For Quick Alerts
ALLOW NOTIFICATIONS  
For Daily Alerts

ಇದು ಬಟಾಣಿಯನ್ನು ರುಬ್ಬಿ ಮಾಡುವ ಸಾರು

|

ಬಟಾಣಿಯನ್ನು ರುಬ್ಬಿ ಮಾಡುವ ಸಾರಿನ ರುಚಿ ನೋಡಿದ್ದೀರಾ? ಇಲ್ಲಾಂದರೆ ಈ ರೆಸಿಪಿಯತ್ತ ಒಮ್ಮೆ ಕಣ್ಣಾಡಿಸಿ.

ಬಟಾಣಿ ಹಾಕಿ ಮಾಡಿದ ಯಾವುದೇ ಸಾರಾಗಿರಲಿ ರುಚಿಯಾಗಿರುತ್ತೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದೇ ಬಟಾಣಿಯನ್ನು ರುಬ್ಬಿ ಮಾಡುವ ಸಾರು ಮಾಮೂಲಿ ಬಟಾಣಿ ಸಾರಿಗಿಂತ ಹೆಚ್ಚು ಸ್ವಾದಿಷ್ಟಕರ. ಉತ್ತರ ಭಾರತದ ಕಡೆ ಈ ರೀತಿಯ ಸಾರು ಚಿರಪರಿಚಿತ, ಆದರೆ ಕರ್ನಾಟಕದಲ್ಲಿ ರುಬ್ಬಿ ಮಾಡುವ ಬಟಾಣಿ ಸಾರಿನ ಪರಿಚಯ ಅನೇಕರಿಗೆ ಇರುವುದಿಲ್ಲ.

ಸಾರಿನ ರುಚಿ ನೋಡಬಯಸುವವರಿಗಾಗಿ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಹಸಿ ಬಟಾಣಿ 1 ಕಪ್
ಆಲೂಗಡ್ಡೆ 2
ಈರುಳ್ಳಿ1
ಟೊಮೆಟೊ 1
ಬೆಳ್ಳುಳ್ಳಿ ಎಸಳು 5-6
ಸ್ವಲ್ಪ ಶುಂಠಿ
ಹಸಿ ಮೆಣಸಿನಕಾಯಿ 2-3
ಅರಿಶಿಣ ಪುಡಿ 1 /2 ಚಮಚ
ಕರಿ ಮೆಣಸಿನ ಪುಡಿ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಗರಂ ಮಸಾಲ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಸಕ್ಕರೆ ಅರ್ಧ ಚಮಚ

ಒಗ್ಗರಣೆಗೆ
ಸಾಸಿವೆ ಅರ್ಧ ಚಮಚ
ಕರಿ ಮೆಣಸು 4-5
ಸ್ವಲ್ಪ ಕರಿ ಬೇವಿನ ಎಲೆ
ಇಂಗು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

* ಹಸಿ ಬಟಾಣಿಯನ್ನು ತರಿತರಿಯಾಗಿ ರುಬ್ಬಿ ಒಂದು ಪಾತ್ರೆಯಲ್ಲಿ ಹಾಕಿಡಿ.

* ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಪುಡಿ, ಕರಿ ಮೆಣಸಿ ಪುಡಿ ಹಾಕಿ ನುಣ್ಣನೆ ರುಬ್ಬಿ.

* ಈಗ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಅದರಲ್ಲಿ ಕತ್ತರಿಸಿದ ಆಲೂಗಡ್ಡೆ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು, ಅದನ್ನು ಒಂದು ಬಟ್ಟಲಿನಲ್ಲಿ ಹಾಕಿಡಿ.

* ಈಗ ಪಾತ್ರೆಗೆ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ನಂತರ ಕರಿಬೇವಿನ ಎಲೆ, ಕಾಳು ಮೆಣಸು ಮತ್ತು ಇಂಗು ಹಾಕಿ 2 ನಿಮಿಷ ಹುರಿದು, ಕತ್ತರಿಸಿದ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.

* ನಂತರ ರುಬ್ಬಿದ ಮಸಾಲೆ ಹಾಕಿ, ನಂತರ ತರಿತರಿಯಾಗಿ ರುಬ್ಬಿದ ಬಟಾಣಿ ಹಾಕಿ ರುಚಿಗೆ ತಕ್ಕ ಉಪ್ಪು ಮತ್ತು ಅರಿಶಿಣ ಹಾಕಿ 1/4 ಕಪ್ ನೀರು ಸೇರಿಸಿ ಕುದಿಸಿ. ಈಗ ಆಲೂಗಡ್ಡೆ ಮತ್ತು ಗರಂ ಮಸಾಲ ಹಾಕಿ 8-10 ಬೇಯಿಸಿ( ಆಗಾಗ ಸೌಟ್ ನಿಂದ ತಿರುಗಿಸಲು ಮರೆಯಬೇಡಿ).

* ಮಿಶ್ರಣ ಬೆಂದ ಮೇಲೆ, ಸಕ್ಕರೆ ಹಾಕಿ 2 ನಿಮಿಷ ಬೇಯಿಸಿ, ಸಾರಿಗೆ ಉಪ್ಪು ಸರಿಯಾಗಿದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ ರುಚಿಕರವಾದ ರುಬ್ಬಿದ ಹಸಿ ಬಟಾಣಿ ಸಾರು ರೆಡಿ.

English summary

Coarsely Grinded Peas Curry | Variety Of Curry Recipe | ಇದು ಬಟಾಣಿಯನ್ನು ರುಬ್ಬಿ ಮಾಡುವ ಸಾರು | ಅನೇಕ ಬಗೆಯ ಸಾರಿನ ರೆಸಿಪಿ

I would like to dedicate this peas nimona recipe to my mom. This dish comprises of potatoes in a gravy of ground peas. It is very easy to make if you follow this recipe
X
Desktop Bottom Promotion