For Quick Alerts
ALLOW NOTIFICATIONS  
For Daily Alerts

ಕಡಲೆ ಸಾರು-ಜೈನ್ ರೆಸಿಪಿ

|

ಇದೊಂದು ಜೈನ್ ಶೈಲಿಯ ಅಡುಗೆಯಾಗಿದೆ. ಕಡಲೆ ಸಾರನ್ನು ಅನೇಕ ವಿಧದಲ್ಲಿ ತಯಾರಿಸಬಹುದು. ಇದನ್ನು ತೆಂಗಿನಕಾಯಿ ಹಾಕಿ, ಅಥವಾ ಬರೀ ಮಸಾಲೆ ಪದಾರ್ಥಗಳನ್ನು ಬಳಸಿಯೂ ಮಾಡಬಹುದು. ಇಲ್ಲಿ ನಾವು ಮಿತ ಪದಾರ್ಥಗಳನ್ನು ಬಳಸಿ, ರುಚಿಕರವಾಗಿ ಮಾಡಬಹುದಾದ ಕಡಲೆ ರೆಸಿಪಿ ನೀಡಿದ್ದೇವೆ ನೋಡಿ:

ಜೈನ್ ಶೈಲಿಯ ಕಡಲೆ ರೆಸಿಪಿ

Chole Recipe- Jain Recipe

ಬೇಕಾಗುವ ಸಾಮಾಗ್ರಿಗಳು
* ಕಡಲೆ ಒಂದು ಕಪ್ (ಒಂದು ರಾತ್ರಿ ನೆನೆ ಹಾಕಿದ್ದು)
* ರುಚಿಗೆ ತಕ್ಕ ಉಪ್ಪು
* ಒಣಗಿಸಿದ ನೆಲ್ಲಿಕಾಯಿ 3-4 ಮತ್ತು ಸ್ವಲ್ಪ ಟೀ ಎಲೆ
* ಕರಿ ಬೇವಿನ ಎಲೆ
* ಎಣ್ಣೆ 4 ಚಮಚ
* ಹಸಿ ಮೆಣಸಿನಕಾಯಿ 2
* ಜೀರಿಗೆ 2 ಚಮಚ
* ಟೊಮೆಟೊ 4
* ಕೊತ್ತಂಬರಿ ಪುಡಿ 2 ಚಮಚ
* ಖಾರದ ಪುಡಿ 1 ಚಮಚ
* ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಕಡಲೆಯನ್ನು ಕುಕ್ಕರ್ ಗೆ ಹಾಕಿ, ಬೇಯಲು ತಕ್ಕ ನೀರು ಹಾಕಿ, ಸ್ವಲ್ಪ ಟೀ ಎಲೆ ಮತ್ತು ನೆಲ್ಲಿಯನ್ನು ಕಾಟನ್ ಬಟ್ಟೆಯಲ್ಲಿ ಕಟ್ಟಿ , ರುಚಿಗೆ ತಕ್ಕ ಉಪ್ಪು ಹಾಕಿ 3-4 ವಿಶಲ್ ಬರುವವರೆಗೆ ಬೇಯಿಸಿ.

* ಈಗ 3 ಟೊಮೆಟೊವನ್ನು ಪೇಸ್ಟ್ ಮಾಡಿ, ಉಳಿದ 1 ಟೊಮೆಟೊವನ್ನು ಚಿಕ್ಕದಾಗಿ ಕತ್ತರಿಸಿಡಿ.

* ಜೀರಿಗೆಯನ್ನು ರೊಸ್ಟ್ ಮಾಡಿ, ಸ್ವಲ್ಪ ತಣ್ಣಗಾದ ಬಳಿಕ ಪುಡಿ ಮಾಡಿ.

* ಈಗ ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ , ನಂತರ ಜೀರಿಗೆ ಹಾಕಿ, ಜೀರಿಗೆಯ ಕಲರ್ ಬದಲಾಗುವಾಗ ಮಧ್ಯ ಭಾಗವಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ಕರಿ ಬೇವಿನ ಎಲೆ ಹಾಕಿ, ಟೊಮೆಟೊ ಪೇಸ್ಟ್ ಹಾಕಿ, ಎಣ್ಣೆ ಟೊಮೆಟೊ ಪೇಸ್ಟ್ ಮೇಲೆ ತೇಲುವಷ್ಟು ಹೊತ್ತು ಫ್ರೈ ಮಾಡಿ, ನಂತರ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ, ಬೇಯಿಸಿದ ಕಡಲೆ ಹಾಕಿ ಕೊತ್ತಂಬರಿ ಹಾಕಿ ಮತ್ತೆ 10 ನಿಮಿಷ ಬೇಯಿಸಿ.

* ಸಾರು ಸ್ವಲ್ಪ ಗಟ್ಟಿಯಾಗುವಾಗ ಉಪ್ಪು ಸರಿಯಾಗಿದೆಯೇ ಎಂದು ನೋಡಿ ಉರಿಯಿಂದ ಇಳಿಸಿ.

* ಈಗ ಚಿಕ್ಕ ಪ್ಯಾನ್ ನಲ್ಲಿ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾದಾಗ ಅದರಲ್ಲಿ ಕತ್ತರಿಸಿ ಟೊಮೆಟೊ ಹಾಕಿ, ಅದು ಸ್ವಲ್ಪ ಮೆತ್ತಗಾಗುವವರೆಗೆ ಫ್ರೈ ಮಾಡಿ, ನಂತರ ರೆಡಿಯಾದ ಸಾರಿಗೆ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕಡಲೆ ಸಾರು ರೆಡಿ.
ಇದನ್ನು ಡ್ರೈಯಾಗಿ ಮಾಡಬೇಕೆಂದು ಬಯಸುವುದಾದರೆ ಕಡಲೆಯ ನೀರು ಬಸಿದು ಹಾಕಿ ಕಡಲೆ ಪಲ್ಯ ಮಾಡಿ.

ಹೀಗೆ ಮಾಡಿದ ಸಾರು ಹಾಗೂ ಪಲ್ಯ ಎರಡೂ ರುಚಿಕರವಾಗಿರುತ್ತದೆ.

English summary

Chole Recipe- Jain Recipe

This is jain style chole recipe. This recipe you can prepare as dry or curry. Here we have given the recipe to make curry, for dry after boiling the chole strain and water then prepare.
X
Desktop Bottom Promotion