For Quick Alerts
ALLOW NOTIFICATIONS  
For Daily Alerts

ರುಚಿಯಾದ ಕಡಲೆ ಸಾರಿನ ರೆಸಿಪಿ

|

ಚೆನ್ನಾ ಅಥವಾ ದೊಡ್ಡ ಕಡಲೆ ಸಾರನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ತೆಂಗಿನ ತುರಿಯನ್ನು ಫ್ರೈ ಮಾಡಿ, ರುಬ್ಬಿ ಮಾಡುವ ಕಡಲೆ ಸಾರಿನ ರೆಸಿಪಿ ನೀಡಿದ್ದೇವೆ. ಅನ್ನ ಅಥವಾ ಚಪಾತಿ ಜೊತೆ ತಿನ್ನಲು ಈ ಸಾರು ತುಂಬಾ ರುಚಿಕರವಾಗಿರುತ್ತದೆ.

ಬನ್ನಿ ಇದನ್ನು ಮಾಡುವ ವಿಧಾನದತ್ತ ಕಣ್ಣಾಡಿಸೋಣ:

Chenna Curry Recipe

ಬೇಕಾಗುವ ಸಾಮಾಗ್ರಿಗಳು
ದೊಡ್ಡ ಕಡಲೆ 1 ಕಪ್
ಹಸಿ ಮೆಣಸು 2
ಆಲೂಗಡ್ಡೆ 2
ಟೊಮೆಟೊ 2
ಕೊತ್ತಂಬರಿ ಬೀಜ(2 ಚಮಚ)
ಒಣ ಮೆಣಸು 5-6(ಖಾರಕ್ಕೆ ತಕ್ಕಷ್ಟು)
ಸ್ವಲ್ಪ ಚಕ್ಕೆ
ಲವಂಗ 2-3
ಬೆಳ್ಳುಳ್ಳಿ 4-5
ಈರುಳ್ಳಿ 1/2
ಕರಿ ಬೇವಿನ ಎಲೆ
ತೆಂಗಿನ ತುರಿ ಅರ್ಧ ಕಪ್
ಸಾಸಿವೆ ಅರ್ಧ ಚಮಚ
ಎಣ್ಣೆ 2 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಕಡಲೆಯನ್ನು ಒಂದು ರಾತ್ರಿ ನೀರಿನಲ್ಲಿ ನೆ ನೆ ಹಾಕಿರಬೇಕು. ನಂತರ ಅದನ್ನು ಚೆನ್ನಾಗಿ ತೊಳೆದು, ಕುಕ್ಕರ್ ನಲ್ಲಿ ಹಾಕಿ, ಆಲೂಗಡ್ಡೆ ಮತ್ತು ಟೊಮೆಟೊವನ್ನು ಹಾಕಿ, ಸ್ವಲ್ಪ ಉಪ್ಪು, ಹಸಿ ಮೆಣಸು ಮತ್ತು ಬೇಯಲು ತಕ್ಕ ನೀರು ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ.

* ಈಗ ತೆಂಗಿನ ತುರಿಯನ್ನು ಪ್ಯಾನ್ ನಲ್ಲಿ ಹಾಕಿ 1 ಚಮಚದಷ್ಟು ಎಣ್ಣೆ ಹಾಕಿ, ತೆಂಗಿನ ತುರಿ ಸ್ವಲ್ಪ ಕಂದು ಬಣ್ಣ ಬರುವಷ್ಟು ಹೊತ್ತು ಫ್ರೈ ಮಾಡಿ. ನಂತರ ಅದನ್ನು ಪ್ಲೇಟ್ ನಲ್ಲಿ ಸುರಿದು, ನಂತರ ಸಂಬಾರ ಮತ್ತು ಒಣ ಮೆಣಸನ್ನು ಬಿಸಿ ಮಾಡಿ, ನಂತರ ಚಕ್ಕೆ-ಲವಂಗ ಮತ್ತು ಜೀರಿಗೆಯನ್ನು ಸ್ವಲ್ಪ ರೋಸ್ಟ್ ಮಾಡಿ ತೆಂಗಿನ ತುರಿ ಹಾಕಿದ ತಟ್ಟೆಗೆ ಹಾಕಿ, ತಣ್ಣಗಾದ ಮೇಲೆ ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಗಟ್ಟಿಯಾಗಿ ರುಬ್ಬಿ.

* ಈಗ ಸಾರು ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ನಂತರ ಕರಿ ಬೇವಿನ ಎಲೆ ಮತ್ತು ಬೆಳ್ಳುಳ್ಳಿ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಬೇಯಿಸಿದ ಕಡಲೆ ಮತ್ತು ಇತರ ತರಕಾರಿಗಳನ್ನು ಹಾಕಿ, ರುಬ್ಬಿದ ಮಸಾಲೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, 10 ನಿಮಿಷ ಕುದಿಸಿ. ಮಿಶ್ರಣ ಸ್ವಲ್ಪ ಗ್ರೇವಿ ರೀತಿಯಲ್ಲಿ ಆದಾಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚೆನ್ನಾ ಸಾರು ರೆಡಿ.

English summary

Chenna Curry Recipe

Chenna curry you can prepare variety of way and variety of taste. Here i have given the coconut chenna curry recipe. For this curry you have to use roasted coconut, lets check out how to make this delicious recipe.
X
Desktop Bottom Promotion