ ದಪ್ಪಗಾದಂತೆ ಮತ್ತು ದೊಡ್ಡದಾದಂತೆ, ರುಚಿ ನೋಡಿ ಬೇಕಿದ್ದಲ್ಲಿ ಒಗ್ಗರಣೆ ಮಾಡಿ, ಬಡಿಸುವ ಮುನ್ನ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಮಿಶ್ರ ಮಾಡಿ.

ನಿಮ್ಮ ಸತ್ವಪೂರ್ಣ ಹಾಗೂ ರುಚಿಯಾದ ತೆಂಗಿನ ಹಾಲಿನ ದಾಲ್ ಸವಿಯಲು ಸಿದ್ಧವಾಗಿದೆ. ತುಪ್ಪದೊಂದಿಗೆ ಘಮಘಮಿಸುವ ದಾಲ್ ಅನ್ನು ಅನ್ನದೊಂದಿಗೆ ಈ ಮಧ್ಯಾಹ್ನ ಸವಿಯಿರಿ.

Story first published: Saturday, December 21, 2013, 11:11 [IST]
X
Desktop Bottom Promotion