For Quick Alerts
ALLOW NOTIFICATIONS  
For Daily Alerts

ಪನ್ನೀರ್ ಮಖಾನಿ-ಉತ್ತರ ಭಾರತದ ಶೈಲಿಯ ಅಡುಗೆ

|

ಚಪಾತಿಗೆ ಪನ್ನೀರ್ ಮಖಾನಿ ಬೆಸ್ಟ್ ಕಾಂಬಿನೇಷನ್. ಈ ಪನ್ನೀರ್ ಮಖಾನಿ ಉತ್ತರ ಭಾರತದ ಶೈಲಿಯ ಅಡುಗೆಯಾಗಿದೆ. ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಅಡುಗೆ ಸಾಮಾಗ್ರಿಗಳು ಹಾಗೂ ಪನ್ನೀರ್ ಬಳಸಿ ಈ ಸಾರನ್ನು ತಯಾರಿಸಬಹುದು.

ಪನ್ನೀರ್ ಮಖಾನಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

Aromatic Paneer Makhani Recipe

ಬೇಕಾಗುವ ಸಾಮಾಗ್ರಿಗಳು

ಪನ್ನೀರ್ 250ಗ್ರಾಂ
ಈರುಳ್ಳಿ 3 (ಪೇಸ್ಟ್ ಮಾಡಿರಬೇಕು)
ಹಸಿ ಮೆಣಸಿನಕಾಯಿ 2
ಮೊಸರು 1/4 ಕಪ್
ಟೊಮೆಟೊ 2 (ಪೇಸ್ಟ್ ಮಾಡಿದ್ದು)
ಜೀರಿಗೆ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಫ್ರೆಶ್ ಕ್ರೀಮ್ 100ಗ್ರಾಂ
ಖಾರದ ಪುಡಿ 1 ಚಮಚ
ಗರಂ ಮಸಾಲ 1 ಚಮಚ
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ (ಅದನ್ನು ಪುಡಿ ಮಾಡಿಡಬೇಕು)
ಏಲಕ್ಕಿ 1 (ಏಲಕ್ಕಿ ಬೀಜವನ್ನೂ ಪುಡಿ ಮಾಡಿರಬೇಕು)
ಲವಂಗ 1
ಪಲಾವ್ ಎಲೆ 1
ಬೆಣ್ಣೆ 2 ಚಮಚ
ತುಪ್ಪ 3 ಚಮಚ
ಎಣ್ಣೆ
ನೀರು 1 ಕಪ್
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ ಫ್ರೈ ಮಾಡಿ ಒಂದು ಪಾತ್ರೆಯಲ್ಲಿ ಹಾಕಿಡಬೇಕು.

* ಈಗ ಸಾರು ಪಾತ್ರೆಯಲ್ಲಿ ತುಪ್ವನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ, ಪಲಾವ್ ಎಲೆ, ಚಕ್ಕೆ ಹಾಗೂ ಏಲಕ್ಕಿ ಪುಡಿ, ಲವಂಗ ಹಾಕಿ ಸೌಟ್ ನಿಂದ ಆಡಿಸಬೇಕು.

* ನಂತರ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ, ನಂತರ ಅರಿಶಿಣ ಪುಡಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ, ನಂತರ ಪೇಸ್ಟ್ ಮಾಡಿದ ಟೊಮೆಟೊ ಹಾಕಿ ಖಾರದ ಪುಡಿ, ಗರಂ ಮಸಾಲ ಪುಡಿ ಹಾಕಿ, ಹಸಿ ಮೆಣಸಿನ ಕಾಯಿ ಸೌಟ್ ನಿಂದ ಎರಡು ನಿಮಿಷ ಆಡಿಸಿ.

* ನಂತರ 1 ಕಪ್ ನೀರು ಹಾಕಿ, 1/4 ಕಪ್ ಮೊಸರು, ಫ್ರೆಶ್ ಕ್ರೀಮ್ ಹಾಕಿ ಚೆನ್ನಾಗಿ ಕುದಿಸಿ. ನಂತರ ಪನ್ನೀರ್ ಹಾಕಿ 5 ನಿಮಿಷ ಕುದಿಸಿ ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪನ್ನೀರ್ ಮಖಾನಿ ರೆಡಿ.

English summary

Aromatic Paneer Makhani Recipe | Variety Of Paneer Recipe | ಸ್ವಾದಿಷ್ಟ ಪನ್ನೀರ್ ಮಖಾನಿ ರೆಸಿಪಿ | ಅನೇಕ ಬಗೆಯ ಪನ್ನೀರ್ ರೆಸಿಪಿ

The rich makhani gravy is prepared with exotic spices, tomatoes, onions and milk or cream. The aroma of spices like cardamom and clove makes it a must try side dish. You can serve paneer makhani with rotis or rice for the main course. Check out the recipe.
X
Desktop Bottom Promotion